ಮೇಡ್ ಇನ್ ಇಂಡಿಯಾ- ಆಡಿ ಕ್ಯೂ3
ಇನ್ನು ಮುಂದೆ ಆಡಿ ಕ್ಯೂ3 ಆವೃತ್ತಿಗಳು ಸಹ ದೇಶದಲ್ಲಿ ನಿರ್ಮಾಣವಾಗಲಿದೆ. ಪ್ರೀಮಿಯಂ ಎಸ್‌ಯುವಿ ಆಡಿ ಕ್ಯೂ3 ಕಾರನ್ನು ಭಾರತದಲ್ಲೇ ಜೋಡಣೆ ಮಾಡಲು ಆಡಿ ಯೋಜನೆ ಹಾಕಿಕೊಂಡಿದೆ. ಮುಂದಿನ ವರ್ಷ ಮಧ್ಯಂತರ ಅವಧಿಯಲ್ಲಿ ಔರಂಗಬಾದ್, ಮಹಾರಾಷ್ಟ್ರ ಘಟಕದಲ್ಲಿ ಜೋಡಣೆ ಕಾರ್ಯ ಆರಂಭವಾಗಲಿದೆ.
ಇತ್ತೀಚೆಗಷ್ಟೇ ದುಬಾರಿ ಕ್ಯೂ7 ಜೋಡಣೆಯನ್ನು ಭಾರತದಲ್ಲಿ ಆರಂಭಿಸಲಾಗಿತ್ತು. ಇದರ ಬೆನ್ನಲ್ಲೇ ಕ್ಯೂ3 ಜೋಡಣೆ ಕಾರ್ಯಕ್ಕೂ ಆಡಿ ಮುಂದಾಗುತ್ತಿದೆ.
ಭಾರತದಲ್ಲಿ ಆಡಿ ಕ್ಯೂ3 ಎಂಟ್ರಿ ಲೆವೆಲ್ ವೆರಿಯಂಟ್ ಕಾರುಗಳಿಗೆ 26.21 ಲಕ್ಷ ರೂಪಾಯಿಗಳಿರುವ ಸಾಧ್ಯತೆಗಳಿದ್ದು ಟಾಪ್ ಎಂಡ್ ಟಿಡಿಐ ಕ್ವಾಟ್ರೊ ಡೀಸೆಲ್ ವೆರಿಯಂಟ್‌ಗಳಿಗೆ 34.4 ಲಕ್ಷ ರುಪಾಯಿಗಳಿರುವ ಸಾಧ್ಯತೆಗಳಿವೆ. ಆದರೆ 2013ರಲ್ಲಿ ಒಮ್ಮೆ ಕಾರಿನ ಜೋಡಣೆ ಕಾರ್ಯ ಭಾರತದಲ್ಲಿ ಆರಂಭವಾದ ಬಳಿಕ ಕಾರಿನ ದರದಲ್ಲಿ ಇಳಿಕೆ ಕಂಡುಬರಲಿದೆ.

ಆಡಿ ಕ್ಯೂ ಶ್ರೇಣಿಯ ಎಸ್‌ಯುವಿ ಕಾರುಗಳಿಗೆ ದೇಶದಲ್ಲಿ ವ್ಯಾಪಕ ಪ್ರತಿಕ್ರಿಯೆ ದೊರಕುತ್ತಿವೆ. ಹಾಗಾಗಿ ಮುಂಬರುವ ದಿನಗಳಲ್ಲಿ ಬಿಡಿಭಾಗಗಳನ್ನು ದೇಶಿಯವಾಗಿ ಜೋಡಣೆ ಮಾಡುವುದರಿಂದ ಮತ್ತಷ್ಟು ಯಶ ಸಾಧಿಸುವ ಭರವಸೆಯನ್ನು ಪ್ರೀಮಿಯಂ ಕಾರು ತಯಾರಕರಾದ ಆಡಿ ಇಂಡಿಯಾ ಹೊಂದಿದೆ.

ಆಡಿ ಯಶಸ್ಸಿನ ಹಿಂದೆ ಕ್ಯೂ3 ಶ್ರೇಣಿಯ ಕಾರುಗಳ ಪಾತ್ರ ಬಹುದೊಡ್ಡದಾಗಿದೆ. ಇದೀಗ ಬಿಎಂಡಬ್ಲ್ಯುಗೆ ಪ್ರಬಲ ಪೈಪೋಟಿ ನೀಡುತ್ತಿರುವ ಆಡಿ ದೇಶದ ಅತ್ಯುತ್ತಮ ಪ್ರೀಮಿಯಂ ಕಾರು ಎನಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.

ಆಡಿ ತನ್ನ ಕ್ಯೂ ಶ್ರೇಣಿಯ ಕಾರುಗಳನ್ನು ಇನ್ನಷ್ಟು ವಿಸ್ತರಿಸಲು ಯೋಜನೆ ಹೊಂದಿದೆ. ಇದರಂತೆ ಕ್ಯೂ1 ಕಾಂಪಾಕ್ಟ್ ಎಸ್‌ಯುವಿ, ಕ್ಯೂ8 ಹಾಗೂ ಕ್ಯೂ7 ವರ್ಷನ್‌ಗಳ ಆಗಮನವಾಗಲಿದೆ.

ಆಡಿಯ ಔರಂಗಬಾದ್ ಘಟಕವು ವರ್ಷಂಪ್ರತಿ 1200 ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಈಗಾಗಲೇ ಈ ಘಟಕದಿಂದ 8000ದಷ್ಟು ಕಾರು ಮಾರಾಟ ಮಾಡಿರುವ ಆಡಿ ಕ್ಯೂ3 ಆಗಮನದೊಂದಿಗೆ ಸಂಪೂರ್ಣ ಉತ್ಪಾದನಾ ಸಾಮರ್ಥ್ಯವನ್ನು ತಲುಪಲಿದೆ.

ಔರಂಗಬಾದ್ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಯನ್ನು ಆಡಿ ಇಂಡಿಯಾ ಹೊಂದಿದೆ.


Click it and Unblock the Notifications








