ಹೊಸ ಷೆವರ್ಲೆ ಕ್ಯಾಪ್ಟಿವಾ ರಸ್ತೆಗೆ, ದರ 18 ಲಕ್ಷ ರು
ನೂತನ ಷೆವರ್ಲೆ ಕ್ಯಾಪ್ಟಿವಾ ಎಸ್‌ಯುವಿ ಟರ್ಬೊ ಶ್ರೇಣಿಯ ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಇದರಲ್ಲಿ ಬೇಸ್ ಆವೃತ್ತಿಯು ಹಳೆಯ ಕ್ಯಾಪ್ಟಿವಾ ಕಾರಿನಲ್ಲಿದ್ದ ಎಂಜಿನನ್ನೇ ಹೊಂದಿದೆ. ಮತ್ತೊಂದು ಆವೃತ್ತಿಯು ಹೊಸ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದು 186.5 ಅಶ್ವಶಕ್ತಿ ಮತ್ತು 424 ಟಾರ್ಕ್ ಪವರ್ ನೀಡುತ್ತದೆ. ಇದು 6 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಹಳೆಯ ಎಂಜಿನ್ 148 ಅಶ್ವಶಕ್ತಿ ಮತ್ತು 320 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
2012 ಕ್ಯಾಪ್ಟಿವಾ ಕಾರು ಬ್ರಾಂಡ್ ನ್ಯೂ ಫಂಟ್ ಎಂಡ್ ವಿನ್ಯಾಸ ಹೊಂದಿದೆ. ಅಂದ್ರೆ ಕಂಪನಿಯು ಇದರ ಸೌಂದರ್ಯ ಹೆಚ್ಚಿಸಲು ಹೆಚ್ಚು ಒತ್ತು ನೀಡಿದೆ. ಇಂಟರಿಯರ್ ಕೂಡ ಮರುವಿನ್ಯಾಸ ಮಾಡಲಾಗಿದೆ. 7 ಸೀಟಿನ ಈ ಕಾರಿನಲ್ಲಿ ಲಗೇಜ್ ಸ್ಥಳಾವಕಾಶವೂ ವಿಶಾಲವಾಗಿದೆ. ಒಟ್ಟಾರೆ ಆರಾಮದಾಯಕ ಸವಾರಿಗೆ ಪೂರಕವಾಗಿದೆ.
ಕ್ಯಾಪ್ಟಿವಾ ಬೇಸ್ ಆವೃತ್ತಿಯು 2 ವೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ಆಯ್ಕೆಯಲ್ಲಿ ದೊರಕುತ್ತದೆ. 2 ಡಬ್ಲ್ಯುಡಿ ಆವೃತ್ತಿ ದರ 18.74 ಲಕ್ಷ ರುಪಾಯಿ ಇದೆ. ಎಡಬ್ಲ್ಯುಡಿ ಆವೃತ್ತಿ ದರ 19.48 ಲಕ್ಷ ರುಪಾಯಿ ಇದೆ. ಟಾಪ್ ಎಂಡ್ ಕ್ಯಾಪ್ಟಿವಾ 2.2 ಎಡಬ್ಲ್ಯುಡಿ ಆವೃತ್ತಿ ದರ 24.59 ಲಕ್ಷ ರುಪಾಯಿ ಇದೆ. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರಗಳಾಗಿವೆ.
2012ರ ಕ್ಯಾಪ್ಟಿವಾ ಆವೃತ್ತಿಗಳಲ್ಲಿ ಸುರಕ್ಷತೆ ಮತ್ತು ಆರಾಮದಾಯಕತೆಯ ಫೀಚರುಗಳು ಹೇರಳವಾಗಿವೆ. ಅಂದರೆ ಕ್ರೂಷ್ ಕಂಟ್ರೋಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಎಸಿ ವೆಂಟ್ಸ್, ಮಳೆ ಸೆನ್ಸಾರ್ ವೈಪರ್ ಮತ್ತು ಸ ನ್ ರೂಫ್ ಗಳಿವೆ. ಸುರಕ್ಷತೆಗಾಗಿ ಎಬಿಎಸ್, ಇಬಿಡಿ ಮತ್ತು 6 ಏರುಬ್ಯಾಗುಗಳಿವೆ.
ನೂತನ ಷೆವರ್ಲೆ ಕ್ಯಾಪ್ಟಿವಾ ಕಾರುಗಳನ್ನು ಸಿಬಿಯು ಹಾದಿ ಮೂಲಕ ಕಂಪನಿಯು ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲಿದೆ (ಸಿಬಿಯು- ಸಂಪೂರ್ಣವಾಗಿ ನಿರ್ಮಿಸಿದ ಯುನಿಟ್). ಇದರ ದರ ಹೆಚ್ಚಳಕ್ಕೆ ಇದೂ ಒಂದು ಕಾರಣವಾಗಿದೆ. ಟಾಪ್ ಎಂಡ್ ಆವೃತ್ತಿಯಲ್ಲಿರುವ 2.2 ಲೀಟರಿನ ಟರ್ಬೊ ಡೀಸೆಲ್ ಎಂಜಿನಿಂದಾಗಿ ಟೊಯೊಟಾ ಫಾರ್ಚ್ಯುನರ್ ಕಾರಿಗೆ ಸಮರ್ಥ ಪೈಪೋಟಿ ನೀಡುವ ನಿರೀಕ್ಷೆಯಿದೆ.


Click it and Unblock the Notifications









