ಆಡಿ ಖರೀದಿಸುವುದಾದರೆ ಈಗಲೇ ಖರೀದಿಸಿ!
ಇಲ್ಲದಿದ್ರೆ..?
ಒಂದು ವೇಳೆ ನೀವು ಸ್ವಲ್ಪನೂ ತಡ ಮಾಡಿದ್ರೆ ಆಮೇಲೆ ಆಡಿ ಖರೀದಿ ಮಾಡುವ ಆಲೋಚನೆ ಸದ್ಯಕ್ಕೆ ಬಿಟ್ಟುಬಿಡುವುದು ಒಳಿತು. ಯಾಕೆಂದರೆ ಮುಂದಿನ ವರ್ಷ ಜನವರಿ ತಿಂಗಳಿನಿಂದ ಜರ್ಮನ್ ಐಷಾರಾಮಿ ಕಾರು ತಯಾರಕರಾದ ಆಡಿ ತನ್ನ ಕಾರಿನ ಬೆಲೆಯನ್ನು ಹೆಚ್ಚಳಗೊಳಿಸುತ್ತಿದೆ.
ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಎಲ್ಲ ಆಡಿ ಮಾಡೆಲ್‌ಗಳಿಗೂ ಪರಿಷ್ಕೃತ ದರ ಅನ್ವಯವಾಗಲಿದೆ. 2013 ಜನವರಿ 1ರಿಂದ ಶೇಕಡಾ 5ರಷ್ಟು ದರ ಹೆಚ್ಚಳಗೊಳಿಸಲಾಗುತ್ತಿದೆ ಎಂದು ಆಡಿ ಕಂಪನಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ಆಡಿ ನಿರ್ದೇಶಕ ಏನು ಹೇಳುತ್ತಾರೆ? ಒಟ್ಟಾರೆಯಾಗಿನ ಮಾರುಕಟ್ಟೆ ಚಿತ್ರಣ ಸವಾಲಿನದ್ದಾಗಿದೆ.
ಆಮದು ಸುಂಕ ಹೆಚ್ಚಳ, ರೂಪಾಯಿ ದರ ಕುಸಿತ ಹಾಗೂ ಇಂಧನ ದರಗಳಲ್ಲಿನ ಹೆಚ್ಚಳದಿಂದಾಗಿ ದೇಶದಲ್ಲಿ ಕಾರಿನ ದರ ಹೆಚ್ಚಳ ಮಾಡುವುದು ಅನಿವಾರ್ಯವೆನಿಸಿದೆ. ಹಾಗಿದ್ದರೂ ಗ್ರಾಹಕರಿಗಾಗಿ ಆಡಿ ಫಿನಾನ್ಸ್‌ನಿಂದ ಹೊಸ ಹಣಕಾಸು ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇಷ್ಟೆಲ್ಲ ಸವಾಲುಗಳಿದ್ದರೂ ಭಾರತದ ಲಗ್ಷುರಿ ಕಾರು ಸೆಗ್ಮೆಂಟ್‌ನಲ್ಲಿ ಆಡಿ ವೃದ್ಧಿ ದರ ದಾಖಲಿಸಿದೆ. ಒಟ್ಟು 23 ಡೀಲರ್‌ಶಿಪ್‌ಗಳಿಂದ ಆಡಿ ಪ್ರಾಬಲ್ಯವನ್ನು ಮುಂದುವರಿಸಿದೆ. 2012 ಅಂತ್ಯಗೊಳ್ಳುವ ವೇಳೆಗೆ 8000 ಯುನಿಟ್ ಸೇಲ್ ಗುರಿಯಿರಿಸಿಕೊಳ್ಳಲಾಗಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಆಡಿ 850 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇಕಡಾ 76ರಷ್ಟು ವೃದ್ಧಿ ದರ ದಾಖಲಿಸಿದೆ. ಒಟ್ಟಾರೆಯಾಗಿ ಜನವರಿಯಿಂದ ಅಕ್ಟೋಬರ್ ವರೆಗೆ 7267 ಕಾರುಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 55ರಷ್ಟು ಏರಿಕೆ ದಾಖಲಿಸಿಕೊಂಡಿದೆ.


Click it and Unblock the Notifications









