ಕೋವಿಡ್‌ನಲ್ಲಿ ಬಹುಕೋಟಿ ಆದಾಯ! ಲಸಿಕೆಗಳ ರಾಜ 10 ಕೋಟಿ ರೂ. ಫೆರಾರಿ ಕಾರು ಖರೀದಿ

ಸೆಲೆಬ್ರಿಟಿಗಳಂತೆ, ಉದ್ಯಮಿಗಳು ಕೂಡ ಕಾರುಗಳ ಬಗ್ಗೆ ಉತ್ಸಾಹ ಹೊಂದಿರುತ್ತಾರೆ, ಹೈ ಪರ್ಫಾಮೆನ್ಸ್ ಕಾರುಗಳ ಚಾಲನಾ ಅನುಭವ ಪಡೆಯಲು ವೈವಿಧ್ಯಮಯ ಕಾರು ಸಂಗ್ರಹವನ್ನು ಹೊಂದಿರುತ್ತಾರೆ. ಅಂಥವರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಕೂಡ ಒಬ್ಬರು. ಇವರು ಇತ್ತೀಚೆಗೆ ಹೊಚ್ಚ ಹೊಸ ಫೆರಾರಿ ಪುರೊಸಾಂಗೆವನ್ನು ಖರೀದಿಸಿದ್ದಾರೆ.

ಯಾರೀ ಅದಾರ್ ಪೂನಾವಾಲಾ?: ಅದಾರ್ ಪೂನಾವಾಲಾ ಅವರು ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಗಿದ್ದಾರೆ. ಇವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಸೈರಸ್ ಪೂನಾವಾಲಾ ಅವರ ಪುತ್ರ. ಕೋವಿಡ್ ಅವಧಿಯಲ್ಲಿ ಇವರ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೆಚ್ಚಾಗಿ ಕೇಳಿಬಂದ ಹೆಸರುಗಳಲ್ಲಿ ಒಂದಾಗಿತ್ತು. ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಸೈರಸ್ ಪೂನಾವಾಲಾ 1,07,533 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದಾರೆ. ಭಾರತದ ಮುಂದಿನ ತಲೆಮಾರಿನ ಬಿಲಿಯನೇರ್‌ಗಳಲ್ಲಿ ಒಬ್ಬರಾದ ಅದಾರ್ ಪೂನಾವಾಲಾ ತಮ್ಮ ಐಷಾರಾಮಿ ಜೀವನಶೈಲಿಗಾಗಿ ಆಗಾಗ್ಗೆ ಸುದ್ದಿಯಲ್ಲಿದ್ದರು.

businessman-adar-poonawalla-buys-ferrari-purosangue

ಅದಾರ್ ಪೂನಾವಾಲ ಬಹಳ ವಿರಳವಾಗಿ ಕಾಣಸಿಗುವ ಫೆರಾರಿ ಪುರೊಸಾಂಗೆವನ್ನು ಖರೀದಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರ ಫೆರಾರಿಯ ಚಿತ್ರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಚಿತ್ರಗಳಲ್ಲಿ ಕಟ್ಟಡವೊಂದರ ಹೊರಗೆ ನಿಲ್ಲಿಸಲಾದ ಕಪ್ಪು ಪುರೊಸಾಂಗೆ ಕಾರಿನ ನೋಂದಣಿ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿಯವರೆಗೆ ಭಾರತದಲ್ಲಿ ನೋಡಿದ್ದಕ್ಕಿಂತ ಭಿನ್ನವಾಗಿದೆ. ಏಕೆಂದರೆ ಆದರ್ ಪೂನಾವಾಲಾ ಈ ಕಾರನ್ನು ಭಾರತದಲ್ಲಿ ಖರೀದಿಸಿಲ್ಲ. ಇದನ್ನು ಲಂಡನ್‌ನಲ್ಲಿ ಖರೀದಿಸಿದ್ದಾರೆ.

ಆದರೆ ಅದಾರ್ ಪೂನಾವಾಲ ಈ ದುಬಾರಿ ಫೆರಾರಿ ಪುರೊಸಾಂಗೆವನ್ನು ಹೊಂದಿರುವ ಮೊದಲ ಭಾರತೀಯರೇನಲ್ಲ. ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಭೂಪೇಶ್ ರೆಡ್ಡಿ ಈ ಎಸ್‌ವಿಯನ್ನು ಖರೀದಿಸಿದ ಮೊದಲ ಭಾರತೀಯರಾಗಿದ್ದಾರೆ. ಅವರು ಈ ಫೆರಾರಿಯನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ಮೊದಲೇ ಖರೀದಿಸಿದ್ದರು.

businessman-adar-poonawalla-buys-ferrari-purosangue

ಭೂಪೇಶ್ ರೆಡ್ಡಿ ನಂತರ, ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರು ಕೂಡ ಈ ಬಹುಕೋಟಿ ಎಸ್‌ಯುವಿಯನ್ನು ಖರೀದಿಸಿದರು. ಜಾಮ್‌ನಗರದಲ್ಲಿ ತಮ್ಮ ಮಗನ ವಿವಾಹಪೂರ್ವ ಆಚರಣೆಯ ಸಮಯದಲ್ಲಿ ಶಾರುಖ್ ಖಾನ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬಿಡಲು ಅವರು ಇದೇ ಎಸ್‌ಯುವಿಯನ್ನು ಬಳಸಿದ್ದರು. ಇವರ ಬಳಿಕ ಅದಾರ್ ಪೂನಾವಾಲಾ ಕಪ್ಪು ಬಣ್ಣದ ಫೆರಾರಿ ಪುರೊಸಾಂಗೆವನ್ನು ಖರೀದಿಸಿದ್ದಾರೆ. ಫೆರಾರಿ ತನ್ನ ಈ ಮೊದಲ ಎಸ್‌ಯುವಿಯನ್ನು 2022 ರಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಿತು. ಹಾಗೆಯೇ ಇದನ್ನು ಕಳೆದ ತಿಂಗಳು ಭಾರತದಲ್ಲಿಯೂ ಬಿಡುಗಡೆ ಮಾಡಲಾಯಿತು. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.10.5 ಕೋಟಿಗಳಾಗಿದೆ.

ಫೆರಾರಿ ಪುರೊಸಾಂಗೆ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು ಬಹುಶಃ ಅದರ ವಿಭಾಗದಲ್ಲಿ ನ್ಯಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ ನೀಡಿರುವ ಏಕೈಕ ಕಾರು ಎನ್ನಲಾಗಿದೆ. ಈ ಕಾರು 6.5 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮೂಲಕ 725 ಬಿಹೆಚ್‌ಪಿ ಪವರ್ ಹಾಗೂ 716 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಲ್ಯಾಂಬೊರ್ಗಿನಿ ಉರುಸ್ ಮತ್ತು ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ ಕಾರುಗಳಿಗೆ ಪೈಪೋಟಿ ನೀಡಲು ಫೆರಾರಿ ಪುರೊಸಾಂಗೆವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ, ಫೆರಾರಿ ಹೆಚ್ಚು ದುಬಾರಿಯಾಗಿದೆ. ಆದ್ರೂ ವಿಶ್ವಾದ್ಯಂತ ಈ ವಿರಳ ಫೆರಾರಿ ಪುರೋಸಾಂಗೆ ಎಸ್‌ಯುವಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ.

ಇನ್ನು ಅದಾರ್ ಪೂನಾವಾಲ ಅವರು ರೋಲ್ಸ್ ರಾಯ್ಸ್ ಕಾರುಗಳ ಅಭಿಮಾನಿಯಾಗಿದ್ದು, ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್ 8 ಐಷಾರಾಮಿ ಸೆಡಾನ್ ಹೊಂದಿದ್ದಾರೆ. ಅವರು ಫೆರಾರಿ 488 ಪಿಸ್ತಾ ಸೂಪರ್ ಕಾರ್ ಅನ್ನು ಸಹ ಹೊಂದಿದ್ದಾರೆ. ಬೆಂಟ್ಲೆ ಬೆಂಟೈಗಾ ಇಡಬ್ಲ್ಯೂಬಿ ಐಷಾರಾಮಿ ಎಸ್‌ಯುವಿ ಕೂಡ ಹೊಂದಿದ್ದಾರೆ.

More from DriveSpark

Article Published On: Wednesday, May 22, 2024, 19:05 [IST]
English summary
Businessman adar poonawalla buys ferrari purosangue
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+