ರೇವಾ ನಂತ್ರ ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಆಗಮನ

ದೇಶದ ರಸ್ತೆಗೆ ಶೀಘ್ರದಲ್ಲಿ ಮಹೀಂದ್ರ ರೇವಾ ಎನ್ಎಕ್ಸ್ಆರ್ ಆಗಮಿಸಲಿದೆ. ನಂತರ ಮಹೀಂದ್ರ ಫ್ಯಾಕ್ಟರಿಯಿಂದ ದೇಶದ ರಸ್ತೆಗಿಳಿಯಲಿರುವ ಎಲೆಕ್ಟ್ರಿಕ್ ಕಾರುಗಳಲ್ಲಿ ವೆರಿಟೊ ಎಲೆಕ್ಟ್ರಿಕ್ ಕಾರು ಸರದಿಯಲ್ಲಿದೆ ಎಂದು ಮೂಲಗಳು ಹೇಳಿವೆ. ಮುಂದಿನ ಒಂದೆರಡು ವರ್ಷಗಳಲ್ಲಿ ವೆರಿಟೊ ಎಲೆಕ್ಟ್ರಿಕ್ ಕಾರು ರಸ್ತೆಗಿಳಿಯಲಿದೆ ಎಂದು ಮೂಲಗಳು ಹೇಳಿವೆ.

ಲೊಗಾನ್ ಕಾರಿನ ಪರಿಷ್ಕೃತ ಆವೃತ್ತಿ ವೆರಿಟೊ ಸೆಡಾನ್. ಇದನ್ನೇ ಕಂಪನಿಯು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಿ ಪರಿಚಯಿಸುವ ನಿರೀಕ್ಷೆಯಿದೆ. ನೂತನ ವೆರಿಟೊ ಕಾರಿನ ಟೆಕ್ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ರೇವಾ ಎನ್ಎಕ್ಸ್ಆರ್ ನಲ್ಲಿರುವ ಲೀಥಿಯಂ ಐಯಾನ್ ಬ್ಯಾಟರಿ ಪ್ಯಾಕೇ ಈ ಕಾರಲ್ಲೂ ಮುಂದುವರೆಯುವ ನಿರೀಕ್ಷೆಯಿದೆ.

ಈಗ ಮಹೀಂದ್ರ ವೆರಿಟೊ ಕಾರು 1.4 ಲೀಟರಿನ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ರೇವಾ ಎನ್ಎಕ್ಸ್ಆರ್ ಬೇಡಿಕೆಯನ್ನು ನೋಡಿಕೊಂಡು ಮಹೀಂದ್ರ ಕಂಪನಿಯು ನೂತನ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದರೊಂದಿಗೆ ಕಂಪನಿಯು ಮ್ಯಾಕ್ಸಿಮೊ ಮತ್ತು ಜಿಯೊ ಟ್ರಕ್ಕುಗಳಿಗೂ ಎಲೆಕ್ಟ್ರಿಕ್ ಮೋಟರ್ ಜೋಡಿಸಲು ಯೋಜಿಸಿದೆ.

ಕೆಲವು ವರ್ಷದ ಹಿಂದೆ ಟಾಟಾ ಮೋಟರ್ಸ್ ಕೂಡ ಕೆಲವು ಎಲೆಕ್ಟ್ರಿಕ್ ಕಾರುಗಳ ಪರಿಕಲ್ಪನೆಯನ್ನು ಮುಂದಿಟ್ಟಿದೆ. ಕಂಪನಿಯು ಟಾಟಾ ಇಂಡಿಕಾ ಮತ್ತು ವಿಸ್ಟಾ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪ್ರದರ್ಶಿಸಿತ್ತು. ಆದರೆ ಅದರ ಉತ್ಪಾದನೆಗೆ ಕಂಪನಿ ಇನ್ನೂ ಮುಂದಾಗಿಲ್ಲ.

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಎಲೆಕ್ಟ್ರಿಕ್ ಕಾರು ವಿಭಾಗ ಮಹೀಂದ್ರ ರೇವಾದ ಹೊಸ ಘಟಕವೊಂದು ಬೆಂಗಳೂರಿನಲ್ಲಿ ಇತ್ತೀಚೆಗೆ ಉದ್ಘಾಟನೆಯಾಗಿತ್ತು. ಇದು ಕಂಪನಿಯ ಪರಿಸರ ಸ್ನೇಹಿ ಸೌರಶಕ್ತಿ ಚಾಲೀತ ಈ ಘಟಕವಾಗಿದೆ. ಘಟಕಕ್ಕೆ ಅಗತ್ಯವಿರುವ ಶೇಕಡ 35ರಷ್ಟು ವಿದ್ಯುತನ್ನು ಹೊರಗೆ ಅಳವಡಿಸಿರುವ ಸೋಲಾರ್ ಪ್ಯಾನೆಲುಗಳಿಂದ ಪಡೆಯಲಾಗುತ್ತದೆ.

ಓದಿ: ಬೆಂಗ್ಳೂರಲ್ಲಿ ರೇವಾ ಪರಿಸರ ಸ್ನೇಹಿ ಘಟಕ ಉದ್ಘಾಟನೆ

More from DriveSpark

Article Published On: Wednesday, August 29, 2012, 9:35 [IST]
English summary
Mahindra's subsidiary Reva is planing to add more electric car models of its portfolio. The company is now working on new electric cars include Mahindra portfolio and they will hit market coming years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+