ಬೆಂಗಳೂರಿನಲ್ಲಿ ಸಾವಿರಾರು ಡ್ರೈವಿಂಗ್ ಲೈಸನ್ಸ್ ಮುಟ್ಟುಗೋಲು

ಸಂಚಾರಿ ನೀತಿನಿಯಮಗಳನ್ನು ಉಲ್ಲಂಘಿಸುವರ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರು ಕಠಿಣ ಕ್ರಮಕೈಗೊಳ್ಳುತ್ತಿದ್ದಾರೆ. ಪ್ರಸಕ್ತ ವರ್ಷದ ಆರಂಭದಿಂದ ಮಾರ್ಚ್ ಅಂತ್ಯದವರೆಗೆ ಸಾವಿರಾರು ವಾಹನ ಚಾಲಕರ ವಿರುದ್ಧ ದೂರು ದಾಖಲಿಸಿದ್ದಾರೆ. ಸುಮಾರು 1,317 ಡ್ರೈವಿಂಗ್ ಲೈಸನ್ಸ್ ಮುಟ್ಟುಗೋಲು ಹಾಕಲಾಗಿದೆ. ಇಷ್ಟು ಮಾತ್ರವಲ್ಲದೇ ಈ ಚಾಲನಾ ಪರವಾನಿಗೆಗಳನ್ನು ರದ್ದುಗೊಳಿಸುವಂತೆ ಸೂಚಿಸಲಾಗಿದೆ.

"ಸೀಸ್ ಮಾಡಿರುವ ಡಿ.ಎಲ್.ಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಕಳುಹಿಸಲಾಗಿದೆ. ಮುಟ್ಟುಗೋಲು ಮಾಡಿರುವ ಈ ಡ್ರೈವಿಂಗ್ ಲೈಸನ್ಸ್‌ಗಳನ್ನು ರದ್ದು ಮಾಡುವಂತೆ ಆರ್‌ಟಿಒ ಕಚೇರಿಗಳಿಗೆ ಸೂಚಿಸಲಾಗಿದೆ" ಎಂದು ಟ್ರಾಫಿಕ್ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ. ಎಂ. ಎ. ಸಲೀಂ ತಿಳಿಸಿದ್ದಾರೆ. ಕಳೆದ ವರ್ಷದ ಕೊನೆಯ ಎರಡು ತಿಂಗಳುಗಳಲ್ಲಿ ಸುಮಾರು 800ಕ್ಕೂ ಹೆಚ್ಚು ವಾಹನ ಚಾಲಕರ ಡ್ರೈವಿಂಗ್ ಲೈಸನ್ಸ್ ರದ್ದುಗೊಳಿಸಲಾಗಿತ್ತು.

ನಗರದಲ್ಲಿ ಸಂಚಾರ ನೀತಿನಿಯಮಗಳನ್ನು ಉಲ್ಲಂಘಿಸುವರ ವಿರುದ್ಧ ಮುಂದಿನ ದಿನಗಳಲ್ಲೂ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ಇಲ್ಲಿ ಸಂಚಾರಿ ನೀತಿನಿಯಮಗಳನ್ನು ಉಲ್ಲಂಘಿಸುವರನ್ನು ಪತ್ತೆ ಹಚ್ಚಲು ಕ್ಯಾಮರಾಗಳು, ಬ್ಲಾಕ್ ಬೆರಿ ಉಪಕರಣಗಳು ಹೆಚ್ಚು ನೆರವಾಗುತ್ತಿವೆ.

ದಂಡ ಎಷ್ಟು?: ನೂತನ ಕಾಯಿದೆ ಪ್ರಕಾರ ಚಾಲಕ ಆಲ್ಕೋಹಾಲ್ ಸೇವಿಸಿರುವುದು ಪತ್ತೆಯಾದರೆ 2 ಸಾವಿರ ರು.ನಿಂದ 10 ಸಾವಿರ ರು.ವರೆಗೆ ದಂಡ ವಿಧಿಸಲಾಗುತ್ತದೆ. ಅಥವಾ ಆರು ತಿಂಗಳಿನಿಂದ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ. ಅತಿವೇಗದ ಚಾಲನೆ, ಅಪಾಯಕಾರಿ ವಾಹನ ಚಾಲನೆ, ವಿಮೆರಹಿತವಾಗಿ ಚಾಲನೆ, ಟ್ರಾಫಿಕ್ ಸಿಗ್ನಲುಗಳನ್ನು ಉಲ್ಲಂಘಿಸುವುದು, ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ, ಅಪಘಾತ, ಡ್ರಿಂಕ್ ಆಂಡ್ ಡ್ರೈವ್ ಸೇರಿದಂತೆ ಸಂಚಾರಿ ನೀತಿನಿಯಮಗಳನ್ನು ಉಲ್ಲಂಘಿಸುವರ ವಿರುದ್ಧ ಟ್ರಾಫಿಕ್ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ.

ಓದಿ: ಸಂಚಾರಿ ನಿಯಮ ಉಲ್ಲಂಘನೆ: ಪರಿಷ್ಕೃತ ದಂಡ ಪಟ್ಟಿ

More from DriveSpark

Article Published On: Tuesday, April 10, 2012, 12:03 [IST]
English summary
Bangalore traffic police have seized and cancelled as many as 1,277 driving licenses (DL) of traffic offenders in the past three months. The police have stated they will continue seizing DLs of people who commit serious traffic offenses.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+