ಬೆಂಗಳೂರಿನಲ್ಲಿ ಬೆಂಝ್ ಬೃಹತ್ ಶೋರೂಂ ಶುಭಾರಂಭ
ಬೆಂಗಳೂರಿನ ಮೈಸೂರು ರಸ್ತೆಯ ಸಮೀಪ 65 ಸಾವಿರ ಚದರಡಿಯ ಮರ್ಸಿಡಿಸ್ ಬೆಂಝ್ ಬೃಹತ್ ಶೋರೂಂನ್ನು "ಅಕ್ಷಯ್ ಮೋಟರ್ಸ್" ಆರಂಭಿಸಿದೆ.. ಇದನ್ನು ಮರ್ಸಿಡಿಸ್ ಬೆಂಝ್ ಸಿಇಒ ಬೆಂಝ್ ಸಿಇಒ ಪೀಟರ್ ಹೊನೇಗ್ ಮತ್ತು ಅಕ್ಷಯ್ ಮೋಟರ್ಸ್ ಎಂಡಿ ಎಂ.ಪಿ. ಶ್ಯಾಮ್ ಉದ್ಘಾಟಿಸಿದ್ದಾರೆ. (ಚಿತ್ರಗಳನ್ನು ನೋಡಿರಿ)
"ಇದು ಬೆಂಗಳೂರಿನಲ್ಲಿ ನಾವು ಆರಂಭಿಸುವ ಎರಡನೆಯ ಸ್ಟೇಟ್ ಆಫ್ ದಿ ಆರ್ಟ್ ಶೋರೂಂ ಆಗಿದ್ದು, ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುವ ಕಾರ್ಯತಂತ್ರದ ಭಾಗವಾಗಿದೆ" ಎಂದು ಪೀಟರ್ ಹೊನೇಗ್ ಹೇಳಿದ್ದಾರೆ. ಈ ಡೀಲರ್ಷಿಪ್ ಮಳಿಗೆಗೆ ಕಂಪನಿಯು ಸುಮಾರು 30 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ.
ಈ ಮಲ್ಟಿ ಲೆವೆಲ್ ಶೋರೂಂನಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯ ಎಲ್ಲಾ ಶ್ರೇಣಿಯ ಕಾರುಗಳು, ವಿಶೇಷ ಆಕ್ಸೆಸರಿ ಸಾಧನಗಳು, ಕೆಫೆ ಮರ್ಸಿಡಿಸ್ ಜೊತೆಗೆ ವಿಶ್ರಾಂತಿ ಕೊಠಡಿಯೂ ಇರುವುದು ವಿಶೇಷವಾಗಿದೆ. ಇಲ್ಲಿ ಕಂಪನಿಯ ಸೆಕೆಂಡ್ ಹ್ಯಾಂಡ್ ವ್ಯವಹಾರಕ್ಕೂ ಪ್ರತ್ಯೇಕ ಸ್ಥಳಾವಕಾಶ ನೀಡಲಾಗಿದೆ.
"ಎಂದೆಂದಿಗೂ ಅತ್ಯುತ್ತಮವಾದ ಸೇವೆ ಮತ್ತು ವಾಹನಗಳನ್ನು ಬಯಸುವ ಬೆಂಗಳೂರಿನ ಕಾರು ಪ್ರಿಯರಿಗೆ ಬೃಹತ್ ಮತ್ತು ವಿಶ್ವದರ್ಜೆಯ ಶೋರೂಂ ನೀಡುವ ಕುರಿತು ನಾವು ಸಂತೋಷಪಡುತ್ತೇವೆ ಎಂದು ಅಕ್ಷಯ್ ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಪಿ. ಶ್ಯಾಮ್ ಹೇಳಿದ್ದಾರೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









