ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಅಂಟಿಸುವುದು ಇನ್ಮುಂದೆ ಅಪರಾಧವಂತೆ..!

ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ತಡೆಯಲು ದೇಶಾದ್ಯಂತ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿರುವ ಸರ್ಕಾರಿ ಬಸ್‌ಗಳಲ್ಲಿನ ಸ್ಟಿಕ್ಕರ್ಸ್ ಅಂಟಿಸುವಿಕೆಯನ್ನು ಇದೀಗ ನಿಷೇಧ ಮಾಡಲಾಗಿದೆ.

ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಅಂಟಿಸುವುದು ಇನ್ಮುಂದೆ ಅಪರಾಧವಂತೆ..!

ಹೌದು, ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಹಾವಳಿ ಹೆಚ್ಚುತ್ತಿದ್ದು, ಇದು ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿರುವುದು ಇಲಾಖೆ ಮಟ್ಟದ ತನಿಖೆ ವೇಳೆ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಮುಂಭಾಗದ ವಿಂಡ್‌ಶೀಲ್ಡ್‌ಗಳಲ್ಲಿ ಸ್ಟಿಕ್ಕರ್ಸ್ ಬಳಕೆ ಮಾಡುವುದನ್ನು ನಿಷೇಧಗೊಳಿಸಲಾಗಿದೆ. ಒಂದು ವೇಳೆ ನಿಯಮಮೀರಿ ಸ್ಟಿಕ್ಕರ್ಸ್ ಬಳಕೆ ಮಾಡಿದ್ದಲ್ಲಿ ದಂಡವಿಧಿಸುವ ಬಗ್ಗೆ ಎಚ್ಚರಿಸಲಾಗಿದ್ದು, ಅಗಸ್ಟ್ 2ರಂದು ನಡೆದ ಏಳು ರಾಜ್ಯಗಳ ರಾಜ್ಯ ಸಾರಿಗೆ ನಿಗಮಗಳ ವ್ಯವಸ್ಥಾಪಕರ ಸಭೆ ನಂತರ ಈ ಹೊಸ ಆದೇಶನ್ನು ಹೊರಡಿಸಲಾಗಿದೆ.

ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಅಂಟಿಸುವುದು ಇನ್ಮುಂದೆ ಅಪರಾಧವಂತೆ..!

ಸರ್ಕಾರಿ ಬಸ್‌ಗಳ ಮುಂಭಾಗದ ವಿಂಡ್‌ಶೀಲ್ಡ್‌ಗಳಲ್ಲಿ ಬಳಸಲಾಗುವ ಸ್ಟೀಕ್ಕರ್ಸ್‌ಗಳು ಅಪಘಾತಕ್ಕೆ ಕಾರಣವಾಗುತ್ತಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿನ ಅಪಘಾತಗಳ ಸಂಖ್ಯೆಗಳನ್ನು ಆಧರಿಸಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಅಂಟಿಸುವುದು ಇನ್ಮುಂದೆ ಅಪರಾಧವಂತೆ..!

ವಿಂಡ್‌ಶೀಲ್ಡ್‌ಗಳ ಮೇಲೆ ಸ್ಟಿಕ್ಕರ್ಸ್ ಬಳಕೆ ಮಾಡುವುದರಿಂದ ಸುರಕ್ಷಿತ ಬಸ್ ಚಾಲನೆಗೆ ತೊಂದರೆಯಾಗುವುದಲ್ಲದೇ ಸಣ್ಣಪುಟ್ಟ ವಾಹನಗಳಿಗೆ ಡಿಕ್ಕಿ ಹೊಡೆಯುವ ಸಂಭವ ಹೆಚ್ಚಿರುತ್ತದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಕಳೆದುಕೊಂಡಿದ್ದು, ಕಳೆದ ಒಂದು ವರ್ಷದಲ್ಲಿ ಇದೇ ಕಾರಣಕ್ಕೆ ಬರೋಬ್ಬರಿ 1,066 ಅಪಘಾತ ಪ್ರಕರಣಗಳು ದಾಖಲಾಗಿವೆ.

ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಅಂಟಿಸುವುದು ಇನ್ಮುಂದೆ ಅಪರಾಧವಂತೆ..!

ವಿಂಡ್‌ಶೀಲ್ಡ್‌ಗಳ ಮೇಲೆ ದೊಡ್ಡ ಗಾತ್ರದಲ್ಲಿ ನಗರದ ಹೆಸರುಗಳ ಜೊತೆ ದೇವರ ಫೋಟೋಗಳನ್ನು ಬಳಕೆ ಮಾಡುತ್ತಿರುವುದು ಸಣ್ಣ ಗಾತ್ರದ ವಾಹನಗಳ ಗೋಚರತೆಗೆ ಅಡ್ಡಿಯಾಗುತ್ತಿದ್ದು, ಎಡಬದಿಯಿಂದ ನುಗ್ಗುವ ವಾಹನಗಳನ್ನು ಗುರುತಿಸಲು ಇದು ಸಾಕಷ್ಟು ತೊಂದರೆ ಉಂಟುಮಾಡುತ್ತದೆ. ಹಿಂಭಾಗದ ವಿಂಡ್‌ಶೀಲ್ಡ್‌ಗಳಲ್ಲಿನ ಸ್ಕಿಕ್ಕರ್ಸ್‌ಗಳಿಂತಲೂ ಮುಂಭಾಗದ ವಿಂಡ್‌ಶೀಲ್ಡ್‌ಗಳ ಮೇಲಿನ ಸ್ಟಿಕ್ಕರ್ಸ್‌ಗಳು ಹೆಚ್ಚಿನ ಮಟ್ಟದ ಅಪಘಾತಗಳಿಗೆ ಕಾರಣವಾಗಿದೆ.

ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಅಂಟಿಸುವುದು ಇನ್ಮುಂದೆ ಅಪರಾಧವಂತೆ..!

ಈ ಕುರಿತಂತೆ ತಜ್ಞರರಿಂದ ಅಭಿಪ್ರಾಯ ಸಂಗ್ರಹಿಸಿರುವ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯು ಬಸ್‌ಗಳಲ್ಲಿ ಅನಗತ್ಯವಾಗಿ ಸ್ಟಿಕ್ಕರ್ಸ್ ಬಳಕೆ ಮಾಡುವ ಚಾಲಕರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಸುತ್ತೋಲೆ ಹೊರಡಿಸಿದೆ.

ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಅಂಟಿಸುವುದು ಇನ್ಮುಂದೆ ಅಪರಾಧವಂತೆ..!

ಚಾಲಕನ ಎಡಭಾಗದ ವಿಂಡ್‌ಶೀಲ್ಡ್ ಮೇಲ್ಭಾಗದಲ್ಲಿ ಅಂಟಿಸಲಾಗುವ ಬಸ್ ಡಿಪೋ ನಂಬರ್ ಮತ್ತು ಕೋಡ್‌ವರ್ಡ್ ಸಂಖ್ಯೆಯನ್ನು ಹೊರತುಪಡಿಸಿ ಯಾವುದೇ ರೀತಿಯ ಅನಗತ್ಯ ಸ್ಟಿಕ್ಕರ್ಸ್ ಬಳಕೆಯನ್ನು ನಿಷೇಧಗೊಳಿಸಲಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಅಂಟಿಸುವುದು ಇನ್ಮುಂದೆ ಅಪರಾಧವಂತೆ..!

ಇನ್ನು 7 ರಾಜ್ಯಗಳ ರಾಜ್ಯ ಸಾರಿಗೆ ನಿಗಮಗಳ ವ್ಯವಸ್ಥಾಪಕರ ಸಭೆಯಲ್ಲಿ ಕೆಎಸ್ಆರ್‌ಟಿಸಿ ವ್ಯವಸ್ಥಾಪಕರು ಕೂಡಾ ಭಾಗಿಯಾಗಿದ್ದರೂ ಎನ್ನಲಾಗಿದ್ದು, ಇದರಿಂದ ತಮಿಳುನಾಡಿನಲ್ಲಿ ಜಾರಿಗೆ ಬಂದಿರುವ ಹೊಸ ಆದೇಶವು ಕರ್ನಾಟಕದಲ್ಲೂ ಕೂಡಾ ಜಾರಿಗೆ ಬರುವು ಸಾಧ್ಯತೆಗಳಿವೆ.

MOST READ: ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಅಂಟಿಸುವುದು ಇನ್ಮುಂದೆ ಅಪರಾಧವಂತೆ..!

ಈ ಕುರಿತಂತೆ ಕೆಎಸ್‌ಆರ್‌ಟಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮುಂಬರುವ ದಿನಗಳಲ್ಲಿ ಈ ಕುರಿತುಂತೆ ಅಧಿಕೃತ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದು, ಸದ್ಯಕ್ಕೆ ಯಾವುದೇ ಹೊಸ ಆದೇಶಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

MOST READ: ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಸರ್ಕಾರಿ ಬಸ್‌ಗಳಲ್ಲಿ ಸ್ಟಿಕ್ಕರ್ಸ್ ಅಂಟಿಸುವುದು ಇನ್ಮುಂದೆ ಅಪರಾಧವಂತೆ..!

ತಮಿಳುನಾಡಿನಲ್ಲಿ ಜಾರಿಗೆ ಬಂದಿರುವ ಹೊಸ ಆದೇಶವು ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲು ಸಾಕಷ್ಟು ಸಹಕಾರಿಯಾಗಲಿದ್ದು, ಕರ್ನಾಟಕದಲ್ಲೂ ಈ ಆದೇಶವನ್ನು ಜಾರಿಗೆ ಮಾಡಿದ್ದಲ್ಲಿ ಅಗಬಹುದಾದ ಅನಾಹುತಗಳನ್ನು ತಪ್ಪಿಸಲು ನೆರವಾಗುವುದರಲ್ಲಿ ಎರಡು ಮಾತಿಲ್ಲ ಎನ್ನಬಹುದು.

Most Read Articles

Kannada
English summary
No stickers to be pasted on the windshields of the new buses in TN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X