ಈ ಕಾರಿಗೆ ಗ್ರೇನೆಡ್, ಬಾಂಬ್ ಎಸೆದರೂ ಏನಾಗೋಲ್ಲ!

ಈಗಾಗಲೇ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಬೆಂಝ್ ಕಂಪನಿಗಳು ಬುಲೆಟ್ ಪ್ರೂಫ್ ಕಾರುಗಳನ್ನು ಪರಿಚಯಿಸಿದೆ. ಹಿಂದೂಸ್ತಾನ್ ಮೋಟರ್ಸ್ ಕಾರಿನ ಹೈಎಂಡ್ ಅಂಬಾಸಡರ್ ಕಾರುಗಳು ಕೂಡ ಭದ್ರತಾ ಫೀಚರುಗಳನ್ನು ಹೊಂದಿವೆ.
ಐಷಾರಾಮಿ ಕಾರು ಸೆಗ್ಮೆಂಟಿನಲ್ಲಿ ಭದ್ರತಾ ವಾಹನ ವಿಭಾಗಕ್ಕೆ ಸೇರಲು ಆಡಿ ಬಯಸಿದೆ. ಕಂಪನಿಯು ಶೀಘ್ರದಲ್ಲಿ ಆಡಿ ಎ8ಎಲ್ ಸೆಕ್ಯೂರಿಟಿ ಎಂಬ ಕಾರನ್ನು ಪರಿಚಯಿಲು ಯೋಜಿಸಿದೆ. ಇದರ ದರ ಸುಮಾರು 5 ಕೋಟಿ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.
ಆಡಿ ನೂತನ ಸೆಕ್ಯೂರಿಟಿ ಕಾರಿನಲ್ಲಿರುವ ಕೆಲವು ಫೀಚರುಗಳು ಇಂಟ್ರೆಸ್ಟಿಂಗ್ ಆಗಿವೆ. ಎಕೆ47ನಂತಹ ಗನ್, ಹ್ಯಾಂಡ್ ಗ್ರೇನೆಡಿನಿಂದಲೂ ಈ ಕಾರಿಗೂ ಅಪಾಯವುಂಟಾಗುವುದಿಲ್ಲ. ಇದರಲ್ಲಿರುವ ಹೆಚ್ಚಿನ ಫೀಚರುಗಳ ಕುರಿತು ಸದ್ಯ ಯಾವುದೇ ಮಾಹಿತಿ ದೊರಕಿಲ್ಲ.
ಆಡಿ ಕಾರಿನ ಖರೀದಿ ಸುಲಭವಲ್ಲ. ಈ ಕಾರು ಗ್ರಾಹಕರ ಕೈಸೇರಲು ಸುಮಾರು 4-6 ತಿಂಗಳ ವೇಟಿಂಗ್ ಪಿರೆಯಿಡ್ ಇದೆ. ಕಂಪನಿಯು ದೇಶದ ಸೇನೆ, ಪೊಲೀಸ್ ಮುಖ್ಯಸ್ಥರೊಂದಿಗೆಯೂ ನೂತನ ಕಾರಿನ ಮಾರಾಟದ ಕುರಿತು ಮಾತುಕತೆ ನಡೆಸುತ್ತಿದೆಯೆಂದು ಕೆಲವು ಮೂಲಗಳು ತಿಳಿಸಿವೆ.


Click it and Unblock the Notifications








