ನ್ಯಾನೊ ಕಾರಿಗೆ ಟಾಪ್ ಗೇರ್ ಹಾಕಿದ ಟಾಟಾ

Tata Motors hunt for dealerships
ಜಗತ್ತಿನ ಅಗ್ಗದ, ಹೆಚ್ಚು ಹೈಪ್ ಉಂಟು ಮಾಡಿದ ನ್ಯಾನೊ ಮಾರಾಟ ಹೆಚ್ಚಿಸಲು ದೇಶದ ಬೃಹತ್ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್ ಟಾಪ್ ಗೇರ್ ನಲ್ಲಿ ಪ್ರಯತ್ನಿಸುತ್ತಿದೆ. ಕಂಪನಿಯು ದೇಶದ ಮೂಲೆ ಮೂಲೆಯ ಗ್ರಾಹಕರನ್ನು ತಲುಪಲು ಡೀಲರ್ಷಿಪ್ ಕೇಂದ್ರಗಳನ್ನು ಹೆಚ್ಚಿಸಲು ನಿರ್ಧರಿಸಿದೆ.

ಈಗ ಕಂಪನಿಯು ದೇಶದಲ್ಲಿ 80ರಷ್ಟು ಎಕ್ಸ್ ಕ್ಲೂಸಿವ್ ಶೋರೂಂಗಳನ್ನು ಹೊಂದಿದೆ. ಈ ಸಂಖ್ಯೆಯನ್ನು ಮುಂದಿನ ವರ್ಷದ ಮಾರ್ಚ್ ವೇಳೆಗೆ 300ಕ್ಕೆ ಹೆಚ್ಚಿಸಲು ಕಂಪನಿಯು ಯೋಜಿಸಿದೆ. ಕಂಪನಿಯು ಕೇವಲ ನಗರ ಕೇಂದ್ರಿಕೃತವಾಗದೇ ಪಟ್ಟಣಗಳು, ಸಣ್ಣಪಟ್ಟಣಗಳಲ್ಲೂ ಶೋರೂಂ ಹೆಚ್ಚಿಸಲು ನಿರ್ಧರಿಸಿದೆ.

ಓದಿ: ಹೊಸ ನ್ಯಾನೊ ರಸ್ತೆಗೆ, ಮೈಲೇಜ್ 25.4 ಕಿ.ಮೀ!

ಹೊಸ ಡೀಲರ್ಷಿಪ್ ಕೇಂದ್ರಗಳನ್ನು ತ್ವರಿತವಾಗಿ ತೆರೆಯಲು ಕಂಪನಿ ಪ್ರಯತ್ನಿಸುತ್ತಿದೆ. ಈಗ ಕಂಪನಿಯು ಬೆಂಗಳೂರು ಸೇರಿದಂತೆ ದೇಶಾದ್ಯಂತ ಕೇವಲ 80ರಷ್ಟು ಶೋರೂಂಗಳನ್ನು ಹೊಂದಿದೆ. ಕಂಪನಿಯು ಬಿಗ್ ಬಜಾರ್ ಇತ್ಯಾದಿ ಮಾಲ್ ಗಳಲ್ಲೂ ನ್ಯಾನೊ ಮಾರಾಟಕ್ಕೆ ಯತ್ನಿಸುತ್ತಿದೆ.

ಕಂಪನಿಯು ಈಗ ಒಟ್ಟಾರೆ(ಜಾಗತಿಕ ಮಾರುಕಟ್ಟೆ ಸೇರಿದಂತೆ) 704 ಔಟ್ ಲೆಟ್ಸ್ ಹೊಂದಿದೆ. ಕಳೆದ ತಿಂಗಳು ಕಂಪನಿಯ ನ್ಯಾನೊ ಕಾರು ಮಾರಾಟ ಹಿಂದಿನ ವರ್ಷದ ನವೆಂಬರಿಗಿಂತ ಹನ್ನೆರಡು ಪಟ್ಟು ಏರಿಕೆ ಕಂಡಿತ್ತು. 2011ರ ನವೆಂಬರ್ ತಿಂಗಳಲ್ಲಿ ಕಂಪನಿಯು 6,401 ನ್ಯಾನೊ ಮಾರಾಟ ಮಾಡಿತ್ತು.(ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Friday, December 9, 2011, 10:32 [IST]
English summary
Tata Motors decided to extend Tata Nano dealerships in Country. Company currently, only 80 exclusive Nano dealerships are available in India. Now company planed make it 300 exclusive Nano dealerships by the March of 2012 year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+