120 kmpl ಮೈಲೇಜ್ ಕಾರು ಅಂತೆ; ನಂಬ್ತೀರಾ?
ನಂಬಿದ್ರೆ ನಂಬಿ ಇಲದಿದ್ರೆ ಬಿಟ್ಟುಬಿಡಿ. ಯಾಕೆಂದರೆ ಇದನ್ನು ನಮ್ಮಿಂದಲೂ ನಂಬಲಾಗತ್ತಿಲ್ಲ. ಯಾಕೆಂದರೆ ಕಾರೊಂದು ಗರಿಷ್ಠ ಅಬ್ಬಬ್ಬಾಅಂದರೆ ಪ್ರತಿ ಲೀಟರ್‌ಗೆ 25 ಕೀ. ಮೀ ಮೈಲೇಜ್ ಕೊಡಬಹುದಪ್ಪಾ. ಆದರೆ ಜಗತ್ತಿನ ಮುಂಚೂಣಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಆಡಿ ಲೀಟರ್‌ಗೆ 120 ಕೀ. ಮೀ. ಮೈಲೇಜ್ ನೀಡುವ ಕಾರೊಂದನ್ನು ತಯಾರಿಸಲು ಹೊರಟಿದೆ.
ಫೋಕ್ಸ್‌ವ್ಯಾಗನ್‌ನ ಎಕ್ಸ್‌ಎಲ್1 ಕಾನ್ಸೆಪ್ಟ್‌ನಿಂದ ಸ್ಫೂರ್ತಿ ಪಡೆದಿರುವ ಆಡಿ ಇಂತಹದೊಂದು ಸಣ್ಣ ಕಾರು ನಿರ್ಮಿಸಲು ಮುಂದಾಗುತ್ತಿದೆ. ಆಡಿ ಎ1 ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಈ ನಾಲ್ಕು ಸೀಟಿನ ಸಣ್ಣ ಕಾರು ದೈನಂದಿನ ಬಳಕೆಗೆ ಉಪಯೋಗಕ್ಕೆ ಬರುವಂತೆ ತಯಾರಿಸಲಾಗುತ್ತಿದೆ.
ಪ್ರಮುಖವಾಗಿ ಯುವ ಜನಾಂಗವನ್ನು ಗುರಿಯಾರಿರಿಸಿಕೊಂಡು ಆಡಿ ಕಾರನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೆ ಕಾರು ಹೊಂದಿರುವ ಎಲ್ಲ ಘಟಕಗಳನ್ನು ಈ ಸಣ್ಣ ಸಿಟಿ ಕಾರು ಹೊಂದಿರಲಿದೆ. ಹಾಗೆಯೇ ಮತ್ತಷ್ಟು ಹಗುರವಾಗಿರಲಿದೆ.
ಬ್ರಿಟನ್ ಮ್ಯಾಗಜಿನ್ ಆಟೋಕಾರ್ ಡಾಟ್ ಕೊ ಟಾಟ್ ಯುಕೆ ಈ ವರದಿ ಮಾಡಿದೆ. ಆದರೆ ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1 ಕಾನ್ಸೆಪ್ಟ್‌ನಲ್ಲಿ ಆಳವಡಿಸಲಾದ 800ಸಿಸಿ ಟ್ವಿನ್-ಸಿಲಿಂಡರ್ ಟಿಡಿಐ ಟರ್ಬೊಡೀಸೆಲ್ ಎಂಜಿನ್ ಬದಲು ಆಡಿ ಎ1 ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಲೀಟರ್ ಎಂಜಿನ್ ಪ್ರಯೋಗಿಸಲಾಗುವುದು.
ಬಿಎಂಡಬ್ಲ್ಯು ಅಲ್ಟ್ರಾ ದಕ್ಷತೆಯ ಐ3 ಹ್ಯಾಚ್‌ಬ್ಯಾಕ್ ಕಾರುಗಳೊಂದಿಗೆ ಮಾರುಕಟ್ಟೆಗೆ ಆಗಮಿಸುತ್ತಿರುವುದರಿಂದ ಇದಕ್ಕೆ ತಕ್ಕ ಪ್ರತಿಸ್ಪರ್ಧಿಯೆನಿಸಲು ಆಡಿಯಿಂದ ಇಂತಹದೊಂದು ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ನಿಮ್ಮ ಮಾಹಿತಿಗಾಗಿ, ಬಿಎಂಡಬ್ಲ್ಯು ಈಗಾಗಲೇ ಐ ಬ್ರಾಂಡ್ ಕಾರುಗಳ ನಿರ್ಮಾಣದಲ್ಲಿದೆ. ಹಾಗಾಗಿ ಆಡಿ ಸಣ್ಣ ಕಾರು ಕಠಿಣ ಪ್ರತಿಸ್ಪರ್ಧಿಯೆನಿಸಲಿದೆ.


Click it and Unblock the Notifications









