ಭಾರತೀಯರಿಗೆ ಮಾಮೂಲಿ ಹಾರನ್ ಸಾಕಾಗೊಲ್ಲ...
"ದೇಶದ ಸಂಚಾರ ದಟ್ಟಣೆಯಲ್ಲಿ ಹಾರನ್ ಗದ್ದಲ ಹೆಚ್ಚಿರುತ್ತದೆ. ಯುರೋಪ್ ದೇಶಗಳಲ್ಲಿ ಬಳಸುವ ಹಾರನ್ ಸದ್ದಿಗಿಂತ ಕೊಂಚ ಹೆಚ್ಚು ಸ್ಟ್ರಾಂಗ್ ಆಗಿರುವ ಹಾರನ್ ಇಲ್ಲಿಗೆ ಅಗತ್ಯವಿದೆ. ವಿದೇಶಿ ಹಾರನ್ ಗಳು ಇಲ್ಲಿ ಒಂದೆರಡು ವಾರದಲ್ಲಿ ಕೆಟ್ಟು ಹೋಗಬಹುದು" ಎಂದು ಅವರು ಹೇಳಿದ್ದಾರೆ.
"ರಸ್ತೆಯ ಗುಣಮಟ್ಟ, ಹೆಚ್ಚು ತಿರುವುಗಳು, ರಸ್ತೆಯಲ್ಲಿ ಅಡ್ಡಾಡುವ ದನಕರುಗಳು, ಕುರಿಮಂದೆಗಳು, ಸೈಕಲ್ ಮತ್ತು ರಿಕ್ಷಾ ವಾಲಾಗಳು, ರಸ್ತೆಯಲ್ಲಿ ಅನಿರೀಕ್ಷಿತವಾಗಿ ಅಡ್ಡಬರುವ ಪಾದಚಾರಿಗಳು... ಇತ್ಯಾದಿ ಕಾರಣಗಳಿಂದ ಕೆಲವೊಮ್ಮೆ ಇಲ್ಲಿನ ಚಾಲಕರಿಗೆ ಕರ್ಕಶ ಹಾರನ್ ಬಳಸುವುದು ಅನಿವಾರ್ಯ" ಎಂದು ಆಡಿ ಎಂಡಿ ವಿವರಿಸಿದ್ದಾರೆ.
ಈ ಕಾರಣಕ್ಕಾಗಿ ವಿದೇಶಿ ಕಂಪನಿಗಳು ಇಲ್ಲಿನ ವಾಹನಗಳಿಗೆ ಸದ್ದು ಜಾಸ್ತಿಯಿರುವ ಹಾರನ್ ಅಳವಡಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಂತ ನಗರಗಳಲ್ಲಿ ನೀರವತೆ ಅನ್ನೋದು ಅಪರೂಪದ ಪದ. ಇಲ್ಲಿ ಸದಾ ವಾಹನಗಳ ಗಿಜಿಬಿಜಿ. ಕಿವಿಗಂತೂ ರೆಸ್ಟ್ ಸಿಗಲು ಸಾಧ್ಯನೇ ಇಲ್ಲ. ವಾಹನ ಚಲಿಸುವ ಸದ್ದು, ಎಂಜಿನ್ ಸದ್ದು ಸಾಲದೆಂಬಂತೆ ಅನಗತ್ಯವಾಗಿರುವ ಹಾರ್ನ್ ಸದ್ದು ಕಿವಿಗೆ ಅಪ್ಪಲಿಸುತ್ತಲೇ ಇರುತ್ತದೆ. ಇಲ್ಲಿನ ಹಾರ್ನ್ ಕಿರಿಕಿರಿ ತಪ್ಪಿಸಲು ಅಪರೇಷನ್ ಹಾರನ್ ನಂತಹ ಕ್ರಮಗಳನ್ನು ಪೊಲೀಸರು ಕೈಗೊಳ್ಳುವುದು ಒಳ್ಳೆಯದು.
ವಿಶೇಷ ಲೇಖನ ಓದಿ: ಕ್ರೀ.. ಕ್ರೀ.. ಕ್ರೀ,, ಹಾರನ್ ಮೆಲ್ಲಗೆ ಹಾಕ್ರಿ...


Click it and Unblock the Notifications









