ಆಡಿ ಟಿಟಿ: ಸ್ಪೋರ್ಟ್ ಕಾರಿಗೆ ದಾರಿಬಿಡಿ
2012 ಆಡಿ ಟಿಟಿ ಕಾರಿನ ವಿನ್ಯಾಸವೇ ಚಕಿತಗೊಳಿಸುವಂತಿದೆ. ಮುಂಭಾಗದ ಹೆಡ್ ಲೈಟ್, ನೂತನ ಬಂಪರ್, ಮಿಣುಕು ದೀಪ ಯಾನೆ ಫಾಗ್ ಲ್ಯಾಂಪ್ ಮತ್ತು ಆಕರ್ಷಕ ಗ್ರಿಲುಗಳು ಟಿಟಿ ಕಾರನ್ನು ನಯನಮನೋಹರವಾಗಿಸಿದೆ.
ದೇಶದ ರಸ್ತೆಗೆ ಆಗಮಿಸಲಿರುವ ಆಡಿ ಟಿಟಿ ಸ್ಪೋರ್ಟ್ ಕಾರಿನ ಎಂಜಿನಿನಲ್ಲೂ ಕೆಲವು ಬದಲಾವಣೆ ನಿರೀಕ್ಷಿಸಬಹುದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಿರುವ ಆಡಿ ಟಿಟಿ 1.8 ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು ಎರಡು ಲೀಟರಿನ ಟಿಎಫ್ಎಸ್ಐ ಎಂಜಿನ್ ಮತ್ತು ಎರಡು ಲೀಟರಿನ ಟಿಡಿಐ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಈ ಮೂರು ಎಂಜಿನ್ ಗಳು ಕ್ರಮವಾಗಿ 60 ಹಾರ್ಸ್ ಪವರ್, 211 ಹಾರ್ಸ್ ಪವರ್ ಮತ್ತು 170 ಹಾರ್ಸ್ ಪವರ್ ನೀಡುತ್ತದೆ.
ಈ ಎಂಜನ್ ಗಳ ಜೊತೆಗೆ ನೂತನ ಆಡಿ ಟಿಟಿ ಕಾರು ಆರು ಸ್ಪೀಡಿನ ಮ್ಯಾನುಯಲ್ ಅಥವಾ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರಕುತ್ತದೆ. ಆಡಿ ಟಿಟಿ ದೇಶದ ರಸ್ತೆಗೆ ಈ ವರ್ಷ ಕಂಪನಿ ಪರಿಚಯಿಸಲಿರುವ ಪ್ರಪ್ರಥಮ ಕಾರಾಗಿದೆ. ಈ ಕಾರಿನ ನಂತರ ಆಡಿ ಕ್ಯೂ3 ಆಗಮಿಸುವ ನಿರೀಕ್ಷೆಯಿದೆ.


Click it and Unblock the Notifications









