ಮುಂದಿನ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಚಲಿಸುವುದು ಇದೇ ಕಾರಿನಲ್ಲಿ..!

ಜೇಮ್ಸ್ ಬಾಂಡ್ ಸಿನಿಮಾ ಎಂದ ಕೂಡಲೇ ನಮ್ಮ ಕಣ್ಮುಂದೆ ಬರುವುದು ಆಕ್ಷನ್ ದೃಶ್ಯಗಳು, ಬುಲೆಟ್‍‍ಗಳ ಸದ್ದು, ವಿಲನ್‍‍ಗಳು, ಕಾರುಗಳ ಚೇಸಿಂಗ್ ಹಾಗೂ ಬಾಂಡ್ 007ನ ಆಸ್ಟನ್ ಮಾರ್ಟಿನ್ ಕಾರು. ಈ ಹಿಂದಿನ ಸರಣಿಯ ಸಿನಿಮಾಗಳಲ್ಲಿ ಆಸ್ಟನ್ ಮಾರ್ಟಿನ್‍‍ನ ಡಿಬಿ 5, ಡಿಬಿ‍ಎಸ್ ಕಾರುಗಳನ್ನು ಬಳಸಲಾಗಿತ್ತು.

ಮುಂದಿನ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಚಲಿಸುವುದು ಇದೇ ಕಾರಿನಲ್ಲಿ..!

ಜೇಮ್ಸ್ ಬಾಂಡ್ ಸರಣಿಯ ಹೊಸ ಸಿನಿಮಾ ನೋ ಟೈಂ ಟು ಡೈನಲ್ಲಿ ಹೊಸ ಆಸ್ಟನ್ ಮಾರ್ಟಿನ್ ಕಾರು ಬಳಕೆಯಾಗಲಿದೆ. ಈ ಕಾರು ಆಸ್ಟನ್ ಮಾರ್ಟಿನ್ ಕಂಪನಿಯ ವಲ್‍ಹಾಲಾ ಆಗಿದ್ದು, ಬ್ರಿಟಿಷ್ ಮೂಲದ ಕಾರು ತಯಾರಕ ಕಂಪನಿಯ ಸ್ಪೋರ್ಟ್ಸ್ ಕಾರ್ ಆಗಿದೆ.

ಮುಂದಿನ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಚಲಿಸುವುದು ಇದೇ ಕಾರಿನಲ್ಲಿ..!

ಈ ಹೊಸ ಕಾರಿನ ವೀಡಿಯೊವನ್ನು ಸೂಪರ್ ಕಾರ್ ಬ್ಲಾಂಡಿ ಯುಟ್ಯೂಬ್‍‍ನಲ್ಲಿ ಅಪ್‍‍ಲೋಡ್ ಮಾಡಿದೆ. ಈ ಕಾರ್ ಅನ್ನು ಬೇರೆ ಸೂಪರ್ ಕಾರುಗಳಿಗಿಂತ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ವಲ್‍‍ಹಾಲಾ ಮಿಡ್ ಎಂಜಿನ್ ಹೊಂದಿರುವ ಸ್ಪೋರ್ಟ್ಸ್ ಕಾರ್ ಆಗಿದೆ.

ಮುಂದಿನ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಚಲಿಸುವುದು ಇದೇ ಕಾರಿನಲ್ಲಿ..!

ಈ ಸ್ಪೋರ್ಟ್ಸ್ ಕಾರ್ ಅನ್ನು ಆಸ್ಟನ್ ಮಾರ್ಟಿನ್ ವಲ್‍‍ಕೈರ್ ಆಧಾರದ ಮೇಲೆ ತಯಾರಿಸಲಾಗಿದೆ. ವಲ್‍‍ಹಾಲಾ ಸ್ಪೋರ್ಟ್ಸ್ ಕಾರ್ ಅನ್ನು ಸಾರ್ವಜನಿಕ ರಸ್ತೆಯಲ್ಲಿಯೂ ಚಲಾಯಿಸಬಹುದಾಗಿದೆ. ಈ ವೀಡಿಯೊದಲ್ಲಿ ಈ ಕಾರು ಮುಂದಿನ ಜೇಮ್ಸ್ ಬಾಂಡ್ ಚಿತ್ರದಲ್ಲಿ ಇರಲಿದೆ ಎಂದು ಹೇಳಲಾಗಿದೆ.

ಮುಂದಿನ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಚಲಿಸುವುದು ಇದೇ ಕಾರಿನಲ್ಲಿ..!

ಈ ವೀಡಿಯೊದಲ್ಲಿ ಕಾರಿನ ಮುಂಭಾಗ, ಹಿಂಭಾಗ ಹಾಗೂ ಸೈಡ್‍‍ಗಳನ್ನು ತೋರಿಸಲಾಗಿದೆ. ಕಾರಿನ ತೂಕವನ್ನು ಕಡಿಮೆಗೊಳಿಸಲು ಈ ಕಾರಿನಲ್ಲಿರುವ ಹೆಡ್‍‍ಲೈಟ್, ಸೆಂಟರ್ ಕಂಸೋಲ್ ಹಾಗೂ ಸ್ವಿಚ್‍‍ಗಳನ್ನು 3ಡಿಯಲ್ಲಿ ಪ್ರಿಂಟ್ ಮಾಡಲಾಗಿದೆ.

ಮುಂದಿನ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಚಲಿಸುವುದು ಇದೇ ಕಾರಿನಲ್ಲಿ..!

ವಲ್‍‍ಹಾಲಾ ಮಿಡ್ ಎಂಜಿನ್ ಹೊಂದಿರುವ ಸೂಪರ್ ಕಾರ್ ಆಗಿರುವ ಕಾರಣಕ್ಕೆ, ಎಂಜಿನ್ ಅನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಕಾರಿನಲ್ಲಿರುವ ಕಾರ್ಬನ್ ಫೈಬರ್ ಸ್ಪಾಯಿಲರ್, ಕಾರು ಹೆಚ್ಚಿನ ವೇಗದಲ್ಲಿ ಸಾಗುವಾಗ ತಾನಾಗಿಯೇ ಬಾಗುತ್ತದೆ.

ಮುಂದಿನ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಚಲಿಸುವುದು ಇದೇ ಕಾರಿನಲ್ಲಿ..!

ಕಾರಿನ ಹಿಂಭಾಗವು ಹದ್ದಿನ ಶೇಪ್ ಹೊಂದಿದ್ದು, ವಿಂಗ್‍‍ಗಳು ತೆರೆದು ಕೊಂಡಿವೆ. ಈ ಕಾರು ಒ‍ಆರ್‍‍ವಿ‍ಎಂಗಳನ್ನು ಹೊಂದಿಲ್ಲ. ಇದರ ಬದಲಿಗೆ ಈ ಕಾರಿನಲ್ಲಿ ಟ್ರಾಫಿಕ್ ಹಾಗೂ ಹಿಂಬದಿಯಲ್ಲಿ ಬರುವ ವಾಹನಗಳನ್ನು ಕಾಣಲು ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಮುಂದಿನ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಚಲಿಸುವುದು ಇದೇ ಕಾರಿನಲ್ಲಿ..!

ಕಾರಿನ ಒಳಗೆ ಸ್ಪೇಸ್‍‍ಶಿಪ್ ರೀತಿಯ ಸ್ಟೀಯರಿಂಗ್ ವ್ಹೀಲ್ ಹಾಗೂ ವಿವಿಧ ಮಾಹಿತಿಗಳನ್ನು ನೀಡಲು ಸ್ಕ್ರೀನ್‍‍ಗಳನ್ನು ನೀಡಲಾಗಿದೆ. ವಲ್‍‍ಹಾಲಾ ಕಾರಿನಲ್ಲಿರುವ ಸೀಟುಗಳನ್ನು ಬಾಲಿಸ್ಟಿಕ್ ನೈಲಾನ್‍‍ನಿಂದ ತಯಾರಿಸಲಾಗಿದೆ.

ಈ ಬಾಲಿಸ್ಟಿಕ್ ನೈಲಾನ್ ಅನ್ನು ಮಿಲಿಟರಿಗಳಲ್ಲಿ ಬಳಸಲಾಗುತ್ತದೆ. ವಲ್‍‍ಹಾಲಾ ಹೈಬ್ರಿಡ್ ಸೂಪರ್ ಕಾರಿನಲ್ಲಿ ಟ್ವಿನ್ ಟರ್ಬೊ ವಿ6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 985 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಮುಂದಿನ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಚಲಿಸುವುದು ಇದೇ ಕಾರಿನಲ್ಲಿ..!

ಆಸ್ಟನ್ ಮಾರ್ಟಿನ್ ಕಂಪನಿಯು ವಲ್‍‍ಹಾಲಾ ಕಾರಿನ 500 ಯುನಿಟ್‍‍ಗಳನ್ನು ಮಾತ್ರ ಉತ್ಪಾದಿಸಲಿದೆ. ಈ ಸೂಪರ್ ಕಾರು ಮುಂಬರುವ ಜೇಮ್ಸ್ ಬಾಂಡ್ ಚಿತ್ರದಲ್ಲಿ ಡಿಬಿ5, ಡಿಬಿ‍ಎಸ್ ಸೂಪರ್ ಲೆಗೆರಾ ಹಾಗೂ ಆಸ್ಟನ್ ಮಾರ್ಟಿನ್ ವಿ8 ಕಾರುಗಳ ಜೊತೆಗೆ ಕಾಣಿಸಿಕೊಳ್ಳಲಿದೆ.

Most Read Articles

Kannada
English summary
This is the car that James Bond is going to drive in his next movie. Read in Kannada.
Story first published: Wednesday, February 12, 2020, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X