ಹೈಬ್ರಿಡ್ ಬಸ್ ಹೊರತರಲು ಅಶೋಕ್ ಲೇಲ್ಯಾಂಡ್ ಯೋಜನೆ
ದೇಶಕ್ಕೆ ಆಪ್ಟೆರಾ ಹೈಬ್ರಿಡ್ ಬಸ್ ಆವೃತ್ತಿಗಳನ್ನು ಪರಿಚಯಿಸಲು ಅಶೋಕ್ ಲೇಲ್ಯಾಂಡ್ ಯೋಜಿಸಿದೆ. ಇಂಗ್ಲೆಂಡ್ ಮೂಲದ ಆಪ್ಟೆರಾ ಬಸ್ ತಯಾರಿಕ ಕಂಪನಿಯಲ್ಲಿ ಅಶೋಕ್ ಲೇಲ್ಯಾಂಡ್ ಶೇಕಡ 75ರಷ್ಟು ಪಾಲು ಹೊಂದಿದೆ.
ಈಗಾಗಲೇ ಕಂಪನಿಯು ಆಪ್ಟೆರಾ ಕಾರ್ಯತಂತ್ರದ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ.
"ಆದರೆ ದುಬಾರಿ ದರದಿಂದಾಗಿ ದೇಶದ ಮಾರುಕಟ್ಟೆಗೆ ಎಲೆಕ್ಟ್ರಿಕ್ ಬಸ್ ಪರಿಚಯಿಸಿಲ್ಲ. ಆದರೆ ಇದಕ್ಕೆ ಪರ್ಯಾಯವಾಗಿ ನಾವು ಹೈಬ್ರಿಡ್ ಬಸ್ ಪರಿಚಯಿಸುವ ಇಚ್ಚೆ ಹೊಂದಿದ್ದೇವೆ" ಎಂದು ಅಶೋಕ್ ಲ್ಯಾಂಡ್ ಚೇರ್ಮನ್ ಧೀರಜ್ ಹಿಂದೂಜಾ ಹೇಳಿದ್ದಾರೆ.
ಸಿಎನ್ ಜಿ ಚಾಲಿತ ಬಸ್ಸುಗಳಿಗೆ ಬದಲಾಗಿ ಪರ್ಯಾಯ ಇಂಧನದ ಬಸ್ಸುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಹೈಬ್ರಿಡ್ ವಾಹನ ಪರಿಚಯಿಸಲು ಕಂಪನಿಯ ಎಂಜಿನಿಯರುಗಳ ತಂಡ ಶ್ರಮಿಸುತ್ತಿದೆ. ಇದು ಅತ್ಯಧಿಕ ಇಂಧನ ದಕ್ಷತೆ ಹೊಂದಿರಲಿದೆ" ಎಂದು ಕಂಪನಿಯ ಉಪಾಧ್ಯಕ್ಷರಾದ ಶೇಷಸಾಯಿ ಹೇಳಿದ್ದಾರೆ.
ಕಂಪನಿಯು 2011-12ರಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ಸುಮಾರು 349 ಕೋಟಿ ರುಪಾಯಿ ಹೂಡಿಕೆ ಮಾಡಿದೆ.


Click it and Unblock the Notifications









