ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿಯಾದ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಈ ಹೊಸ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707 ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.63 ಕೋಟಿಯಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಹೊಸ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಸ್ಟ್ಯಾಂಡರ್ಡ್ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್‌ನ ಹೆಚ್ಚು ಪ್ರಬಲ ಆವೃತ್ತಿಯಾಗಿದೆ. ಈ ಹೊಸ ಎಸ್‍ಯುವಿಯ ಹೆಸಿರಿನಲ್ಲಿರುವ 707 ಕಾರು ಉತ್ಪಾದಿಸುವ ಬಿಹೆಚ್‍ಪಿ ಪವರ್ ಅನ್ನು ಸೂಚಿಸುತ್ತದೆ, ಆದ್ದರಿಂದ ವಿಶ್ವದ ಅತ್ಯಂತ ಶಕ್ತಿಶಾಲಿ ಐಷಾರಾಮಿ ಎಸ್‍ಯುವಿಯಾಗಿದೆ. ಇದು ಲ್ಯಾಂಬೋರ್ಗಿನಿ ಉರುಸ್‌ಗಿಂತಲೂ ವೇಗವಾಗಿದೆ ಮತ್ತು ಈಗ ಖರೀದಿಸಬಹುದಾದ ಅತ್ಯಂತ ಐಷಾರಾಮಿ ಸೂಪರ್ ಎಸ್‍ಯುವಿಯಾಗಿದೆ. ಈ ಹೊಸ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್707 ಎಸ್‍ಯುವಿ ಮಾದರಿಯು ಬೆಂಟ್ಲಿ ಬೆಂಟೈಗಾ, ಫೆರಾರಿ ಪುರೊಸಾಂಗ್ ಮತ್ತು ಲ್ಯಾಂಬೋರ್ಗಿನಿ ಉರುಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಹೊಸ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಎಸ್‍ಯುವಿಯಲ್ಲಿ 4.0-ಲೀಟರ್ ವಿ8 ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 707 ಬಿಹೆಚ್‍ಪಿ ಪವರ್ ಮತ್ತು 900 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 9-ಸ್ಪೀಡ್ ವೆಟ್ ಕ್ಲಚ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಈ ಹೊಸ ಸೂಪರ್ ಎಸ್‍ಯುವಿ 3.3 ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದು ಕೇವಲ ಫೆರಾರಿ ಪುರೊಸಾಂಗ್ಗೆ ಸಮನಾಗಿರುತ್ತದೆ ಆದರೆ ಲ್ಯಾಂಬೋರ್ಗಿನಿ ಉರುಸ್‌ಗಿಂತ 0.3 ಸೆಕೆಂಡುಗಳಷ್ಟು ವೇಗವಾಗಿರುತ್ತದೆ, ಇನ್ನು ಬೆಂಟ್ಲಿ ಬೆಂಟೈಗಾ ಮಾದರಿಯು 100 ಕಿ,ಮೀ ವೇಗವನ್ನು ಪಡೆಯಲು 3.9 ಸೆಕೆಂಡುಗಳನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಹೊಸ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಎಸ್‍ಯುವಿಯು 311 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಎಸ್‍ಯುವಿಯು ಮೂಲ ಫ್ಲಾಟ್ ಫಾರ್ಮ್ ಮತ್ತು ಟ್ರಿಪಲ್ ವಾಲ್ಯೂಮ್ ಏರ್ ಚೇಂಬರ್‌ಗಳನ್ನು ಉಳಿಸಿಕೊಂಡಿದೆ ಮತ್ತು ಮೀಸಲಾದ ಚಾಸಿಸ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಹೊಸ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಎಸ್‍ಯುವಿ ಡ್ಯಾಂಪರ್ ವಾಲ್ವಿಂಗ್ ಮತ್ತು ಬಾಡಿಯ ಕಂಟ್ರೋಲ್, ಸ್ಟೀರಿಂಗ್ ಪ್ರತಿಕ್ರಿಯೆಯನ್ನು ಸುಧಾರಿಸಲು ಸ್ಪ್ರಿಂಗ್ ವಾಲ್ಯೂಮ್ ಸ್ವಿಚಿಂಗ್ ಅನ್ನು ಹೊಂದಿದೆ. ಇಎಆರ್‌ಸಿ (ಎಲೆಕ್ಟ್ರಾನಿಕ್ ಆಕ್ಟಿವ್ ರೋಲ್ ಕಂಟ್ರೋಲ್) ಸಿಸ್ಟಂ ಚುರುಕುತನದ ಅರ್ಥವನ್ನು ಹೆಚ್ಚಿಸಲು ಮತ್ತು ದೊಡ್ಡ ಎಸ್‌ಯುವಿಯ ಡೈನಾಮಿಕ್ ಬ್ಯಾಲೆನ್ಸ್ ಅನ್ನು ಸುಧಾರಿಸಲು ಸ್ವಲ್ಪಮಟ್ಟಿಗೆ ಟ್ವೀಕ್ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಸ್ಟೈಲಿಂಗ್‌ಗೆ ಹೋದಂತೆ, ಆಸ್ಟನ್ ಮಾರ್ಟಿನ್ 707 ಎಸ್‍ಯುವಿ ಹೊಸ ಮುಂಭಾಗವನ್ನು ಹೊಂದಿದೆ, ಡಿಬಿಎಕ್ಸ್ ಕಾರು ದೊಡ್ಡದಾದ ಮುಂಭಾಗದ ಗ್ರಿಲ್ ಮತ್ತು ಹೊಸ ಏರ್ ಇನ್‌ಟೇಕ್‌ಗಳು ಮತ್ತು ಬ್ರೇಕ್ ಕೂಲಿಂಗ್ ಡಕ್ಟ್‌ಗಳೊಂದಿಗೆ DRL ಹೊಸ ವಿನ್ಯಾಸವನ್ನು ಪಡೆಯುತ್ತದೆ,

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಹೊಸ ಮುಂಭಾಗದ ಸ್ಪ್ಲಿಟರ್ ಪ್ರೊಫೈಲ್ ಅನ್ನು ಹೊಂದಿದೆ. ವಿಸ್ತರಿಸಿದ ಸ್ಯಾಟಿನ್ ಕ್ರೋಮ್ ಗ್ರಿಲ್ ಡಬಲ್ ವ್ಯಾನ್‌ಗಳನ್ನು ಹೊಂದಿದೆ, ಡಾರ್ಕ್ ಸ್ಯಾಟಿನ್ ಕ್ರೋಮ್ ವಿಂಡೋ ಸುತ್ತುವರೆದಿದೆ ಮತ್ತು ಹೊಸ ಲೌವ್ರೆಡ್ ಬಾನೆಟ್ ಬ್ಲೇಡ್‌ಗಳು ಒಟ್ಟಾರೆ ವಿನ್ಯಾಸವನ್ನು ಆಕರ್ಷಕವಾಗಿಸಿದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಈ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಹಿಂಭಾಗವು ರೂಫ್ ವಿಂಗ್‌ಗೆ ಹೊಸ ಲಿಪ್ ಸ್ಪಾಯ್ಲರ್ ಅನ್ನು ಹೊಂದಿದೆ, ಸ್ಯಾಟಿನ್ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ನೊಂದಿಗೆ ಹೊಸ ಎಕ್ಸಾಸ್ಟ್‌ನ ಡಿಫ್ಯೂಸರ್‌ಗೆ ಗ್ಲಾಸ್ ಬ್ಲ್ಯಾಕ್ ಟ್ರೀಟ್‌ಮೆಂಟ್ ಅನ್ನು ಸೇರಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಒಳಭಾಗವು ಡಾರ್ಕ್ ಕ್ರೋಮ್ ಫಿನಿಶ್ ಅನ್ನು ಸ್ವಿಚ್ ಗೇರ್ ಅನ್ನು ಸ್ಟ್ಯಾಂಡರ್ಡ್ ಹೊಂದಿದೆ. ಬ್ರೈಟ್ ಕ್ರೋಮ್ ಮತ್ತು ಕಾರ್ಬನ್ ಫೈಬರ್ ಅನ್ನು ಆಯ್ಕೆಯಾಗಿ ನಿರ್ದಿಷ್ಟಪಡಿಸಬಹುದು. ಪಿಯಾನೋ ಬ್ಲ್ಯಾಕ್ ವೆನಿರ್ ಕಾರ್ಬನ್ ಫೈಬರ್ ಅಥವಾ ಸಿಲ್ವರ್ ಮೆಟಲ್ ಮೆಶ್ ವೆನಿರ್ ಫಿನಿಶ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಸ್ಪೋರ್ಟ್ ಸೀಟ್‌ಗಳು, 16-ವೇ ಎಲೆಕ್ಟ್ರಿಕ್ ಹೊಂದಾಣಿಕೆ ಜೊತೆಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಹೀಟಿಂಗ್, ಹೆಡ್‌ರೆಸ್ಟ್‌ನಲ್ಲಿ ಕಸೂತಿ ಮಾಡಿದ ಆಸ್ಟನ್ ಮಾರ್ಟಿನ್ ವ್ಹಿಂಗ್ಸ್, ಸೀಟಿನ ಮಧ್ಯಭಾಗದಲ್ಲಿ ಕಾಂಟ್ರಾಸ್ಟ್ ಸ್ಟ್ರೈಪ್ ಮತ್ತು ಸೀಟಿನ ಹಿಂಭಾಗ ಮತ್ತು ಬೇಸ್ ಕುಶನ್‌ನಲ್ಲಿ ಎಲ್ಲಾವೂ ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ನ ಭಾಗವಾಗಿದೆ. ಇನ್ನು ಆಸ್ಟನ್ ಮಾರ್ಟಿನ್ ತನ್ನ ಡಿಬಿ‍ಎಕ್ಸ್ ಎಸ್‍‍ಯುವಿಯನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಹೊಸ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ 'ಡಿಬಿ' ಗ್ರಿಲ್, ಮಸ್ಕ್ಯುಲರ್ ಬಾನೆಟ್ ಲೈನ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಡಿಬಿಎಕ್ಸ್ ಹಿಂಭಾಗದಲ್ಲಿ ಬ್ರ್ಯಾಂಡ್ ಸಿಗ್ನೇಚರ್ ಡಕ್ಟೈಲ್ ಬೂಟ್-ಲಿಡ್ ಸ್ಪಾಯ್ಲರ್, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಬಂಪರ್ ನಲ್ಲಿ ಸಂಯೋಜಿಸಲ್ಪಟ್ಟ ಟ್ವಿನ್ ಎಕ್ಸಾಸ್ಟ್ ಗಳನ್ನು ಹೊಂದಿವೆ. ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍ಯುವಿಯಲ್ಲಿ 22 ಇಂಚಿನ ದೊಡ್ಡ ಅಲಾಯ್ ವ್ಹೀಲ್ ಗಳು, ಫ್ರೇಮ್‌ಲೆಸ್ ಡೋರ್ ಮತ್ತು ಕೂಪ್ ತರಹದ ರೂಫ್‌ಲೈನ್ ಅನ್ನು ಹೊಂದಿದೆ. ಹೊಸ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍ಯುವಿಯ ಒಳಭಾಗದಲ್ಲಿ ಸ್ಪೋರ್ಟಿ ಮತ್ತು ಐಷಾರಾಮಿ ಗುಣಲಕ್ಷಣಗಳನ್ನು ಸಂಯೋಜಿಸುವ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ. ಡಿಬಿಎಕ್ಸ್‌ನ ಕ್ಯಾಬಿನ್ ಸುತ್ತಲೂ ಪ್ರೀಮಿಯಂ ಲೆದರ್ ನಿಂದ ಕೂಡಿದ್ದು, ಡಿಬಿ11 ನಲ್ಲಿ ಕಂಡುಬರುವ ಸ್ಪೋರ್ಟಿ ಸೀಟುಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೊಂಡ ವಿಶ್ವದ ಅತ್ಯಂತ ಪವರ್‌ಪುಲ್‌ ಐಷಾರಾಮಿ ಎಸ್‍ಯುವಿ

ಈ ಡಿಬಿಎಕ್ಸ್ ಎಸ್‍ಯುವಿ ದೊಡ್ಡ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 10.25-ಇಂಚಿನ ಡಿಜಿಟಲ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಸ್ಟ್ಯಾಂಡರ್ಡ್ ಆಗಿ ಹೊಂದಿದೆ. 360 ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜಿಂಗ್, ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಇತರ ಫೀಚರ್ ಗಳನ್ನು ಸಹ ಲಭ್ಯವಿದೆ.

Most Read Articles

Kannada
English summary
New aston martin dbx 707 suv launched in india price design features details
Story first published: Saturday, October 1, 2022, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X