ಅಬ್ಬಾ, ಈ ಅಚ್ಚರಿಯ ಕಾರಿನ ಮೈಲೇಜ್ 939 ಕಿ.ಮೀ.
ಪ್ರಸಕ್ತ ಇಂಧನ ದರ ದುಬಾರಿಯಾಗುತ್ತಿರುವ ಸಂದರ್ಭದಲ್ಲಿ ಅಚ್ಚರಿಗೊಳಿಸುವ ಮೈಲೇಜ್ ಕಾರೊಂದನ್ನು ಎಂಜಿನಿಯರುಗಳು ಅಭಿವೃದ್ಧಿಪಡಿಸಿದ್ದಾರೆ. ಈ ಕಾರಿನ ಮೈಲೇಜ್ ಒಂದು ಗ್ಯಾಲನ್‌ಗೆ 584 ಮೈಲು. ಅಂದರೆ ಸುಮಾರು 939 ಕಿ.ಮೀ. ಒಂದು ಗ್ಯಾಲನ್ ಅಂದರೆ 3.78 ಲೀಟರ್ ಆಸುಪಾಸಿನಲ್ಲಿದೆ.
ಕ್ಯಾಲಿಫೋರ್ನಿಯಾ ಪಾಲಿಟೆಕ್ನಿಕ್ ಸ್ಟೇಟ್ ಯುನಿವರ್ಸಿಟಿಯ ಎಂಜಿನಿಯರುಗಳ ತಂಡ ಈ ಅಚ್ಚರಿಯ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಹೇಳುವ ಪ್ರಕಾರ ಈ ಕಾರು ಪ್ರತಿ ಗ್ಯಾಲನ್ ಇಂಧನಕ್ಕೆ 584 ಮೈಲು ಮೈಲೇಜ್ ನೀಡುತ್ತದೆ. ಟೆಕ್ಸಾಸ್‌ನಲ್ಲಿ ನಡೆಯಲಿರುವ ಸೆಲ್ ಎಕೊ ಮ್ಯಾರಥನ್‌ನಲ್ಲಿ ಲೆಮಿನಾ ಎಂಬ ಈ ಕಾರನ್ನು ಪ್ರದರ್ಶಿಸಲಾಗಿದೆ.
ವಿಶೇಷವೆಂದರೆ ಈ ಲೆಮಿನಾ ಹೆಸರಿನ ಕಾರಿನಲ್ಲಿ ಕೇವಲ ಒಬ್ಬರು ಮಾತ್ರ ಪ್ರಯಾಣಿಸಬಹುದು ಎಂದು ಡೈಲಿ ಮೈಲ್ ವರದಿ ಮಾಡಿದೆ. ಇದು ಪರಿಷ್ಕೃತ ಹೋಂಡಾ ಎಂಜಿನ್ ಹೊಂದಿದೆ. ನ್ಯಾಷನಲ್ ಜಿಯೋಗ್ರಾಫಿಕ್ ಬ್ಲಾಗಿನಲ್ಲಿ ಡ್ರೈವರ್ ಪೀಟರ್ ಈ ಕಾರಿನ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ.
"ಸರಳ ಏರೋ ಡೈನಾಮಿಕ್ ವಿನ್ಯಾಸದ ಕಡಿಮೆ ತೂಕದ ಇಂತಹ ಕಾರುಗಳು ಮೈಲೇಜ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ" ಎಂದು ಪೀಟರ್ ಹೇಳುತ್ತಾರೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









