ಐಒಎಸ್ 11 ಅಪ್ಡೇಟ್ ವರ್ಷನ್‌ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ನೀಡಿದ ಆಪಲ್

Written By:

ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ನಡೆಯುತ್ತಿರುವ ವಿಶ್ವವ್ಯಾಪಿ ತಂತ್ರಾಂಶ ಅಭಿವೃದ್ಧಿದಾರರ ಸಮಾವೇಶದಲ್ಲಿ ಪ್ರಖ್ಯಾತ ಟೆಕ್ ದೈತ್ಯ ಆಪಲ್ ತನ್ನ ಸಾಧನಗಳಿಗೆ ಉತ್ಪನ್ನ ಮತ್ತು ವೈಶಿಷ್ಟ್ಯಗಳ ಶ್ರೇಣಿಯನ್ನು ಬಹಿರಂಗಪಡಿಸಿದೆ.

To Follow DriveSpark On Facebook, Click The Like Button
ಐಒಎಸ್ 11 ಅಪ್ಡೇಟ್ ವರ್ಷನ್‌ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ನೀಡಿದ ಆಪಲ್

ಹೊಸ ನವೀಕರಣಗಳ ಪೈಕಿ, ಮುಂಬರುವ ಐಒಎಸ್ 11ನಲ್ಲಿ 'Do not disturb while driving' ಆಯ್ಕೆಯನ್ನು ಹೊಸದಾಗಿ ಸೇರ್ಪಡೆ ಮಾಡಿದ್ದು, ಬಹಳಷ್ಟು ದಿನಗಳಿಂದ ನೀರಿಕ್ಷೆ ಮಾಡಲಾಗಿದ್ದ ಈ ಆಯ್ಕೆಯನ್ನು ಆಪಲ್ ಸಂಸ್ಥೆ ಕೊನೆಗೂ ಹೊರ ತಂದಿದೆ.

ಐಒಎಸ್ 11 ಅಪ್ಡೇಟ್ ವರ್ಷನ್‌ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ನೀಡಿದ ಆಪಲ್

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆಯು ಹೆಚ್ಚು ಅಪಾಯಕಾರಿಯಾಗಿದ್ದು, ಇದೇ ಕಾರಣಕ್ಕೆ ಬಹಳಷ್ಟು ಅಪಘಾತಗಳು ಸಂಭವಿಸಿರುವುದು ನಮಗೆಲ್ಲರಿಗೂ ತಿಳಿದಿರುವ ಸಂಗತಿ.

ಐಒಎಸ್ 11 ಅಪ್ಡೇಟ್ ವರ್ಷನ್‌ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ನೀಡಿದ ಆಪಲ್

ಈ ಗಂಭೀರ ಸಮಸ್ಯೆಗೆ ಪರಿಹಾರ ಹುಡುಕುವ ಸಲುವಾಗಿ 'ಡ್ರೈವಿಂಗ್ ಮಾಡುವಾಗ ತೊಂದರೆ ಮಾಡಬೇಡಿ' ಎಂಬ ಆಯ್ಕೆ ಪರಿಚಯ ಮಾಡುತ್ತಿದೆ.

ಐಒಎಸ್ 11 ಅಪ್ಡೇಟ್ ವರ್ಷನ್‌ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ನೀಡಿದ ಆಪಲ್

ಈ ವೈಶಿಷ್ಟ್ಯವು ಮೊಬೈಲ್ ಮಾಲೀಕನ ಸಂವೇದನೆಯನ್ನು ಪತ್ತೆಹಚ್ಚಲಿದ್ದು, ಮಾಲೀಕ ಕಾರು ಓಡಿಸುವ ಸಂದರ್ಭದಲ್ಲಿ ಈ ಆಯ್ಕೆ ತನ್ನ ಕಾರ್ಯವನ್ನು ಪ್ರಾರಂಭಿಸಲಿದೆ. ಚಾಲಕರು ರಸ್ತೆಯ ಕಡೆ ಗಮನ ಕೇಂದ್ರೀಕರಿಸುವಂತೆ ಈ ಆಯ್ಕೆ ಮಾಡಲಿದೆ ಎಂದು ಆಪಲ್ ತಿಳಿಸಿದೆ.

ಐಒಎಸ್ 11 ಅಪ್ಡೇಟ್ ವರ್ಷನ್‌ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ನೀಡಿದ ಆಪಲ್

ಈ ಹೊಸ ಆಪಲ್ ಮೊಬೈಲ್ ಆಯ್ಕೆಯು ನೋಟಿಫಿಕೇಶನ್‌ಗಳನ್ನು ತಡೆಗಟ್ಟುವ ಸಲುವಾಗಿ ಪರದೆಯನ್ನು ಸ್ವಯಂಚಾಲಿತವಾಗಿ ಆಫ್ ಮಾಡಲಿದೆ.

ಐಒಎಸ್ 11 ಅಪ್ಡೇಟ್ ವರ್ಷನ್‌ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ನೀಡಿದ ಆಪಲ್

ಅಪ್ಡೇಟ್ ಆಗಿರುವ ಹೊಚ್ಚ ಹೊಸ ಐಒಎಸ್ 11ನಲ್ಲಿ 'Favourite' ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿರುವ ಜನಕ್ಕೆ ಸ್ವಯಂ ಪ್ರತ್ಯುತ್ತರವನ್ನು ಕಳುಹಿಸುವ ಆಯ್ಕೆಯನ್ನೂ ಸಹ ಆಪಲ್ ನೀಡಿದೆ.

ಐಒಎಸ್ 11 ಅಪ್ಡೇಟ್ ವರ್ಷನ್‌ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ನೀಡಿದ ಆಪಲ್

'Favourite' ಪಟ್ಟಿಯಲ್ಲಿರುವ ಜನಕ್ಕೆ, "ಮೊಬೈಲ್ ಬಳಕೆದಾರ ಚಾಲನೆ ಮಾಡುತ್ತಿದ್ದಾರೆ ಮತ್ತು ತಮ್ಮ ಸದ್ಯದರಲ್ಲಿಯೇ ಪ್ರತಿಕ್ರಿಯೆ ನೀಡಲಿದ್ದಾರೆ" ಸಂದೇಶವನ್ನು ನೀಡುತ್ತದೆ.

ಐಒಎಸ್ 11 ಅಪ್ಡೇಟ್ ವರ್ಷನ್‌ನಲ್ಲಿ 'ಡು ನಾಟ್ ಡಿಸ್ಟರ್ಬ್' ಆಯ್ಕೆ ನೀಡಿದ ಆಪಲ್

ಹೊಸ ಐಒಎಸ್ 11 ಅಪ್ಡೇಟ್ ವರ್ಷನ್ ಐಫೋನ್ 5 ಎಸ್ ಮತ್ತು ಅದಕ್ಕೂ ಮೇಲ್ಪಟ್ಟ ಮೊಬೈಲ್‌ಗಳಲ್ಲಿ ಮತ್ತು ಇತ್ತೀಚಿನ ಐಪ್ಯಾಡ್ ಮಾದರಿಗಳು ಈ ಆಯ್ಕೆ ಅಳವಡಿಸಲಾಗಿದೆ.

Read more on ಆಪಲ್ apple
English summary
Read in Kannada about apple introduced 'Do not disturb while driving' mode for its upcoming iOS 11.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark