ಬಿಎಂಡಬ್ಲ್ಯು 3 ಸೀರಿಸ್: ಒಂದೇ ವಾರದಲ್ಲಿ ದಾಖಲೆ ಮಾರಾಟ
ಬಿಎಂಡಬ್ಲ್ಯು ಕಂಪನಿಯು ನೂತನ 3 ಸೀರಿಸ್ ಕಾರುಗಳಿಗೆ ಅದ್ಭುತ ಪ್ರಚಾರವನ್ನೇ ಕೊಟ್ಟಿತ್ತು. ಕನ್ನಡ ಡ್ರೈವ್ ಸ್ಪಾರ್ಕ್ ಮುಂತಾದ ಆನ್ ಲೈನ್ ಆಟೋಮೊಬೈಲ್ ವೆಬ್ ತಾಣಗಳಲ್ಲಿ, ಸುದ್ದಿ ಪೋರ್ಟಲುಗಳಲ್ಲಿ, ಟೈಮ್ಸ್ ಆಫ್ ಇಂಡಿಯಾ ಮುಂತಾದ ಸುದ್ದಿ ಪತ್ರಿಕೆಗಳಲ್ಲಿ ಸಾಕಷ್ಟು ಜಾಹೀರಾತುಗಳನ್ನು ಪ್ರಕಟಿಸಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಆರನೇ ತಲೆಮಾರಿನ ಬಿಎಂಡಬ್ಲ್ಯು 3 ಸೀರಿಸ್ ಕಾರುಗಳು ದೇಶದಲ್ಲಿ ಬಿಎಂಡಬ್ಲ್ಯು ಮಾರಾಟವನ್ನು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ನೂತನ ಕಾರಿಗೆ ಕಂಪನಿಯು Ultimate 3 ಎಂದು ವ್ಯಾಖ್ಯಾನ ಮಾಡಿದೆ. 3 ಸೀರಿಸ್ ಕಾರುಗಳು ದೇಶದಲ್ಲಿ ಬಿಎಂಡಬ್ಲ್ಯು ಕಂಪನಿಯ ಭರವಸೆ ಹೆಚ್ಚಿಸಿವೆ.
ನೂತನ ಬಿಎಂಡಬ್ಲ್ಯು 3 ಸೀರಿಸ್ ಕಾರು ಐದು ಆವೃತ್ತಿಗಳಲ್ಲಿ ದೊರಕಲಿದೆ. ಇದರಲ್ಲಿ ನಾಲ್ಕು ಆವೃತ್ತಿಗಳು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಇದರಲ್ಲಿ 328ಐ ಸ್ಪೋರ್ಟ್ಸ್ ಲೈನ್ ಮಾತ್ರ ಪೆಟ್ರೋಲ್ ಆಯ್ಕೆಗಳಲ್ಲಿ ಲಭ್ಯವಿದೆ. ದೇಶದಲ್ಲಿ ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿರುವುದರಿಂದ ಕಂಪನಿಯು ಡೀಸೆಲ್ ಆವೃತ್ತಿಗಳಿಗೆ ಹೆಚ್ಚಿನ ಒತ್ತು ನೀಡಿದೆ.
ನೂತನ ಬಿಎಂಡಬ್ಲ್ಯು 3 ಸೀರಿಸ್ ದರ
ಬಿಎಂಡಬ್ಲ್ಯು 320ಡಿ ಕಾರಿನ ದರ 28.90 ಲಕ್ಷ ರುಪಾಯಿ
320ಡಿ ಡಿ ಸ್ಪೋರ್ಟ್ಸ್ ಲೈನ್ ಆವೃತ್ತಿ ದರ:31.50 ಲಕ್ಷ ರು.
320ಡಿ ಲಗ್ಷುರಿ ಲೈನ್ ದರ 31.50 ಲಕ್ಷ ರುಪಾಯಿ.
320ಡಿ ಲಗ್ಷುರಿ ಪ್ಲಸ್: 36.90 ಲಕ್ಷ ರು.
328ಐ ಸ್ಪೋರ್ಟ್ಸ್ ಲೈನ್ ದರ 37.90 ಲಕ್ಷ ರುಪಾಯಿ.
ಈ ಕಾರು ಇಷ್ಟು ಬೇಡಿಕೆ ಪಡೆಯಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಕಾರಣ. ಯಾಕೆ ಗೊತ್ತೆ?


Click it and Unblock the Notifications









