ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಮತ್ತೆ ಆಡಿ ಫಸ್ಟ್

ಐಷಾರಾಮಿ ಕಾರು ತಯಾರಿಕಾ ಕಂಪನಿ ಏಪ್ರಿಲ್ ತಿಂಗಳಿನಲ್ಲಿ ಲಗ್ಷುರಿ ಕಾರು ಮಾರಾಟದಲ್ಲಿ ಗೆಲುವು ಪಡೆದಿದೆ. ಸುಮಾರು ಒಂದು ವರ್ಷದ ನಂತರ ಜರ್ಮನಿಯ ಬಿಎಂಡಬ್ಲ್ಯು ಕಂಪನಿಯನ್ನು ಹಿಂದಿಕ್ಕಿದೆ. ಚೀನಾ, ಅಮೆರಿಕ ಮತ್ತು ರಷ್ಯಾ ದೇಶಗಳಲ್ಲಿ ಆಡಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿರುವುದೇ ಬಿಎಂಡಬ್ಲ್ಯು ಕಂಪನಿಯನ್ನು ಹಿಂದಿಕ್ಕಲು ಪ್ರಮುಖ ಕಾರಣವಾಗಿದೆ.

2012ರ ಏಪ್ರಿಲ್ ತಿಂಗಳಲ್ಲಿ ಆಡಿ ಕಾರುಗಳು ಮತ್ತು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಗಳ ಮಾರಾಟ 1,25,200 ಯುನಿಟಿಗೆ ತಲುಪಿದ್ದು ಶೇಕಡ 14.4ರಷ್ಟು ಏರಿಕೆ ದಾಖಲಿಸಿದೆ. ಇದೇ ಸಮಯದಲ್ಲಿ ಬಿಎಂಡಬ್ಲ್ಯು ಕಂಪನಿಯು ಸುಮಾರು 1,21,476 ಕಾರುಗಳನ್ನು ಮಾರಾಟ ಮಾಡಿ ಶೇಕಡ 7.4ರಷ್ಟು ಏರಿಕೆ ದಾಖಲಿಸಿದೆ.

ಕಳೆದ ವರ್ಷದ ಜನವರಿ ತಿಂಗಳಲ್ಲಿ ಬಿಎಂಡಬ್ಲ್ಯು ಕಂಪನಿಯನ್ನು ಮಾರಾಟದಲ್ಲಿ ಆಡಿ ಹಿಂದಿಕ್ಕಿತ್ತು. ತದನಂತರದ ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಆಡಿ ಅಗ್ರಸ್ಥಾನಕ್ಕೆ ತಲುಪಿದೆ. ಆಡಿ ಕಂಪನಿಯು 2020ನೇ ಇಸವಿಗೆ 20 ಲಕ್ಷ ವಾಹನ ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

"ಮುಂದಿನ ನಾಲ್ಕರಿಂದ ಐದು ವರ್ಷಗಳ ಕಾಲ ಬಿಎಂಡಬ್ಲ್ಯು ಕಂಪನಿಗೆ ಆಡಿ ಕಂಪನಿಯು ನಂಬರ್ ಒನ್ ಸವಾಲುದಾರ ಕಂಪನಿಯಾಗಿ ಉಳಿಯಲಿದೆ ಎಂದು ವಾಹನ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಫೋಕ್ಸ್ ವ್ಯಾಗನ್ ಕಂಪನಿಯ ಸಂಪನ್ಮೂಲದ ನೆರವಿನಿಂದ ಆಡಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಭಾರತದಲ್ಲೂ ಆಡಿ ಕಂಪನಿಯು ಪಾರಮ್ಯ ಮೆರೆಯುತ್ತಿದೆ. 2007ಕ್ಕೆ ದೇಶಕ್ಕೆ ಆಗಮಿಸಿದ ಆಡಿ ಇದೀಗ ದೇಶದಲ್ಲಿ ಸುಮಾರು 15 ವರ್ಷಗಳಿಂದ ಇದ್ದ ಮರ್ಸಿಡಿಸ್ ಬೆಂಝ್ ಕಂಪನಿಯನ್ನು ಹಿಂದಿಕ್ಕಿದೆ. ಆದರೆ ದೇಶದ ಲಗ್ಷುರಿ ಕಾರು ಮಾರುಕಟ್ಟೆಯಲ್ಲಿ ಇನ್ನೂ ಬಿಎಂಡಬ್ಲ್ಯು ಅಗ್ರ ಸ್ಥಾನದಲ್ಲಿದ್ದು, ಆಡಿ ಎರಡನೇ ಸ್ಥಾನದಲ್ಲಿದೆ.

More from DriveSpark

Article Published On: Thursday, May 10, 2012, 11:43 [IST]
English summary
Luxury carmaker Audi has emerged winner in April car sales outselling German counterpart BMW for the first time in more than a year. Audi's victory against BMW, the market leader can be accounted to its continued high demand in China, United States and Russia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+