ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಹೌದು, ಮುಂಬೈ ಮಹಾನಗರ ಪಾಲಿಕೆಯು(ಬಿಎಂಸಿ) ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವ ವಾಹನ ಮಾಲೀಕರಿಗೆ ರೂ.1 ಸಾವಿರದಿಂದ ರೂ.10 ಸಾವಿರ ತನಕ ದಂಡ ವಿಧಿಸುವ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ನೋ ಪಾರ್ಕಿಂಗ್ ಜಾಗಗಳಲ್ಲಿ ನಿಲುಗಡೆ ಮಾಡಲಾಗಿದ್ದ ವಾಹನಗಳ ಮಾಲೀಕರಿಂದ ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಹೌದು, ಮುಂಬೈ ಮಹಾನಗರ ಪಾಲಿಕೆಯು(ಬಿಎಂಸಿ) ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವ ವಾಹನ ಮಾಲೀಕರಿಗೆ ರೂ. 1 ಸಾವಿರದಿಂದ ರೂ.10 ಸಾವಿರ ತನಕ ದಂಡ ವಿಧಿಸುವ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ನೋ ಪಾರ್ಕಿಂಗ್ ಜಾಗಗಳಲ್ಲಿ ನಿಲುಗಡೆ ಮಾಡಲಾಗಿದ್ದ ವಾಹನಗಳ ಮಾಲೀಕರಿಂದ ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ನೋ ಪಾರ್ಕಿಂಗ್ ಪ್ರದೇಶ ಮತ್ತು ವಾಹನ ಮಾದರಿಗಳಿಗೆ ಅನುಗುಣವಾಗಿ ದಂಡದ ಮೊತ್ತವನ್ನು ವಿಧಿಸಲಾಗುತ್ತಿದ್ದು, ಮುಂಬೈ ಟ್ರಾಫಿಕ್ ಪೊಲೀಸರು ವಿಧಿಸುತ್ತಿರುವ ಭಾರೀ ಪ್ರಮಾಣದ ದಂಡಕ್ಕೆ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರು ಕಂಗಾಲಾಗಿ ಹೋಗಿದ್ದಾರೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಹಾಗೆಯೇ ಮುಂಬೈ ಮಹಾನಗರ ಪಾಲಿಕೆಯು ನಗರದ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಹನಗಳನ್ನು ನಿಲುಗಡೆ ಮಾಡಿದ್ದಲ್ಲಿ ಅಂತಹ ವಾಹನ ಮಾಲೀಕರಿಗೆ ಅಧಿಕ ಮೊತ್ತದ ದಂಡ ವಿಧಿಸಲು ಸೂಚನೆ ನೀಡಲಾಗಿದೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಜೊತೆಗೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನಗಳನ್ನು ಟ್ರಾಫಿಕ್ ಪೊಲೀಸರೇ ಜಪ್ತಿ ಮಾಡಲಿದ್ದು, ಹೊಸ ರೂಲ್ಸ್ ಜಾರಿಗೆ ಬಂದು ಎರಡೇ ದಿನದಲ್ಲಿ ಸಾವಿರ ವಾಹನ ಮಾಲೀಕರ ವಿರುದ್ಧ ಇ-ಚಲನ್ ಮೂಲಕ ದಂಡ ಹಾಕಲಾಗಿದೆ. ಇನ್ನು ಕೆಲವು ನೋ ಪಾರ್ಕಿಂಗ್‌ನಲ್ಲಿದ್ದ ವಾಹನಗಳನ್ನು ಟೋಯಿಂಗ್ ಮಾಡಲಾಗಿದ್ದು, ಅಧಿಕ ಪ್ರಮಾಣದ ದಂಡ ಮೊತ್ತವನ್ನು ಪಾವತಿಸಲು ಸಾಧ್ಯವಾಗದೆ ಬಹುತೇಕ ವಾಹನ ಸವಾರರು ತಮ್ಮ ವಾಹನಗಳನ್ನು ಮರಳಿಪಡೆಯಲು ಪರದಾಟುತ್ತಿದ್ದಾರೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ನೋ ಪಾರ್ಕಿಂಗ್‌ನಲ್ಲಿ ವಾಹನಗಳ ನಿಲುಗಡೆಯಿಂದಾಗಿ ಸಾರ್ವಜನಿಕರಿಗೆ ಹೆಚ್ಚು ಕಿರಿಕಿರಿಯಾಗುತ್ತಿರುವುದಲ್ಲದೇ, ಟ್ರಾಫಿಕ್ ಸಮಸ್ಯೆಗೂ ಕೂಡಾ ಇದು ಪ್ರಮುಖ ಕಾರಣವಾಗಿದೆ. ಪ್ರಮುಖ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ಕಾರುಗಳನ್ನು ನಿಲುಗಡೆ ಮಾಡಿದಾಗ ಸಂಚಾರ ದಟ್ಟಣೆ ಹೆಚ್ಚಲಿದ್ದು, ಕೆಲವು ಬಾರಿ ತುರ್ತು ಸೇವಾ ವಾಹನಗಳ ಓಡಾಟಕ್ಕೂ ಇದು ತೊಂದರೆ ಉಂಟುಮಾಡುತ್ತಿವೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಇದರಿಂದ ಸದ್ಯ ಚಾಲ್ತಿಯಲ್ಲಿರುವ ದಂಡದ ಮೊತ್ತವನ್ನು ರೂ.1 ಸಾವಿರದಿಂದ ರೂ.10 ಸಾವಿರಕ್ಕೆ ಏರಿಕೆ ಮಾಡಿರುವ ಮುಂಬೈ ಮಹಾನಗರ ಪಾಲಿಕೆ ಮತ್ತು ಟ್ರಾಫಿಕ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಭಾರೀ ಪ್ರಮಾಣದ ದಂಡದಿಂದಾಗಿ ಇದೀಗ ಪ್ರಮುಖ ರಸ್ತೆಗಳ ಬದಿಯಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲುತ್ತಿದ್ದ ವಾಹನಗಳು ಇದೀಗ ಪತ್ತೆಯಿಲ್ಲದಂತಾಗಿವೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಇನ್ನು ಮುಂಬೈ ನಗರದಲ್ಲಿ ನೋ ಪಾರ್ಕಿಂಗ್‌ಗೆ ಅಧಿಕವಾಗಿ ದಂಡವಿಧಿಸುತ್ತಿದ್ದರ ಟ್ರಾಫಿಕ್ ದಟ್ಟಣೆಯಲ್ಲಿ ಕುಖ್ಯಾತಿ ಪಡೆದಿರುವ ನಮ್ಮ ಬೆಂಗಳೂರಿನಲ್ಲೂ ಸಹ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಹೊಸ ಕ್ರಮವೊಂದನ್ನು ಜಾರಿಗೆ ತರಲಾಗಿದೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಹೊಸ ವಾಹನಗಳಿಂತಲೂ ಹೆಚ್ಚು ಕೆಟ್ಟನಿಂತ ವಾಹನಗಳಿಂದಲೇ ಟ್ರಾಫಿಕ್ ಕಿರಿಕಿರಿ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಇದಕ್ಕೆ ಮುಕ್ತಿ ನೀಡಲು ಮುಂದಾಗಿರುವ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಕೆಟ್ಟವಾಹನಗಳನ್ನು ಪಾರ್ಕ್ ಮಾಡುವ ಮಾಲೀಕರಿಗೆ ಭರ್ಜರಿಯಾಗಿ ಬಿಸಿ ಮುಟ್ಟಿಸುತ್ತಿದ್ದಾರೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟನಿಂತ ವಾಹನಗಳನ್ನು ಪಾರ್ಕ್ ಮಾಡುವ ವಾಹನ ಮಾಲೀಕರಿಗೆ ಪ್ರತಿ ಗಂಟೆಯ ಲೆಕ್ಕದಲ್ಲಿ ದಂಡ ಹಾಕಲು ಮುಂದಾಗಿರುವ ಟ್ರಾಫಿಕ್ ಪೊಲೀಸರು ಈ ಸಂಬಂಧ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಗಂಟೆ ಲೆಕ್ಕದಲ್ಲಿ ಬೀಳುತ್ತೆ ಫೈನ್

ಸಾರ್ವಜನಿಕ ಪ್ರದೇಶಗಳಲ್ಲಿ ಕೆಟ್ಟುನಿಂತ ವಾಹನಗಳನ್ನು ಪಾರ್ಕ್ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ವಾಹನ ಮಾಲೀಕರಿಗೆ ಪ್ರತಿ ಗಂಟೆಗೆ ರೂ.50 ಅಂತೆ ದಂಡ ವಸೂಲಿ ಮಾಡಲು ನಿರ್ಧರಿಸಲಾಗಿದ್ದು, ದಿನ ಪೂರ್ತಿ ಪಾರ್ಕ್ ಮಾಡಿದ್ದೇ ಆದರಲ್ಲಿ ಬರೋಬ್ಬರಿ ರೂ. 1,200 ದಂಡ ತೆರಬೇಕಾಗುತ್ತೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ತಿಂಗಳ ಲೆಕ್ಕದಲ್ಲಿ ಕೆಟ್ಟ ವಾಹನವು ಸಾರ್ವಜನಿಕ ರಸ್ತೆಗಳ ಬದಿಯಲ್ಲಿ ಪಾರ್ಕ್ ಮಾಡಿದ್ದೇ ಆದಲ್ಲಿ ದಂಡದ ಮೊತ್ತವು ರೂ.36 ಸಾವಿರ ದಾಟಲಿದ್ದು, ಕೆಟ್ಟ ವಾಹನವನ್ನು ರೀಪೆರಿ ಮಾಡಿ ಬಳಕೆ ಮಾಡಬೇಕು ಇಲ್ಲವೇ ಗುಜುರಿಗೆ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಇದರ ಹೊರತಾಗಿ ಸ್ವಂತ ಪಾರ್ಕಿಂಗ್ ಸ್ಥಳವಿದ್ದಲ್ಲಿ ಮಾತ್ರವೇ ಕೆಟ್ಟು ನಿಂತ ವಾಹನಗಳ ಮೇಲೆ ಹಾಕುವ ದಂಡದಿಂದ ತಪ್ಪಿಸಿಕೊಳ್ಳಬಹುದಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿ ಹೋಗುವ ವಾಹನ ಮಾಲೀಕರು ಭರ್ಜರಿ ದಂಡ ತೆರಬೇಕಾಗುತ್ತೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಶಾಕ್ ಕೊಟ್ಟ ಹೊಸ ರೂಲ್ಸ್

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಬೆಂಗಳೂರಿನಲ್ಲಿರುವ ಬಹುತೇಕ ಗ್ಯಾರೇಜ್ ಮಾಲೀಕರು ರೀಪೇರಿಗೆ ಬರುವ ವಾಹನಗಳನ್ನು ಸಾರ್ವಜನಿಕ ರಸ್ತೆಗಳನ್ನೇ ಆಕ್ರಮಿಸಿಕೊಂಡು ಪುಟ್‌ಪಾತ್‌ಗಳನ್ನೇ ತಮ್ಮ ವರ್ಕ್‌ಶಾಪ್ ಮಾಡಿಕೊಂಡಿರುತ್ತಾರೆ. ಇದರಿಂದ ಇದೀಗ ಜಾರಿಗೆ ಬಂದಿರುವ ಹೊಸ ರೂಲ್ಸ್‌ ಈ ಎಲ್ಲಾ ಕಿರಿಕಿರಿಗೆ ಬ್ರೇಕ್ ಹಾಕುತ್ತಿದೆ.

More from DriveSpark

Article Published On: Tuesday, July 9, 2019, 13:23 [IST]
English summary
Brihanmumbai Municipal Corporation (BMC) has started taking strict actions on illegal parking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+