ಅಪಘಾತದಲ್ಲಿ 20 ಕೋಟಿ ರು.ನ ದುಬಾರಿ ಕಾರ್ ಅಪ್ಪಚ್ಚಿ
ಚೀನಾದ ಚಾಲಕನೊಬ್ಬನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಈ ಕಾರಿನ ಕಥೆ ಕೊಂಚ ಆಸಕ್ತಿದಾಯಕವಾಗಿದೆ. ಈ ಕಾರನ್ನು ದುಬಾರಿ ಕಾರು ತಯಾರಕ ಕಂಪನಿ ಆಸ್ಟನ್ ಮಾರ್ಟಿನ್ ಅಭಿವೃದ್ಧಿಪಡಿಸಿದೆ. 2008ರಲ್ಲಿ ಪ್ಯಾರಿಸ್ ಮೋಟರ್ ಶೋನಲ್ಲಿ ಪ್ರದರ್ಶನಗೊಂಡ ಒನ್ 77 ಆಕರ್ಷಕ ವಿನ್ಯಾಸದ, ಶಕ್ತಿಶಾಲಿ ಮತ್ತು ದುಬಾರಿ ಕಾರು.
ಕಂಪನಿಯು ಒಟ್ಟಾರೆಯಾಗಿ ಕೇವಲ 77 ಸಂಖ್ಯೆಯ ಕಾರುಗಳನ್ನು ಮಾತ್ರ ಉತ್ಪಾದಿಸಿದೆ. ಹೀಗಾಗಿ ಈ ಕಾರಿನ ಹೆಸರು ಕೂಡ ಒನ್-77. ಕಳೆದ ವರ್ಷದಲ್ಲಿ ಕೊನೆಯ 77ನೇ ಕಾರು ಕೂಡ ಮಾರಾಟವಾಗಿದೆ.
ಆಸ್ಟನ್ ಮಾರ್ಟಿನ್ ಒನ್-77 ಕಾರು ಶಕ್ತಿಶಾಲಿ 7.3 ಲೀಟರಿನ ವಿ12 ಎಂಜಿನ್ ಹೊಂದಿದೆ. ಆಸ್ಟನ್ ಮಾರ್ಟಿನ್ ಒನ್77 ಕಾರು ಗರಿಷ್ಠ 750 ಹಾರ್ಸ್ ಪವರ್ ಮತ್ತು 750 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ಈ ಸ್ಪೋರ್ಟ್ಸ್ ಕಾರಿನಲ್ಲಿ ಕೇವಲ 3.5 ಸೆಕೆಂಡಿನಲ್ಲಿ 0-60 ಕಿ.ಮೀ. ವೇಗ ಪಡೆಯಬಹುದಾಗಿದೆ. ಈ ಕಾರಿನಲ್ಲಿ ಗಂಟೆಗೆ 357 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಈ ಕಾರಿನ ತೂಕ ಕೇವಲ 1,500 ಕೆ.ಜಿ.
ಈ ಕಾರಿನ ದರ ಸುಮಾರು 1.88 ದಶಲಕ್ಷ ಡಾಲರ್. ಅಂದರೆ ಭಾರತದಲ್ಲಿ ಆಮದು ಸುಂಕ, ಸ್ಥಳೀಯ ಸುಂಕವೆಲ್ಲ ಸೇರಿ ದರ ಸುಮಾರು 20 ಕೋಟಿ ರುಪಾಯಿಗೆ ದೊರಕಬಹುದು. ಆಧುನಿಕ ಇತಿಹಾಸದಲ್ಲಿ ಆಸ್ಟನ್ ಮಾರ್ಟಿನ್ ಒನ್ 77 ಕಾರು ಅತ್ಯಂತ ಆಕರ್ಷಕ ಕಾರೆಂದು ಹೆಚ್ಚಿನವರು ಅಭಿಪ್ರಾಯಪಡುತ್ತಾರೆ.
ಈಗ 77 ಕಾರುಗಳಲ್ಲಿ ಒಂದು ಕಾರು ಅಪಘಾತವಾಗಿದೆ. ಹೀಗಾಗಿ ಕಾರಿನ ಹೆಸರು ಒನ್-76 ಎಂದು ಇಡಬಹುದೋ ಎಂದು ಕೇಳದಿರಿ. ಕಂಪನಿಯು ಅಪಘಾತಗೊಂಡ ಕಾರನ್ನು ಮರು ನಿರ್ಮಾಣ ಮಾಡುವ ಭರವಸೆ ನೀಡಿದೆ.


Click it and Unblock the Notifications









