ಆಟೋದಲ್ಲಿ ಬಂದ ಬಡ ನಟನಿಗೆ ತನ್ನ ಕಾರನ್ನೇ ಉಡುಗೊರೆ ನೀಡಿದ ಬಿರಿಯಾನಿ ಅಂಗಡಿ ಮಾಲೀಕ!
ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಕಾರನ್ನು ಖರಿದಿ ಮಾಡಿ ಅದರಲ್ಲಿ ಒಂದೆರಡು ರೌಂಡ್ ಹೋಗಿಬರಬೇಕು ಎಂಬ ಆಸೆಗಳು, ಕನಸುಗಳು ಇರುತ್ತದೆ. ತಮ್ಮ ಈ ಕನಸನ್ನು ಪೂರೈಸಲು ರಾತ್ರಿ ಹಗಲೆನ್ನದೆ ಕಷ್ಟಪಟ್ಟು ದುಡಿಯುತ್ತಾರೆ, ಹೀಗೆ ಒಂದಲ್ಲಾ ಒಂದು ದಿನ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಒಮ್ಮಿಂದೊಮ್ಮೆಲೇ ಕನಸು ನನಸಾಗುವ ಘಟನೆಗಳೂ ಸಹ ನಮ್ಮ ಸುತ್ತ ಮುತ್ತ ನಡೆಯುತ್ತಿರುತ್ತದೆ. ಇಲ್ಲಿ ಇದೀಗ ಆ ರೀತಿಯ ಘಟನೆಯೊಂದು ವರದಿಯಾಗಿದ್ದು ಎಲ್ಲರ ಗಮನ ಸೆಳೆದಿದೆ. ಬಿರಿಯಾನಿ ಆಂಗಡಿಯ ಮಾಲೀಕನೊಬ್ಬ ನಟನೊಬ್ಬನಿಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಹೌದು, ನಮ್ಮ ನೆರೆಯ ರಾಜ್ಯವಾದ ತಮಿಳು ನಾಡಿನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗುತ್ತಿದೆ. ತಮಿಳು ನಟ ಕೂಲ್ ಸುರೇಶ್ ಎಂಬವರಿಗೆ ಪ್ರಸಿದ್ದ ಪ್ರಸಿದ್ದ ಬಿರಿಯಾನಿ ಅಂಗಡಿಯ ಮಾಲೀಕ ಮಾರುತಿ ಸುಜುಕಿ ಬ್ರೆಝಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಟ ಆ ಮಾಲೀಕನನ್ನು ಭೇಟಿಯಾಗಲು ಹೋಗಿದ್ದಾಗ ಆತ ಯಾವುದರಲ್ಲಿ ಬಂದಿದ್ದೀರಿ ಎಂದು ಕೇಳಿದ್ದಾರೆ.

ಆ ಸಂಧರ್ಭದಲ್ಲಿ ನಟ, ತಾನು ಆಟೋದಲ್ಲಿ ಬಂದದ್ದಾಗಿಯೂ ಹೇಳಿಕೊಂಡಿದ್ದಾನೆ. ಇದನ್ನು ಕೇಳಿದ ಬಿರಿಯಾನಿ ಅಂಗಡಿ ಮಾಲೀಕ, ಕೂಡಲೇ ಕೂಲ್ ಸುರೇಶ್‌ಗೆ ತಮ್ಮ ಕಾರನ್ನು ಉಡುಗೊರೆಯಾಗಿ ನೀಡಿದ್ದು, ನಟ ಕೂಲ್ ಸುರೇಶ್‌ಗೆ ಅಚ್ಚರಿಯನ್ನು ಉಂಟು ಮಾಡಿದೆ. ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದ ಈ ನಟನ ಬಳಿ ಒಂದು ಸ್ವಂತ ಕಾರು ಸಹ ಇರಲಿಲ್ಲ. ಇದನ್ನರಿತ ಆ ಮಾಲೀಕ ಈ ಸುಜುಕಿ ಬ್ರೆಝಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇನ್ನು ನಟನಿಗೆ ಉಡುಗೊರೆಯಾಗಿ ಸಿಕ್ಕಿದ ಮಾರುತಿ ಸುಜುಕಿ ಬ್ರೆಝಾ ಕಾರಿನ ಕುರಿತಾಗಿ ನೋಡುವುದಾದರೆ, ಮಾರುತಿ ಸುಜುಕಿ ಬ್ರೆಝಾ ಬಗ್ಗೆ ನೋಡುವುದಾದರೆ, ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಎಸ್‌ಯುವಿಗಳಲ್ಲಿ ಮಾರುತಿ ಸುಜುಕಿ ಬ್ರೆಝಾ (Maruti Brezza) ಸಹ ಒಂದು. ಈ ಕಾರು ಭಾರತದಲ್ಲಿ ಒಂದು ಮಿಲಿಯನ್‌ಗೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza), ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಸೇರಿದಂತೆ 4 ರೂಪಾಂತರ, ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಎಕ್ಸುಬರಂಟ್ ಬ್ಲೂ, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಒಳಗೊಂಡಂತೆ 6 ಮೊನೊಟೋನ್, 3 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. 5- ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಎಸ್‌ಯುವಿ, 1.5 - ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಹೊಂದಿದೆ.
ಈ ಕಾರಿನ ಕುರಿತಾದ ಇತರ (Maruti Suzuki Brezza) ಮಾಹಿತಿಗಳನ್ನು ಹೇಳುವುದಾದರೆ, ಮಾರುತಿ ಸುಜುಕಿ ಭಾರತದ ಮಾರುಕಟ್ಟೆಯಲ್ಲಿ 2016ರಲ್ಲಿ ಈ ಕಾರನ್ನು ವಿಟಾರಾ ಬ್ರೆಝಾ (Vitara Brezza) ಹೆಸರಿನಲ್ಲಿ ಲಾಂಚ್ ಮಾಡಿತ್ತು. ಕಾಲಾಂತರದಲ್ಲಿ ಹೆಸರನ್ನು ಬದಲಾಯಿಸಿ, 'ಬ್ರೆಝಾ' ಎಂಬುದನ್ನು ಉಳಿಸಿಕೊಂಡಿತು. ಬಿಡುಗಡೆಗೊಂಡ ದಿನದಿಂದಲೂ ಇದಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಈವರೆಗೆ 10 ಲಕ್ಷ ಯುನಿಟ್ ಕಾರನ್ನು ಮಾರಾಟಗೊಳಿಸಿದ ಮೈಲಿಗಲ್ಲನ್ನು ಸಾಧಿಸಿದೆ.
ಈ ಕಾರು 103 PS ಗರಿಷ್ಠ ಪವರ್ ಹಾಗೂ 137 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಸಿಎನ್‌ಜಿ ಪವರ್ ಟ್ರೈನ್ ಪಡೆದಿರುವ ಕಾರು, ಇದೇ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಆದರೆ, 88 PS ಪವರ್, 121.5 Nm ಪೀಕ್ ಟಾರ್ಕ್ ಉತ್ಪಾದಿಸಲು ಶಕ್ತವಾಗಿದೆ.
ಈ ಮಾರುತಿ ಸುಜುಕಿ ಬ್ರೆಝಾ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4 - ಸ್ಪೀಕರ್ ಸೌಂಡ್ ಸಿಸ್ಟಮ್, ಸಿಂಗಲ್-ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








