ಲಗ್ಷುರಿ ಮಾರುಕಟ್ಟೆಯಲಾಡಲು ಈ ವರ್ಷ ಏಳು ಆಡಿ ಕಾರು

ಕಳೆದ ತಿಂಗಳು ನಡೆದ ದೆಹಲಿ ವಾಹನ ಪ್ರದರ್ಶನದಲ್ಲಿ ಈಗಾಗಲೇ ಎರಡು ಆಡಿ ಕಾರುಗಳು ಅನಾವರಣಗೊಂಡಿದ್ದವು. ಮೂರನೇ ತ್ರೈಮಾಸಿಕದಲ್ಲಿ ಬಿಎಂಡಬ್ಲ್ಯು ಎಕ್ಸ್1ಗೆ ಸವಾಲು ನೀಡುವ ಪ್ರೀಮಿಯಂ ಸ್ಪೋರ್ಟ್ ಕಾರೊಂದನ್ನು ಕಂಪನಿ ಪರಿಚಯಿಸಲಿದೆ. ಈಗಾಗಲೇ ಕಂಪನಿಯು ಇನ್ನೊಂದು ಪ್ರೀಮಿಯಂ ಸೆಡಾನ್ ಎಸ್6 ಬಿಡುಗಡೆ ಮಾಡಿದೆ.
ಕಂಪನಿಯು ಶೀಘ್ರದಲ್ಲಿ ದೇಶದಲ್ಲಿ ಹತ್ತು ಶೋರೂಂಗಳನ್ನು ತೆರೆಯಲಿದೆ. ಯಾವೆಲ್ಲ ಊರಲ್ಲಿ ಶೋರೂಂ ತೆರೆಯಲಾಗುವುದೆಂಬ ಮಾಹಿತಿಯನ್ನು ಕಂಪನಿ ನೀಡಿಲ್ಲ. ಈಗಾಗಲೇ ಕಂಪನಿಯು ದೇಶದಲ್ಲಿ ಹದಿನೈದು ಶೋರೂಂಗಳನ್ನು ಹೊಂದಿದೆ.
ಕಂಪನಿಯು ಈಗಾಗಲೇ ಕ್ಯೂ7 ಮತ್ತು ಕ್ಯೂ5 ನೆರವಿನಿಂದ ಲಕ್ಷುರಿ ಮಾರುಕಟ್ಟೆಯ ನಾಯಕನಾಗಿ ಮೆರೆಯುತ್ತಿದೆ. ಆದ್ರೆ ಎಂಟ್ರಿ ಲೆವೆಲ್ ಪ್ರೀಮಿಯಂ ಸೆಡಾನ್ ಮಾರುಕಟ್ಟೆಯಲ್ಲಿ ಅಧಿಪಥ್ಯ ಸ್ಥಾಪಿಸಲು ಕಂಪನಿಗಿನ್ನೂ ಸಾಧ್ಯವಾಗಿಲ್ಲ.
ಕಂಪನಿಯು ಮೂರನೇ ತ್ರೈಮಾಸಿಕದಲ್ಲಿ ಹಲವು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಗಳನ್ನು ಹೊರತರಲಿದೆ. ಒಟ್ಟಾರೆ ಕಂಪನಿಯು ಈ ವರ್ಷ ಏಳು ಕಾರುಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಿದೆ.


Click it and Unblock the Notifications