ಫೇಸ್‌ಬುಕ್ ಅಭಿಮಾನಿಗಳ ಆಸ್ಟನ್ ಮಾರ್ಟಿನ್ ಕಾರು

ಫೇಸ್‌ಬುಕ್ ಪುಟ ಲೈಕ್ ಮಾಡಿದ ಅಭಿಮಾನಿಗಳಿಗಾಗಿ ಆಸ್ಟನ್ ಮಾರ್ಟಿನ್ ವಿಶೇಷ ಕಾರೊಂದನ್ನು ಹೊರತಂದಿದೆ. ಫೇಸ್‌ಬುಕ್ ಫ್ಯಾನ್ ಪುಟದಲ್ಲಿ ಅಭಿಮಾನಿಗಳ ಸಂಖ್ಯೆ ಒಂದು ದಶಲಕ್ಷ ದಾಟಿದ ನೆನಪಿಗಾಗಿ ಕಂಪನಿಯು ಈ ವಿಶೇಷ ವಿನ್ಯಾಸದ ಕಾರನ್ನು ಪರಿಚಯಿಸಿದೆ.

ಕಂಪನಿಯು ಕೆಲವು ದಿನಗಳ ಹಿಂದೆ ಆಸ್ಟನ್ ಮಾರ್ಟಿನ್ ಡಿಬಿ9 ಎಂಬ ಐಷಾರಾಮಿ ವೇಗದ ಕಾರೊಂದನ್ನು ಪರಿಚಯಿಸಿತ್ತು. ಈ ಕಾರಿನ ಪ್ರಚಾರ ಕಾರ್ಯವನ್ನು ಕಳೆದ ನವಂಬರ್ ತಿಂಗಳಲ್ಲಿಯೇ ಕಂಪನಿ ಆರಂಭಿಸಿತ್ತು. ಅದಕ್ಕಾಗಿ ಕಂಪನಿಯು ಫೇಸ್ ಬುಕ್ ಫ್ಯಾನ್ ಪುಟವನ್ನು ನಿರ್ಮಿಸಿತ್ತು. ಆ ಪುಟವನ್ನು ಲೈಕ್ ಮಾಡಿದವರ ಸಂಖ್ಯೆ ಕಳೆದ ವರ್ಷದ ಅಂತ್ಯಕ್ಕೆ 1 ದಶಲಕ್ಷ ದಾಟಿತ್ತು. ಇದೀಗ ಈ ಸಂಖ್ಯೆ 17 ಲಕ್ಷ ದಾಟಿದೆ.

ಹತ್ತು ಲಕ್ಷ ಅಭಿಮಾನಿಗಳನ್ನು ಪಡೆದ ಸವಿನೆನಪಿಗೆ ಕಂಪನಿಯು ನೂತನ ಫೇಸ್‌ಬುಕ್ ಅಡಿಷನ್ ಡಿಬಿ9 ಕಾರು ವಿನ್ಯಾಸ ಮಾಡಿದೆ. ನೂತನ ಕಾರನ್ನು ಕಂಪನಿಯು ಫೇಸ್ ಬುಕ್ ಫ್ಯಾನ್ ಪುಟ ಲೈಕ್ ಮಾಡಿದವರಿಗೆ ಅರ್ಪಿಸಿದೆ.

"ಇದು ನೀವು ವಿನ್ಯಾಸ ಮಾಡಿದ ಕಾರು, ನಾವು ನಿರ್ಮಿಸಿದ್ದು ಮಾತ್ರ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಯಾಕೆಂದರೆ ಈ ಕಾರಿನ ವಿನ್ಯಾಸಕ್ಕೆ ಫೇಸ್ ಬುಕ್ ಅಭಿಮಾನಿಗಳು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ನಿಮ್ಮ ಕನಸಿನ ಆಸ್ಟನ್ ಮಾರ್ಟಿನ್ ಕಾರು ಹೇಗಿರಬೇಕು ಎಂದು ಆಸ್ಟನ್ ಮಾರ್ಟಿನ್ ಪ್ರಶ್ನಿಸಿತ್ತು. ಅದಕ್ಕೆ ಹಲವು ಐಡಿಯಾಗಳನ್ನು ಫೇಸ್ ಬುಕ್ ನಲ್ಲಿ ಜನರು ನೀಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಫೇಸ್ ಬುಕ್ ಬೃಹತ್ ಪಾಲು ಪಡೆದಿದೆ. ಹೆಚ್ಚಿನ ವಾಹನ ಕಂಪನಿಗಳು ಫೇಸ್‌ಬುಕ್ ಮೂಲಕ ತಮ್ಮ ವಾಹನಗಳ ಪ್ರಚಾರ ನಡೆಸುತ್ತಿವೆ. ನಿಮಗೆ ಯಾವುದೇ ವಾಹನ ಬೇಕಿದ್ದರೂ ಫೇಸ್ ಬುಕ್ ಪುಟದಲ್ಲಿ ಹುಡುಕಬಹುದು. ಇದು ವಾಹನ ಪ್ರೇಮಿಗಳನ್ನು ಭೇಟಿಯಾಗಲು ಕಾರು ಕಂಪನಿಗಳಿಗೆ ಸುಲಭವಾದ ಹಾದಿಯಾಗಿದೆ. ಗ್ರಾಹಕರಿಗೆ ತಾಜಾ ಮಾಹಿತಿಗಳನ್ನು ನೀಡಲು ಕೂಡ ಇದು ನೆರವಾಗಿದೆ.

More from DriveSpark

Article Published On: Friday, June 29, 2012, 15:01 [IST]
English summary
British luxury car maker, Aston Martin has recently unveiled a unique DB9 facebook edition at their Gaydon Headquarters. Aston Martin has reached more than 1 million fans on Facebook. To celebrate this Aston Martin has unveiled this special edition car called DB9 1M.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+