ಕಾರಿನಲ್ಲಿ ಕಾಣೆಯಾದ ಹತ್ತು ಸಂಗತಿಗಳ ಸವಿಸವಿ ನೆನಪುಗಳು

ರೇಡಿಯೋದ ಸಿಲೋನ್(ಶ್ರೀಲಂಕಾ) ಸ್ಟೇಷನ್ ನಲ್ಲಿ ಮಧ್ಯಾಹ್ಹದ ಒಂದುವರೆ ಗಂಟೆಯ ಕನ್ನಡದ ಹಾಡು ಕೇಳದೇ ಎಷ್ಟೋ ಕಾಲ ಸಂದಿದೆ. ಹಳೆಯ ಸೈಕಲಿನಂತೆ ಹಳೆಯ ವಸ್ತುಗಳನ್ನೆಲ್ಲ ಮೂಲೆಗಿಟ್ಟಿದ್ದೇವೆ ಅಥವಾ ಗುಜಿರಿಗೆ ಹಾಕಿದ್ದೇವೆ.
ಅದಿರಲಿ, ನೋಡಿದಾಗಲೇ ನೂರಾರು ಕವಿತೆಗಳನ್ನು ಉಕ್ಕಿಸುತ್ತಿದ್ದ ಸೀರೆ ಉಟ್ಟ ಅಮ್ಮಣಿಯರು ಸಿಗೋದು ಅಪರೂಪವಾಗಿದ್ದಾರೆ. ಚಿನ್ನಿದಾಂಡು, ಲಗೋರಿ ಆಡುವರಿಲ್ಲ. ಲವ್ ಲೆಟರ್, ಅಮ್ಮನಿಗೊಂದು ಪತ್ರ, ಅಪ್ಪನಿಗೊಂದು ಪತ್ರ ಬರೆಯೋದಿಲ್ಲ. ಅಂಚೆಯಣ್ಣ ಕಾಗದ ತರುತ್ತಿಲ್ಲ. ಜಗತ್ತು ತುಂಬಾ ಸ್ಪೀಡ್ ಆಗಿಬಿಟ್ಟಿದೆ.
ಕಾಲದಂತೆ ಕಾರು ಕೂಡ ಸಾಕಷ್ಟು ಬದಲಾಗಿದೆ. ನೆಹರು, ಗಾಂಧೀಜಿ ಸವಾರಿ ಮಾಡಿದ ಕಾರುಗಳು ಮ್ಯೂಸಿಯಂನಲ್ಲಿವೆ. ಲಾಂದ್ರವಿಡಿದು ಓಡುತ್ತಿದ್ದ ಕಾರುಗಳಿಗೆ ಹೆಡ್ ಲೈಟ್ ಬಂದು ಎಷ್ಟೋ ಕಾಲವಾಗಿದೆ. ಕಾರುಗಳಲ್ಲಿ ಕಾಣೆಯಾಗಿರುವ ಹಳೆಯ ಹತ್ತು ಸಂಗತಿಗಳನ್ನು ಇಲ್ಲಿ ಕೊಡಲಾಗಿದೆ. ನೆನಪಿಸಿಕೊಳ್ಳಿ.


Click it and Unblock the Notifications








