ಕಾರಿನೊಳಗೆ ಕಾಣೆಯಾದ ಸವಿನೆನಪುಗಳ ಕನವರಿಕೆ

ಕಾರಿನ ಡೋರಿಗೆ ಕೀಲಿಕೈ: ಟಾರ್ಚ್ ಹಾಕಿ ಹುಡುಕಿದರೂ ಡೋರಿಗೆ ಕೀಲಿಕೈ ಇರುವ ಕಾರಿಂದು ಸಿಗುವುದು ಅಪರೂಪ. ಕೆಲವು ಬೇಸ್ ಮಾಡೆಲ್ ಕಾರುಗಳಲ್ಲಿ ಮಾತ್ರ ಸಾಂಪ್ರಾದಾಯಿಕ ಕೀಲಿಕೈ ಕಾಣಬಹುದು. ಈಗ ಹೆಚ್ಚಾಗಿ ಬೇಸ್ ಕಾರು ಆವೃತ್ತಿಗಳಿಗೆ ಮಾತ್ರ ಸಾಂಪ್ರದಾಯಿಕ ಕೀಲಿಕೈ ಅವಶ್ಯಕತೆಯಿರುತ್ತದೆ. ಹೆಚ್ಚಿನ ಕಾರುಗಳು ಸೆಂಟ್ರಲ್ ಲಾಕಿಂಗ್ ರಿಸೀವರ್ ಹೊಂದಿವೆ. ಕಾರಿನೊಳಗೆ ಹೋಗಲು, ಹೊರಹೋಗಲು ಕೀಲಿಕೈ ಬೇಕಿಲ್ಲ. ಈ ಹಿಂದೆ ಕೀಲಿಕೈ ಗೊಂಚಲಿನಿಂದ ಕಾರ್ ಡೋರ್ ಕೀಲಿಕೈ ಹುಡುಕಬೇಕಿತ್ತು. ಈಗ ಆ ಕಷ್ಟವಿಲ್ಲ.
ಕಾರಿನೊಳಗೆ ಫೋನ್: ಕಾರಿನೊಳಗೆ ಫೋನ್ ಬಳಸುವುದು ಅಪರಾಧ. ಆದರೆ ಒಂದು ಸಮಯದಲ್ಲಿ ಹೆಚ್ಚಿನವರು ಕಾರಿನೊಳಗೆ ದೊಡ್ಡ ಫೋನ್ ಬಳಸುತ್ತಿದ್ದರು. ಲ್ಯಾಂಡ್ ಲೈನ್ ಇರುವ ಕಾರುಗಳು ಕೂಡ ಈ ಹಿಂದೆ ಇದ್ದವು. ಈಗ ಆ ಸ್ಥಾನವನ್ನು ಬ್ಲೂಟೂಥ್/ಹೆಡ್ ಸೆಟ್ ಆಕ್ರಮಿಸಿಕೊಂಡಿವೆ.
ಚೋಕ್ ಗೆ ಕೋಕ್: ನೀವು ಈಗಲೂ ನಿಮ್ಮ ಕಾರು ಸ್ಟಾರ್ಟ್ ಮಾಡಲು ಚೋಕ್ ಬಳಸುತ್ತಿದ್ದರೆ ನೀವು ತುಂಬಾ ಹಳೆ ಕಾಲದವರು. ಯಾಕೆಂದ್ರೆ ಈಗ ಚೋಕಿಗೆ ಕೋಕ್ ನೀಡಲಾಗಿದೆ. ಈಗ ಹೆಚ್ಚಿನ ಕಾರುಗಳು ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್ ಹೊಂದಿದೆ.
ಕಾರಿನ ಗಾಜು ಏರಿಸೋ ಕಷ್ಟ: ಈಗಿನ ಹೊಸ ಕಾರುಗಳಲ್ಲಿ ಗಾಜಿನ ಕಿಟಿಕಿಯನ್ನು ಹ್ಯಾಂಡಲ್ ತಿರುಗಿಸಿ ಮೇಲೆರಿಸುವ(ಅಥವಾ ಕೆಳಗಿಳಿಸುವ) ಕಷ್ಟವಿಲ್ಲ. ಈಗ ಹೆಚ್ಚಿನ ಕಾರುಗಳು ಎಲೆಕ್ಟ್ರಿಕ್ ವಿಂಡೋಸ್ ಹೊಂದಿವೆ.
ಕಾಗದದ ಮ್ಯಾಪ್: ಒಂದನೊಂದು ಕಾಲದಲ್ಲಿ ದೂರದೂರಿಗೆ ಹೋಗುವಾಗ ಕಾಗದದ ಮ್ಯಾಪ್ ಬಳಸಲಾಗುತ್ತಿತ್ತು. ಈಗ ಪ್ರತಿ ಇಂಚು ಇಂಚು ರಸ್ತೆಯಲ್ಲಿ ಸ್ಪಷ್ಟವಾಗಿ ದಾರಿ ತೋರಿಸುವ ನ್ಯಾವಿಗೇಷನ್ ಸಿಸ್ಟಮ್ ಗಳಿವೆ. ಕಾಗದ ಮ್ಯಾಪ್ ನಲ್ಲಿ ನೋಡುತ್ತ ಸಾಗುವ ಕಷ್ಟವಿಂದು ಕಾಣೆಯಾಗಿದೆ.
ಇನ್ನೈದು ಇಂಟ್ರೆಸ್ಟಿಂಗ್ ವಿಷಯಗಳಿಗೆ ಭಾವಪೂರ್ಣ ವಿದಾಯ ಸಲ್ಲಿಸೋಣ. ಮುಂದಿನ ಪುಟಕ್ಕೆ ಬನ್ನಿ


Click it and Unblock the Notifications








