ಆಪಲ್ ಸ್ಟೀಯರಿಂಗ್ ವೀಲ್ ರಿಮೋಟ್ ಕಂಟ್ರೋಲ್
ಆಪಲ್ ಕಂಪನಿಯು ನೂತನ ಸ್ಟಿಯರಿಂಗ್ ವೀಲ್ ರಿಮೋಟ್ ಕಂಟ್ರೋಲಿಗೆ ಪೇಟೆಂಟ್ ಪಡೆದುಕೊಂಡಿದೆ. ಸ್ಟಿಯರಿಂಗ್ ವೀಲ್‌ನಲ್ಲಿರುವ ಈ ರೀಮೋಟ್ ಕಂಟ್ರೋಲ್ ಮೂಲಕ ನಿಮ್ಮ ಐಫೋನ್, ಐಪ್ಯಾಡ್ ಅಥವಾ ಐಪಾಡ್ ಜೊತೆ ಕನೆಕ್ಟ್ ಆಗಿರಬಹುದು.
ಸ್ಟಿಯರಿಂಗ್ ವೀಲ್‌ನಲ್ಲಿರುವ ಈ ರಿಮೋಟ್ ಕಂಟ್ರೋಲ್ ಬ್ಲೂಟೂಥ್ ಮೂಲಕ ಈ ಐ-ಸಾಧನಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಸಾಧನವಿದ್ದರೆ ನೀವು ರಸ್ತೆಯ ಮೇಲೆ ಗಮನವಿಟ್ಟುಕೊಂಡೇ ಸ್ಟಿಯರಿಂಗ್ ವೀಲ್‌ನಲ್ಲೇ ಐಫೋನ್ ಇತ್ಯಾದಿಗಳನ್ನು ಅಪರೇಟ್ ಮಾಡಬಹುದು.
ಆದರೆ ಈಗ ಹೆಚ್ಚಿನ ಕಾರುಗಳು ಸ್ಟಿಯರಿಂಗ್ ವೀಲ್ನಲ್ಲೇ ಆಡಿಯೋ ಕಂಟ್ರೋಲ್ ವ್ಯವಸ್ಥೆ ಹೊಂದಿವೆ. ಆದರೆ ನೂತನ ಸ್ಟಿಯರಿಂಗ್ ವೀಲ್ ರಿಮೋಟ್ ಕಂಟ್ರೋಲ್ ಸಿಸ್ಟಮ್ ಕೇವಲ ಆಪಲ್ ಉತ್ಪನ್ನಗಳಿಗೆ ಮಾತ್ರ ಕನೆಕ್ಟ್ ಆಗುತ್ತದೆ.
ಒಟ್ಟಾರೆ Apple Remote Wheel Control System ತುಂಬಾ ಆಸಕ್ತಿದಾಯಕ. ವಿಶೇಷವೆಂದರೆ ಅಮೆರಿಕದಲ್ಲಿ ಹೆಚ್ಚಿನ ಕಾರುಗಳು ಆಪಲ್ ಉತ್ಪನ್ನಗಳನ್ನು ಹೊಂದಿವೆ. ಭಾರತದಲ್ಲಿ ಆಪಲ್ ಐಪಾಡ್, ಐಪ್ಯಾಡ್, ಐಫೋನ್ ಇತ್ಯಾದಿಗಳನ್ನು ಕಾರಲ್ಲಿ ಹೆಚ್ಚಾಗಿ ಬಳಸುವರು ಈ ಫೀಚರ್ ಅಳವಡಿಸಿಕೊಳ್ಳಬಹುದು.


Click it and Unblock the Notifications









