ನಟಿ 'ಸಮಂತಾ' ಮಾಜಿ ಗಂಡನ ಮನೆ ಸೇರಿತು ರೂ.3.50 ಕೋಟಿಯ ಹೊಸ ಪೋರ್ಷೆ ಕಾರು

ದಕ್ಷಿಣ ಭಾರತದ ನಟ ಅಕ್ಕಿನೇನಿ ನಾಗ ಚೈತನ್ಯ ಅವರ ಬಗ್ಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಅವರ ಉತ್ತಮ ನಟನೆಗಾಗಿ ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ. ಹಾಗೆಯೇ ಬಹುಭಾಷಾ ನಟಿ ಸಮಂತಾರ ಮಾಜಿ ಪತಿಯಾಗಿದ್ದಾರೆ. ಅವರು ನಟನೆಯನ್ನು ಪ್ರೀತಿಸುವಷ್ಟೇ ಕಾರು-ಬೈಕ್‌ಗಳನ್ನು ಕೂಡ ಇಷ್ಟಪಡುತ್ತಾರೆ.

ಜಾಗತಿಕವಾಗಿ ಪೋರ್ಷೆ ಉತ್ಸಾಹಿಗಳು ಖರೀದಿಸಲು ಇಷ್ಟಪಡುವ ಪೋರ್ಷೆ 911 ಜಿಟಿ 3 ಆರ್‌ಎಸ್ ಕಾರನ್ನು ನಟ ಅಕ್ಕಿನೇನಿ ನಾಗಚೈತನ್ಯ ಇತ್ತೀಚಿಗೆ ಖರೀದಿಸಿ ಸುದ್ದಿಯಾಗಿದ್ದಾರೆ. 'ಪೊರ್ಷೆ ಚೆನ್ನೈ' ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾಗಚೈತನ್ಯ ಅವರಿಗೆ ಕಾರನ್ನು ಡೆಲಿವರಿ ನೀಡುವ ಫೋಟೋಗಳನ್ನು ಹಂಚಿಕೊಂಡಿದೆ. ಪೋರ್ಷೆ ಜಿಟಿ3 ಆರ್‌ಎಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.3.50 ಕೋಟಿಗಳಾಗಿದ್ದು, ನ್ಯಾಚುರಲ್ಲಿ ಆಸ್ಪಿರೇಟೆಡ್ 4-ಲೀ. 6 ಸಿಲಿಂಡರ್ ಎಂಜಿನ್ ಹೊಂದಿದೆ. ಇದು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನೊಂದಿಗೆ 518 ಬಿಹೆಚ್‌ಪಿ ಪವರ್ ಮತ್ತು 468 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

tollywood-actor-naga-chaitanya-bought-new-porsche-911-gt3-rs

ನಟ ನಾಗ ಚೈತನ್ಯ ಕಾರು ಸಂಗ್ರಹ"
ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ: ಎಸ್‌ಯುವಿಗಳ ಬಿಗ್‌ ಡ್ಯಾಡಿ ಎಂದು ಕರೆಸಿಕೊಳ್ಳುವ ಜಿ-ಕ್ಲಾಸ್ ಅಥವಾ ಜಿ-ವ್ಯಾಗನ್ ಅನ್ನು ಚೈತನ್ಯ ಹೊಂದಿದ್ದಾರೆ. ಇದು 4.0-ಲೀಟರ್ ವಿ8 ಎಂಜಿನ್ ಹೊಂದಿದ್ದು, 577 ಬಿಹೆಚ್‌ಪಿ ಪವರ್ ಮತ್ತು 480 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮರ್ಸಿಡಿಸ್ ಪ್ರಸ್ತುತ ಜಿ63 ಗ್ರ್ಯಾಂಡ್ ಎಡಿಷನ್ ಅನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.4 ಕೋಟಿಗಳಾಗಿದೆ.

ಪೋರ್ಷೆ 911: ಚೈತನ್ಯ ಅವರ ಗ್ಯಾರೇಜ್‌ನಲ್ಲಿ ಮತ್ತೊಂದು ಪೋರ್ಷೆ ಇದೆ, ಇದು ಹಳೆಯ 991 ತಲೆಮಾರಿನ ವಾಹನ. ಈ ಕಾರನ್ನು ಈಗ ಸ್ಥಗಿತಗೊಳಿಸಲಾಗಿದೆ ಆದರೆ ಜಾಗತಿಕವಾಗಿ ಸೆಕೆಂಡ್‌ ಹ್ಯಾಂಡ್ ಮಾರುಕಟ್ಟೆಯಲ್ಲಿ ಇನ್ನೂ ಬೇಡಿಕೆಯ ಮಾದರಿಯಾಗಿದೆ. 911 ಕಾರು 3.8 ಲೀ. ಫ್ಲಾಟ್ ಸಿಕ್ಸ್ ಎಂಜಿನ್ ಹೊಂದಿದ್ದು, 395 ಬಿಹೆಚ್‌ಪಿ ಪವರ್ ಹಾಗೂ 440 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

tollywood-actor-naga-chaitanya-bought-new-porsche-911-gt3-rs

ಫೆರಾರಿ 488 ಜಿಟಿಬಿ: ನಟ ನಾಗಚೈತನ್ಯ ಫೆರಾರಿ ಅಭಿಮಾನಿಯಾಗಿದ್ದು, 488 ಜಿಟಿಬಿ ಕಾರನ್ನು ಹೊಂದಿದ್ದಾರೆ. 2018ರ ಫೆರಾರಿ 488 ಜಿಟಿಬಿ ಕಾರನ್ನು ಕೆಂಪು ಬಣ್ಣದಲ್ಲಿ ಹೊಂದಿದ್ದು, ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 4.88 ಕೋಟಿಗಳಾಗಿದೆ. ಫೆರಾರಿ 488 ಜಿಟಿಬಿ ಕಾರು 3.9 ಲೀ. ಟ್ವಿನ್ ಟರ್ಬೊ ವಿ8 ಎಂಜಿನ್ ಸಹಾಯದಿಂದ 670 ಬಿಹೆಚ್‌ಪಿ ಪವರ್ ಮತ್ತು 760 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 - ಸ್ಪೀಡ್ ಡಿಸಿಟಿಯನ್ನು ಅಳವಡಿಸಲಾಗಿದ್ದು, ಇದು ಹಿಂಭಾಗದ ಚಕ್ರಗಳಿಗೆ ಪವರ್ ಕಳುಹಿಸುತ್ತದೆ.

ರೇಂಜ್ ರೋವರ್ ವೋಗ್: ಜಿ-ವ್ಯಾಗನ್ ಇದ್ದರೆ, ರೇಂಜ್ ರೋವರ್ ಸಹ ಅತ್ಯಗತ್ಯವಾದ್ದರಿಂದ ಚೈತನ್ಯ ಅವರ ಬಳಿ ರೇಂಜ್ ರೋವರ್ ವೋಗ್ ಕೂಡ ಇದೆ. ಲ್ಯಾಂಡ್ ರೋವರ್ ರೇಂಜ್ ರೋವರ್ ಸರಣಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.38 ಕೋಟಿಗಳಾಗಿದ್ದು, 4.4 ಲೀಟರಿನ ವಿ8 ಎಂಜಿನ್ ಆಯ್ಕೆಗಳನ್ನು ಈ ಕಾರು ಹೊಂದಿದೆ. 523 ಬಿಹೆಚ್‌ಪಿ ಪವರ್ ಹಾಗೂ 750 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಇವೆಲ್ಲವು ಸದ್ಯ ಅವರು ಬಳಕೆ ಮಾಡುತ್ತಿರುವ ವಾಹನಗಳಾಗಿವೆ. ಕೇವಲ ಕಾರುಗಳು ಮಾತ್ರ ವಲ್ಲದೇ ದುಬಾರಿ ಮೋಟಾರ್‌ಸೈಕಲ್‌ಗಳನ್ನು ಕೂಡ ನಟ ನಾಗಚೈತನ್ಯ ಹೊಂದಿದ್ದಾರೆ. ಇವೆಲ್ಲವು ತಮ್ಮ ಗ್ಯಾರೇಜ್‌ನಲ್ಲಿದ್ದು, ಆಗಾಗ್ಗೆ ವಾಹನಗಳ ಬಗ್ಗೆ ಅವರ ಅಭಿಮಾನಿಗಳೊಂದಿಗೆ ವಿಡಿಯೋ ಹಂಚಿಕೊಳ್ಳುತ್ತಾರೆ. ನಟನ ಹೊಸ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, May 21, 2024, 13:08 [IST]
English summary
Tollywood actor naga chaitanya bought new porsche 911 gt3 rs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+