ಬಿಡದಿ ಘಟಕಕ್ಕೆ ಟೊಯೊಟಾ 780 ಕೋಟಿ ರು. ಹೂಡಿಕೆ

Toyota Kirloskar planning Rs 780-cr investment Bidadi plant Bangalore
ಬೆಂಗಳೂರು, ನ 21: ಇಲ್ಲಿನ ಬಿಡದಿ ಘಟಕಕ್ಕೆ ಮತ್ತೆ 780 ಕೋಟಿ ರುಪಾಯಿ ಹೂಡಿಕೆ ಮಾಡಲು ಜಪಾನಿನ ಟೊಯೊಟಾ ಮೋಟರ್ ಕಾರ್ಪೊರೇಷನ್(ಟಿಎಂಸಿ)ನ ಭಾರತದ ಅಂಗಸಂಸ್ಥೆ ಟೊಯೊಟಾ ಕಿರ್ಲೊಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್ ಯೋಜಿಸಿದೆ.

ಕಂಪನಿಯು ದೇಶದಲ್ಲಿ ಸುಮಾರು 5 ಸಾವಿರ ಕೋಟಿ ರು. ಹೂಡಿಕೆ ಮಾಡಿದ್ದು, ಕರ್ನಾಟಕ ಸರಕಾರದಿಂದ ಕೆಲವು ಅನುಮತಿಗಾಗಿ ಕಾಯುತ್ತಿದೆ ಎಂದು ರಾಜ್ಯ ಸಂಪುಟದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಂಪನಿಯು ಎರಡು ಉತ್ಪಾದನಾ ಘಟಕ ಹೊಂದಿದೆ. ಮತ್ತು ಬಿಡದಿಯಲ್ಲಿ ಹೊಸ ಎಂಜಿನ್ ಘಟಕ ನಿರ್ಮಿಸಲು ಕೂಡ ಯೋಜಿಸಿದೆ. ಟೊಯೊಟಾ ಕಿರ್ಲೊಸ್ಕರ್ ಈಗ 5 ಸಾವಿರ ಸಿಬ್ಬಂದಿ ಹೊಂದಿದೆ.

"ಬಿಡದಿ ಘಟಕಕ್ಕೆ ಹೆಚ್ಚುವರಿಯಾಗಿ 780 ಕೋಟಿ ರುಪಾಯಿ ಹೂಡಿಕೆ ಮಾಡುವ ಕುರಿತು ಟೊಯೊಟಾ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಸಣ್ಣಕಾರುಗಳಿಗಾಗಿ ಎಂಜಿನ್ ಮತ್ತು ಬಿಡಿಭಾಗ ಘಟಕಕ್ಕಾಗಿ 16 ಎಕರೆ ಭೂಮಿಯನ್ನೂ ಕಂಪನಿ ಬಯಸಿದೆ" ಎಂದು ಕರ್ನಾಟಕ ಬೃಹತ್ ಮತ್ತು ಮಧ್ಯಮ ಉದ್ಯಮ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಕಂಪನಿಯ ಪ್ರಸ್ತಾಪದ ಕುರಿತು ಸರಕಾರದ ಉನ್ನತ ಸಮಿತಿ ಜೊತೆ ಮಾತನಾಡುವುದಾಗಿ ಮುರುಗೇಶ್ ನಿರಾಣಿ ಹೇಳಿದ್ದಾರೆ.

2013ಕ್ಕೆ ಉತ್ಪಾದನಾ ಸಾಮರ್ಥ್ಯವನ್ನು 3.10 ಲಕ್ಷ ಯುನಿಟ್ ಗೆ ಹೆಚ್ಚಿಸುವುದಾಗಿ ಮತ್ತು 898 ಕೋಟಿ ರು. ಹೂಡಿಕೆ ಮಾಡುವುದಾಗಿ ಟೊಯೊಟಾ ಕಿರ್ಲೊಸ್ಕರ್ ಈ ಹಿಂದೆ ತಿಳಿಸಿತ್ತು. ಕಂಪನಿಯು ಮೊದಲ ಘಟಕದಲ್ಲಿ ಇನ್ನೊವಾ ಮತ್ತು ಫಾರ್ಚ್ಯುನರ್ ಉತ್ಪಾದಿಸುತ್ತಿದೆ. ಎರಡನೇ ಘಟಕದಲ್ಲಿ ಎಟಿಯೋಸ್, ಎಟಿಯೋಸ್ ಲಿವಾ ಮತ್ತು ಕೊರೊಲಾ ಆಲ್ಟಿಸ್ ಉತ್ಪಾದಿಸಲಿದೆ.

More from DriveSpark

Article Published On: Monday, November 21, 2011, 17:52 [IST]
English summary
Toyota Kirloskar Motor Private Limited plans to invest another Rs 780 crore at its Bidadi plant( Bangalore).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+