ಆಡಿ ಎಸ್4: ಶಕ್ತಿಮಾನ್ ಕಾರು ರಸ್ತೆಗೆ, ದರ 45 ಲಕ್ಷ ರುಪಾಯಿ

ದೇಶದ ರಸ್ತೆಗೆ ಅತ್ಯಧಿಕ ಕಾರ್ಯಕ್ಷಮತೆಯ ಎಸ್4 ಆವೃತ್ತಿಯೊಂದನ್ನು ಜರ್ಮನಿಯ ಕಾರು ತಯಾರಿಕಾ ಕಂಪನಿ ಆಡಿ ಪರಿಚಯಿಸಿದೆ. ನೂತನ ಆಡಿ ಎಸ್4 ಎಕ್ಸ್ ಶೋರೂಂ ದರ ಸುಮಾರು 45 ಲಕ್ಷ ರುಪಾಯಿ. ಆಡಿ ಎ4 ಕಾರಿನ ದೊಡ್ಡಣ್ಣನಾಗಿರುವ ಎಸ್4 ದೇಶದಲ್ಲಿರುವ ಕಂಪನಿಯ 19 ಶೋರೂಂಗಳಲ್ಲೂ ಲಭ್ಯವಿರಲಿದೆ.

"ಪ್ರಸಕ್ತ ವರ್ಷದ ಮೊದಲ ಐದು ತಿಂಗಳ ಮಾರಾಟ ಅತ್ಯುತ್ತಮವಾಗಿದೆ ಮತ್ತು ನೂತನ ಆಡಿ ಎಸ್4 ಜೊತೆಗೆ, ಎ4, ಆಟಿ ಟಿಟಿ ನೆರವಿನಿಂದ ಮುಂಬರುವ ದಿನಗಳೂ ನಮಗೆ ಅತ್ಯುತ್ತಮವಾಗಿರುವ ಭರವಸೆಯಿದೆ" ಎಂದು ಆಡಿ ಇಂಡಿಯಾ ಮುಖ್ಯಸ್ಥರಾದ ಮೈಕಲ್ ಪಾರ್ಷ್ಕೆ ನೂತನ ಕಾರು ಅನಾವರಣಗೊಳಿಸಿದ ಸಂದರ್ಭದಲ್ಲಿ ತಿಳಿಸಿದ್ದಾರೆ.

ಜರ್ಮನಿಯ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಝನ್ನು ಪಕ್ಕಕ್ಕೆ ತಳ್ಳಿ ಇದೀಗ ಆಡಿ ದೇಶದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ದ್ವಿತೀಯಾ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಮರ್ಸಿಡಿಸ್ ಬೆಂಝ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈಗ ಬಿಎಂಡಬ್ಲ್ಯು ದೇಶದ ಲಗ್ಷುರಿ ಕಾರು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ.

ನೂತನ ಆಡಿ ಎಸ್ 4 ಕಾರು ಶಕ್ತಿಶಾಲಿ ವಿ6 3.0 ಟಿಎಫ್ಎಸ್ಐ ಎಂಜಿನ್ ಹೊಂದಿದೆ. ಕೇವಲ 5 ಸೆಕೆಂಡಿನಲ್ಲಿ ಗಂಟೆಗೆ 100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಈ ಕಾರಿನ ಗರಿಷ್ಠ ವೇಗ ಗಂಟೆಗೆ 250 ಕಿ.ಮೀ. ಇದರ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಡೈರೆಕ್ಟ್ ಇಂಜೆಕ್ಷನ್ ಸಿಸ್ಟಮ್ 333 ಹಾರ್ಸ್ ಪವರ್ ಮತ್ತು 440 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಆಡಿ ಲೆಜೆಂಡರಿ ಕ್ವಾಟ್ರೊ ಆಲ್ ವೀಲ್ ಡ್ರೈವ್ ಸಿಸ್ಟಮ್ ಫೀಚರಿನಿಂದಾಗಿ ಎಸ್4 ಕಾರಿನ ನಾಲ್ಕು ಚಕ್ರಗಳಿಗೂ ಎಕ್ಸ್ಟ್ರಾ ಪವರ್ ಸಿಗುತ್ತದೆ. ಎಂಜಿನ್ 7 ಸ್ಪೀಡಿನ ಡಿಎಸ್ ಜಿ ಡ್ಯೂಯಲ್ ಕ್ಲಚ್ ಸಿಸ್ಟಮ್ ಹೊಂದಿದೆ. ನೂತನ ಆಡಿ ಎಸ್4 ಕಾರು ಪ್ರತಿಲೀಟರಿಗೆ 10.44 ಕಿ.ಮೀ. ಮೈಲೇಜ್ ನೀಡುತ್ತದೆ.

ಆಡಿ ಎಸ್4 ಕಾರಿನ ಬ್ರೇಕ್ ಪರಿಷ್ಕರಣೆ ಮಾಡಲಾಗಿದ್ದು, ಕೊಂಚ ಹೆಚ್ಚು ಶಕ್ತಿಶಾಲಿಯಾಗಿದೆ. ಈ ಕಾರಿನ ವಿನ್ಯಾಸವೂ ಆಡಿ ಎ4ಗಿಂತ ಭಿನ್ನವಾಗಿ ಗಮನ ಸೆಳೆಯುತ್ತದೆ. ನೂತನ ಕ್ಷೆನನ್ ಹೆಡ್ ಲ್ಯಾಂಪ್, ಎಲ್ ಇಡಿ ಟೇಲ್ ಲ್ಯಾಂಪ್, ಪ್ಲಾಟಿನಮ್ ಗ್ರೇ ರೇಡಿಯೇಟರ್ ಗ್ರಿಲ್, 18 ಇಂಚಿನ ವೀಲ್ ಸೇರಿದಂತೆ ಹಲವು ಆಕರ್ಷಕ ಫೀಚರುಗಳು ಆಡಿ ಎಸ್4 ಕಾರಿನಲ್ಲಿದೆ.

More from DriveSpark

Article Published On: Tuesday, June 5, 2012, 17:28 [IST]
English summary
German luxury carmaker Audi has launched the S4 high performance variant at Rs 45 lakhs (ex-showroom). The S4 which is the big brother of the A4 will be sold through 19 Audi showrooms across the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+