ಓದುಗರ ಪ್ರಶ್ನೆ: ಒಳ್ಳೆ ಮೈಲೇಜ್ ಕಾರು ಸೂಚಿಸಿ

Please Suggest Best Mileage Petrol Car
ಕನ್ನಡ ಡ್ರೈವ್ ಸ್ಪಾರ್ಕಿಗೆ ನಮಸ್ಕಾರ. ಕಾರು ಖರೀದಿಸೋ ಯೋಚನೆಯಿದೆ. ಪೆಟ್ರೋಲ್ ಕಾರುಗಳಲ್ಲಿ ಹೆಚ್ಚು ಮೈಲೇಜ್ ನೀಡೋ ಕಾರುಗಳ ಕುರಿತು ತಿಳಿಸಿ ಪುಣ್ಯ ಕಟ್ಕೋಳ್ಳಿ. ಧನ್ಯವಾದ.
ಮುರಳಿಕೃಷ್ಣ, ಹಾವೇರಿ

ನೀವು ಸಣ್ಣ ಹ್ಯಾಚ್ ಬ್ಯಾಕ್ ಅಥವಾ ಉದ್ದದ ಸೆಡಾನ್ ಕಾರು ಬೇಕೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ನಿಮ್ಮ ಬಜೆಟ್ ಕುರಿತೂ ಹೇಳಿಲ್ಲ. ಹೀಗಾಗಿ ಈ ಎರಡೂ ವಿಭಾಗದ ಕಾರುಗಳ ಕುರಿತು ತಿಳಿಸುವ ಅನಿವಾರ್ಯತೆ ನಮಗೆ. ಇರಲಿ. ಸದ್ಯ ರಸ್ತೆಯಲ್ಲಿರುವ ಹೆಚ್ಚಿನ ಸಣ್ಣಕಾರುಗಳ ಮೈಲೇಜ್ ಪರವಾಗಿಲ್ಲ ಎನ್ನುವ ಹಾಗೆ ಇದೆ.

ಸಣ್ಣಕಾರು ವಿಭಾಗದಲ್ಲಿ ನೋಡುವುದಾದರೆ ಹ್ಯುಂಡೈ ಐ10 ಮತ್ತು ಇಯಾನ್ ಮೈಲೇಜ್ ಅತ್ಯುತ್ತಮವಾಗಿದೆ. ಮಾರುತಿ ಬ್ರಾಂಡಿನ ಕಾರು ಹುಡುಕಿದರೆ ಆಲ್ಟೊ ಖರೀದಿಸಬಹುದು. ರಿಟ್ಜ್ ಕೂಡ ಆಕರ್ಷಕ ಮೈಲೇಜ್ ನೀಡುತ್ತದೆ. ಇಂಡಿಕಾ ಇವಿ2 ಕೂಡ ಓಕೆ. ಸಣ್ಣಕಾರುಗಳಲ್ಲಿ ಟಾಟಾ ನ್ಯಾನೊ ಅತ್ಯುತ್ತಮ ಮೈಲೇಜ್ ನೀಡುತ್ತದೆ.

ದೊಡ್ಡ ಕಾರುಗಳ ವಿಭಾಗದಲ್ಲಿ ನೋಡುವುದಾದರೆ ಟೊಯೊಟಾ ಕೊರೊಲಾ ಆಲ್ಟಿಸ್, ಹ್ಯುಂಡೈ ವೆರ್ನಾ ಮತ್ತು ಹೊಸ ಫೋರ್ಡ್ ಫಿಯೆಸ್ಟಾ ಕಾರಿನ ಕುರಿತು ಗಮನ ಹರಿಸಬಹುದು. ಇಲ್ಲಿ ಕೆಲವು ಕಾರುಗಳ ಹೆಸರನ್ನಷ್ಟೇ ಸೂಚಿಸಲಾಗಿದೆ.

ನಿಮಗೆ ಇತ್ತೀಚೆಗೆ ರಸ್ತೆಗಿಳಿದ ಕಾರುಗಳ ಮಾಹಿತಿ ಬೇಕಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಕೆಲವೊಮ್ಮೆ ಹೆಚ್ಚು ಮೈಲೇಜ್ ನೀಡುವ ಕಾರುಗಳು ಕಡಿಮೆ ಕಾರ್ಯಕ್ಷಮತೆ ನೀಡುತ್ತವೆ. ಹೀಗಾಗಿ ಒಂದೆರಡು ಕಿ.ಮೀ. ಮೈಲೇಜಿಗಾಗಿ ಡ್ರೈವಿಂಗ್ ಅನುಭವದಲ್ಲಿ ರಾಜಿ ಮಾಡಿಕೊಳ್ಳಬೇಡಿ.

ವಾಹನಲೋಕದ ಪ್ರಶ್ನೆಗಳಿಗೆ ಸ್ವಾಗತ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ಇಮೇಲ್ ವಿಳಾಸ: [email protected]

More from DriveSpark

Article Published On: Tuesday, March 27, 2012, 12:43 [IST]
English summary
Murali Krishna from Haveri has asked drivespark to suggest the best mileage car. Here are some petrol cars that are suitable to him. The Hyundai i10, Eon, Maruti Suzuki Alto are fuel efficient hatchbacks while the Hyundai Verna, Ford Fiesta, Toyota Corolla Altis offer good mileage among sedans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+