ಸಚಿನ್ ತೆಂಡೂಲ್ಕರ್ ಬಾಲ್ಯದ ಕನಸು ನನಸಾಯಿತೇ?
1992ರಲ್ಲಿ ಸೆಕೆಂಡ್ ಹ್ಯಾಂಡ್ ಬಿಎಂಡಬ್ಲ್ಯು ಕಾರೊಂದನ್ನು ಖರೀದಿಸುವ ಮೂಲಕ ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡದ್ದಾಗಿ ಅವರು ಹೇಳಿದ್ದಾರೆ. ಆ ಸಮಯದಲ್ಲಿ ಹೊಸ ಬಿಎಂಡಬ್ಲ್ಯು ಕಾರು ಖರೀದಿಸುವಷ್ಟು ಅನುಕೂಲಸ್ಥನಾಗಿರಲಿಲ್ಲವೆಂದು ಹೇಳಿ ಮುಗುಳ್ನಕ್ಕರು ಮಾಸ್ಟರ್ ಬಾಸ್ಟರ್ ಸಚಿನ್ ತೆಂಡೂಲ್ಕರ್.
ಇಂದು ಅನಾವರಣಗೊಂಡ ಬಿಎಂಡಬ್ಲ್ಯು 3 ಸೀರಿಸ್ ಕಾರನ್ನು ಮೊದಲು ಡ್ರೈವಿಂಗ್ ಮಾಡಿದ್ದು ಸಚಿನ್ ತೆಂಡೂಲ್ಕರ್. ಈ ಕಾರಿನ ಕುರಿತು ನಾಲ್ಕು ಮೆಚ್ಚುಗೆಯ ಮಾತುಗಳನ್ನಾಡಲು ಸಚಿನ್ ಮರೆಯಲಿಲ್ಲ. ಹ್ಯಾಂಡ್ಲಿಂಗ್, ಬ್ರೇಕಿಮಗ್, ಕಾರ್ಯಕ್ಷಮತೆಯ ವಿಷಯದಲ್ಲಿ ಇದು ಅಲ್ಟಿಮೇಟ್ ಕಾರೆಂದು ಅವರು ಹೇಳಿದ್ದಾರೆ.
1992ರಲ್ಲಿ ಸೆಕೆಂಡ್ ಹ್ಯಾಂಡ್ ಕಾರೊಂದರ ಮೂಲಕ ತನ್ನ ಬಿಎಂಡಬ್ಲ್ಯು ಕಾರು ಕನಸು ನನಸಾಗಿಸಿಕೊಂಡ ಸಚಿನ್ ತೆಂಡೂಲ್ಕರ್ ಗ್ಯಾರೇಜಿನಲ್ಲಿ ಈಗ ಲೆಕ್ಕವಿಲ್ಲದಷ್ಟು ಕಾರುಗಳಿವೆ. ಅವರಲ್ಲಿ ಬಿಎಂಡಬ್ಲ್ಯು ಮಾತ್ರವಲ್ಲದೇ ಮರ್ಸಿಡಿಸ್, ಆಡಿ, ಫೆರಾರಿ, ಪೋರ್ಷ್ ಕಂಪನಿಗಳ ಕಾರುಗಳಿವೆ. ನಂಬಿದ್ರೆ ನಂಬಿ, ಅವರ ಮೊದಲ ಕಾರು ಮಾರುತಿ 800.
ಸಚಿನ್ ಗೆ ಫಾರ್ಮುಲಾ ಒನ್ ರೇಸ್ ಆಟವೆಂದರೆ ಇಷ್ಟ. ಅದಕ್ಕಾಗಿ ಅವರು ಫೆರಾರಿ ಕಾರನ್ನು ಹೆಚ್ಚು ಇಷ್ಟಪಡುತ್ತಿದ್ದರು. ಮುಂಬೈ-ಪುಣೆ ಎಕ್ಸ್ ಪ್ರೇಸ್ ಹೆದ್ದಾರಿಯಲ್ಲಿ ವೇಗದ ಸವಾರಿ ಕೈಗೊಳ್ಳುವುದು ಸಚಿನ್ ತೆಂಡೂಲ್ಕರಿಗೆ ಅಚ್ಚುಮೆಚ್ಚು.
29ನೇ ಟೆಸ್ಟ್ ಶತಕ ಪಡೆದಾಗ ಫಿಯೆಟ್ ಕಂಪನಿ ತೆಂಡೂಲ್ಕರ್ ಗೆ ಫೆರಾರಿ 360 ಕಾರನ್ನು ಉಡುಗರೆಯಾಗಿ ನೀಡಿತ್ತು. ಇಂದು ಸಚಿನ್ ತೆಂಡೂಲ್ಕರ್ ತುಂಬಾ ಸ್ಮಾರ್ಟಾಗಿ ಮಾತನಾಡಿದರು ಎಂದು ನಮ್ಮ ವರದಿಗಾರ ದೂರವಾಣಿ ಕರೆಮಾಡಿ ತಿಳಿಸಿದ್ದಾರೆ. (ಓದಿ: ಸಚಿನ್ ತೆಂಡೂಲ್ಕರ್ ಕಾರುಲೋಕ)


Click it and Unblock the Notifications









