ಕಾರನ್ನು ಓವರ್ ಟೆಕ್ ಮಾಡೋ ಬೈಕ್ ಕ್ರೇಝು

Two Wheeler Sales Remain Ahead Of Car Sales
ಕಾರುಗಳನ್ನು ಹಿಂದಿಕ್ಕಿವುದೆಂದರೆ ಬೈಕ್ ಸವಾರರಿಗೆ ಇಷ್ಟವಾದ ಸಂಗತಿ. ಇದು ಮಾರಾಟಕ್ಕೂ ಅನ್ವಯವಾಗುತ್ತದೆ. ದೇಶದ ಕಾರು ಮತ್ತು ಬೈಕ್ ಮಾರಾಟದಲ್ಲಿ ಈಗಲೂ ಬೈಕ್ ಮಾರಾಟವೇ ಮುಂದಿದೆ.

ನವೆಂಬರ್ ತಿಂಗಳಲ್ಲಿ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆ ಕಳೆದ ವರ್ಷದ ನವೆಂಬರ್ ಗಿಂತ ಶೇಕಡ 23ರಷ್ಟು ಏರಿಕೆ ಕಂಡಿದೆ ಎಂದು ದೇಶದ ವಾಹನ ತಯಾರಿಕ ಒಕ್ಕೂಟ(ಎಸ್ಐಎಎಂ) ವರದಿ ತಿಳಿಸಿದೆ. ಇದೇ ಸಮಯದಲ್ಲಿ ಕಾರು ಮಾರಾಟ ಕೇವಲ ಶೇಕಡ 7ರಷ್ಟು ಏರಿಕೆ ಕಂಡಿದೆ.

ನವೆಂಬರ್ 2011ರಲ್ಲಿ ಒಟ್ಟಾರೆಯಾಗಿ 8.69 ಲಕ್ಷ ದ್ವಿಚಕ್ರವಾಹನ ಮಾರಾಟವಾಗಿದ್ದವು. ಕಳೆದ ವರ್ಷ ಇದೇ ತಿಂಗಳಲ್ಲಿ ಸುಮಾರು 7.08 ಲಕ್ಷ ದ್ವಿಚಕ್ರ ವಾಹನ ಮಾರಾಟವಾಗಿದ್ದವು. ಕಳೆದ ತಿಂಗಳು 1.71 ಕೋಟಿ ಕಾರು ಮಾರಾಟವಾಗಿದ್ದು, 2010ರ ನವೆಂಬರ್ ನಲ್ಲಿ 1.59 ಲಕ್ಷ ಕಾರು ಮಾರಾಟವಾಗಿದ್ದವು. ಹೀಗಾಗಿ ದೇಶದಲ್ಲಿ ಬೈಕ್ ಮಾರಾಟವೇ ಹೆಚ್ಚು.

2011ರ ನವೆಂಬರ್ ತಿಂಗಳಲ್ಲಿ ದೇಶದಲ್ಲಿ ಸುಮಾರು 66,264 ವಾಣಿಜ್ಯ ವಾಹನ ಮಾರಾಟಗೊಂಡಿದ್ದು, ಶೇಕಡ 34.99ರಷ್ಟು ಏರಿಕೆ ಕಂಡಿದೆ. ದೇಶದಲ್ಲಿ ಒಟ್ಟಾರೆ ವಾಹನ ಮಾರಾಟ 1,489,714 ಯುನಿಟ್ ತಲುಪಿದ್ದು ಶೇಕಡ 22.22ರಷ್ಟು ಏರಿಕೆ ದಾಖಲಿಸಿದೆ.

ಪೆಟ್ರೋಲ್ ದರ, ಬಡ್ಡಿದರ ಹೆಚ್ಚಳದ ಹಿನ್ನಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಜನರು ಕಾರು ಖರೀದಿ ನಿರ್ಣಯದಿಂದ ಹಿಂದೆ ಸರಿದಿದ್ದರು. ಹೆಚ್ಚು ಜನರು ಬೈಕ್ ಪ್ರಯಾಣಕ್ಕೆ ತೃಪ್ತಿಪಟ್ಟು, ಬೈಕ್ ಖರೀದಿಯಲ್ಲಿ ತೊಡಗಿದ್ದರು. ಹೀಗಾಗಿ ಬೈಕ್ ಮಾರಾಟ ಗಮನಾರ್ಹವಾಗಿ ಏರಿಕೆ ಕಂಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Thursday, December 8, 2011, 14:40 [IST]
English summary
Two Wheeler Sales Remain Ahead Of Car Sales. The Society of India Automobile Manufacturers (SIAM) in its sales report for November has stead that two wheeler sales in November grew at 23 per cent when compared to November 2010. Car sales on the other hand managed a growth of 7 per cent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+