ಚಿತ್ರಕಥೆ: 2013ರ ಹೈಬ್ರಿಡ್ ರೇಂಜ್ ರೋವರ್

By Super

ಟಾಟಾ ಮೋಟರ್ಸ್ ಮಾಲಿಕತ್ವದ ಲ್ಯಾಂಡ್ ರೋವರ್ ತನ್ನ ನಾಲ್ಕನೇ ತಲೆಮಾರಿನ ರೇಂಜ್ ರೋವರ್ ಸರಣಿಯ ಕಾರೊಂದನ್ನು ಪರಿಚಯಿಸಿದೆ. ಅದರ ಹೆಸರು ರೇಂಜ್ ರೋವರ್ ಎಂಕೆ4. ಬನ್ನಿ ಅದರ ಬಗ್ಗೆ ತಿಳಿದುಕೊಳ್ಳೋಣ. ಇದರ ಮಾರಾಟ ಡಿಸೆಂಬರ್ ವೇಳೆಗೆ ಆರಂಭವಾಗುವ ನಿರೀಕ್ಷೆಯಿದೆ. ದರ ಮಾಹಿತಿ ಬಹಿರಂಗವಾಗಿಲ್ಲ.

ಸದ್ಯ ಕಂಪನಿಯು ದೇಶದಲ್ಲಿ ರೇಂಜ್ ರೋವರ್ ಇವೊಕ್, ರೇಂಜ್ ರೋವರ್ ಸ್ಪೋರ್ಟ್, ರೇಂಜ್ ರೋವರ್ ಮತ್ತು ಆರ್ಮೊರ್ಡ್ ರೇಂಜ್ ರೋವರ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಕಂಪನಿಯು ಡೀಸೆಲ್ ಹೈಬ್ರಿಡ್ ರೇಂಜ್ ರೋವರ್ ಪರಿಚಯಿದೆ.

"ನೂತನ ರೇಂಜ್ ರೋವರ್ ಅದ್ದೂರಿ, ಕಾರ್ಯಕ್ಷಮತೆ ಮತ್ತು ಅಸಾಧಾರಣವಾದ ಎಲ್ಲಾ ಭೂಭಾಗಳಿಗೂ ಸೂಕ್ತವಾದ ಲಕ್ಷಣಗಳನ್ನು ಹೊಂದಿದೆ. ಇದು ಹಗುರ ಮತ್ತು ಸದೃಢವಾಗಿದೆ. ಅತ್ಯುತ್ತಮ ಹ್ಯಾಂಡ್ಲಿಂಗ್, ಆರಾಮದಾಯಕತೆ 2013ರ ಲ್ಯಾಂಡ್ ರೋವರಿನಿಂದ ದೊರಕುತ್ತದೆ" ಎಂದು ಕಂಪನಿಯ ಜಾಗತಿಕ ಬ್ರಾಂಡ್ ನಿರ್ದೇಶಕ ಎಡ್ವರ್ಡ್ಸ್ ಹೇಳಿದ್ದಾರೆ.

2013ರ ರೇಂಜ್ ರೋವರ್ ಎಲ್ಲಾ 170 ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಯುರೋಪಿಯನ್ ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿ ನೂತನ ಡೀಸೆಲ್ ಎಲೆಕ್ಟ್ರಿಕ್ ಹೈಬ್ರಿಡ್ ಆವೃತ್ತಿ ದೊರಕಲಿದೆ.

ನೂತನ ಹೈಬ್ರಿಡ್ ಡೀಸೆಲ್ ಕಾರು 3.0 ಲೀಟರಿನ ವಿ6 ಟರ್ಬೊ ಡೀಶೆಲ್ ಎಂಜಿನ್ ಹೊಂದಿದೆ. ಇದು 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಇದು ಎಲೆಕ್ಟ್ರಿಕ್ ಮೋಟರ್ ಮತ್ತು ಒಂದು ಲೀಥಿಯಂ ಐಯಾನ್ ಬ್ಯಾಟರಿ ಪ್ಯಾಕೇಜ್ ಹೊಂದಿದೆ.

ವಿಶೇಷವಾಗಿ ಭಾರತದ ಮಾರುಕಟ್ಟೆಗಾಗಿ ಕಂಪನಿಯು 5.0 ಲೀಟರಿನ ಸೂಪರ್ ಚಾರ್ಜ್ಡ್ ವಿ8 ಪೆಟ್ರೋಲ್ ಆವೃತ್ತಿ ಮತ್ತು 4.4 ಲೀಟರಿನ ಟಿಡಿವಿ8 ಡೀಸೆಲ್ ಆವೃತ್ತಿಯನ್ನು ಪರಿಚಯಿಸಲಿದೆ. ಇವೆರಡೂ ಕಾರುಗಳು ಎಂಟು ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿವೆ.

2013ರ ರೇಂಜ್ ರೋವರ್ ಮುಂಭಾಗ

2013ರ ರೇಂಜ್ ರೋವರ್ ಮುಂಭಾಗ

2013ರ ನಾಲ್ಕನೇ ತಲೆಮಾರಿನ ರೇಂಜ್ ರೋವರ್ ತನ್ನ ಆಕರ್ಷಕ ಲುಕ್ಕಿನಿಂದ ಬೆರಗು ಮೂಡಿಸುತ್ತದೆ. ಮುಂದಿನ ಚಿತ್ರನೋಡಿ.

ವಾಹ್, ಆಫ್ ರೋಡಿಗೂ ಸೈ

ವಾಹ್, ಆಫ್ ರೋಡಿಗೂ ಸೈ

ಹೊಸ ರೇಂಜ್ ರೋವರ್ ಎಲ್ಲ ತರಹದ ರಸ್ತೆಗೂ ಸೂಕ್ತವಾಗಿದೆ. ಆಫ್ ರೋಡ್ ರಸ್ತೆಯಲ್ಲೂ ಅನನ್ಯ ಡ್ರೈವಿಂಗ್ ಅನುಭವ ನೀಡುತ್ತದೆ.

ಐಷಾರಾಮಿ ಇಂಟಿರಿಯರ್ ನೋಡಿರಿ

ಐಷಾರಾಮಿ ಇಂಟಿರಿಯರ್ ನೋಡಿರಿ

2013ರ ಲ್ಯಾಂಡ್ ರೋವರ್ ಕಾರಿನ ಇಂಟಿರಿಯರ್ ಐಷಾರಾಮಿ ಫೀಚರುಗಳನ್ನು ಹೊಂದಿದೆ. ಅದ್ದೂರಿ ಪ್ರಯಾಣಕ್ಕೆ ಲ್ಯಾಂಡ್ ರೋವರಿಗೆ ಲ್ಯಾಂಡ್ ರೋವರೇ ಸಾಟಿ.

2013ರ ಲ್ಯಾಂಡ್ ರೋವರ್: ಹಿಂಭಾಗ

2013ರ ಲ್ಯಾಂಡ್ ರೋವರ್: ಹಿಂಭಾಗ

ಡಿಸೆಂಬರ್ ವೇಳೆಗೆ ನೂತನ ಲ್ಯಾಂಡ್ ರೋವರ್ ಮಾರಾಟ ಆರಂಭವಾಗುವ ನಿರೀಕ್ಷೆಯಿದೆ.

ಲ್ಯಾಂಡ್ ರೋವರ್ ಇಂಟಿರಿಯರ್

ಲ್ಯಾಂಡ್ ರೋವರ್ ಇಂಟಿರಿಯರ್

ಇದು ಲ್ಯಾಂಡ್ ರೋವರ್ ಕಾರಿನ ಇನ್ನೊಂದು ಇಂಟಿರಿಯರ್ ಚಿತ್ರ.

More from DriveSpark

Article Published On: Monday, September 10, 2012, 10:12 [IST]
English summary
2013 Range Rover MK4 Revealed. 2013 model will be offered in 5.0L Supercharged V8 Petrol variant as well as 4.4L TDV8 Diesel variant. Both these variants will be offered in eight-speed automatic transmission.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+