ದೇಶಕ್ಕೆ ಐದನೇ ಆಸ್ಟನ್ ಮಾರ್ಟಿನ್ ಕಾರ್, ಬುಕ್ಕಿಂಗ್ ಆರಂಭ

ನೂತನ ಆಸ್ಟನ್ ಮಾರ್ಟಿನ ಸ್ಪೋರ್ಟ್ಸ್ ಟೂರರ್ ವ್ಯಾಂಗಿಷ್ ಕಳೆದ ವರ್ಷ ದೇಶದಲ್ಲಿ ಅನಾವರಣಗೊಂಡಿತ್ತು. ದೇಶದಲ್ಲಿ ಆಸ್ಟನ್ ಮಾರ್ಟಿನ್ ಕಂಪನಿಯ ಕಾರುಗಳು ಲಭ್ಯವಿದೆ. ಐದನೇ ಕಾರಾಗಿ 2013 Vanquish sports tourer ಮಾರಾಟಗೊಳ್ಳಲಿದೆ.
ನೂತನ ವ್ಯಾಂಗಿಷ್ ದುಬಾರಿ ಕಾರು ಕೂಡ ಹೌದು. ಇದರ ಮುಂಬೈ ಎಕ್ಸ್ ಶೋರೂಂ ದರ ಸುಮಾರು 3.85 ಕೋಟಿ ರುಪಾಯಿ. ಇದು ಎರಡು ಸೀಟಿನ ಸ್ಪೋರ್ಟ್ಸ್ ಟೂರರ್ ಆಗಿದ್ದು, 6 ಲೀಟರಿನ ವಿ12 ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 565 ಹಾರ್ಸ್ ಪವರ್ ನೀಡುತ್ತದೆ. 6 ಸ್ಪೀಡ್ ಆಟೋಮ್ಯಾಟಿಕ್ ಡ್ಯೂಯಲ್ ಕ್ಲಚ್ ಗೇರ್ ಬಾಕ್ಸ್ ಹೊಂದಿದೆ.
Vanquish ಸ್ಪೋರ್ಟ್ಸ್ ಕಾರಿನಲ್ಲಿ ಕೇವಲ 4.1 ಸೆಕೆಂಡಿನಲ್ಲಿ 0-100 ಕಿಮೀ ವೇಗ ಪಡೆಯಬಹುದು. ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 295 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ನೂತನ ವ್ಯಾಂಗಿಷನ್ನು ಮುಂದಿನ ತಲೆಮಾರಿನ ಆಸ್ಟನ್ ಮಾರ್ಟಿನ್ ಕಾರೆಂದು ಬಣ್ಣಿಸಲಾಗಿದೆ.
ಈ ದುಬಾರಿ ಕಾರು ಅತ್ಯಾಕರ್ಷಕ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಇದರಲ್ಲಿ ಡಿಎಸ್ ಸಿ, ಎಬಿಎಸ್, ಇಬಿಡಿ, ಪಿಟಿಎಸ್, ಇಬಿಎ ಸೇರಿದಂತೆ ಹಲವು ಸುರಕ್ಷತೆಯ ಫೀಚರುಗಳಿವೆ. ನಿಮಗೆ ಈ ಅದ್ದೂರಿ ಸ್ಪೋರ್ಟ್ಸ್ ಟೂರರ್ ಬೇಕೆಂದ್ರೆ ಆರ್ಡರ್ ಮಾಡಬಹುದು.


Click it and Unblock the Notifications








