ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

Written By:

ಕ್ರಿಕೆಟ್ ಲೋಕದ ಜೀವಂತ ದಂತಕಥೆ ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಹೆಲ್ಮೆಟ್ ಮತ್ತು ರಸ್ತೆ ನಿಯಮಗಳ ಬಗ್ಗೆ ದ್ವಿಚಕ್ರ ವಾಹನ ಸವಾರನಿಗೆ ಬುದ್ದಿವಾದ ಹೇಳುತ್ತಿರುವ ವಿಡಿಯೋ ಎಲ್ಲೆಡೆ ಪ್ರಚಾರ ಪಡೆದುಕೊಂಡಿದೆ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ಸಚಿನ್ ತೆಂಡೂಲ್ಕರ್ ಯಾರಿಗೆ ತಾನೇ ಗೊತ್ತಿರೋದಿಲ್ಲ ಹೇಳಿ, ಪ್ರತಿಯೊಬ್ಬ ಭಾರತೀಯನಿಗೂ ಚಿರಪರಿಚಿತ ಮುಖ ಈ ನಮ್ಮ ಭಾರತ ತಂಡದ ಮಾಜಿ ನಾಯಕ ಹಾಗು ಆಟಗಾರ. ಇಂತಹ ಪ್ರಖ್ಯಾತಿ ಪಡೆದ ಸಚಿನ್ ಅಭಿಮಾನಿಗಳ ಜೊತೆ ಬಹಳಷ್ಟು ಬಾರಿ ಸಲುಗೆಯಿಂದ ವರ್ತಿಸಿ ತಾವೊಬ್ಬ ಸ್ನೇಹ ಜೀವಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೇವಲ ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ತಮ್ಮ ವರ್ತನೆಯಿಂದ ಹೆಸರು ಪಡೆದವರು.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ಇಂತಹ ಸಚಿನ್ ಕಳೆದ ಭಾನುವಾರ ರಸ್ತೆಯಲ್ಲಿ ಹೋಗುವಾಗ ಇಬ್ಬರು ಬೈಕ್ ಸವಾರರಿಗೆ ಸಲಹೆ ನೀಡಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ಸಚಿನ್ ಮುಂಬೈನ ಜನನಿಬಿಡ ರಸ್ತೆಯಲ್ಲಿ ಹೋಗುತ್ತಿರುವಾಗ ಮಾಡಿದ ವಿಡಿಯೋ ಇದಾಗಿದ್ದು, ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದ ಸಮಯದಲ್ಲಿ ಬೈಕ್ ಸವಾರನೊಬ್ಬನಿಗೆ ಹೆಲ್ಮೆಟ್ ವಿಚಾರವಾಗಿ ಬುದ್ದಿವಾದ ಹೇಳಿದ್ದಾರೆ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ದ್ವಿಚಕ್ರ ವಾಹನ ಸವಾರ ಸಚಿನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಸಂದರ್ಭದಲ್ಲಿ, ಸೆಲ್ಫಿಗೆ ಪೋಸ್ ನೀಡದೆ ಹೆಲ್ಮೆಟ್ ಧರಿಸದೇ ಇದ್ದದನ್ನು ಗಮನಿಸಿ ಎಚ್ಚರಿಸಿದ ಘಟನೆ ಮುಂಬೈನಲ್ಲಿ ನೆಡೆದಿದೆ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ಸಚಿನ್ ಆತನಿಗೆ ಹೆಲ್ಮೆಟ್ ಧರಿಸುವಂತೆ ಸಲಹೆ ನೀಡಿದ್ದಲ್ಲದೆ ಮುಂದಿನ ಬಾರಿ ಹೆಲ್ಮೆಟ್ ದರಿಸುತ್ತೇನೆಂದು ಪ್ರಮಾಣ ಮಾಡು ಎಂದು ಪ್ರಮಾಣ ಮಾಡಿಸಿಕೊಂಡಿದ್ದಾರೆ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ಹಾಗೆ ಮುಂದೆ ಸಾಗಿದ ಸಚಿನ್ ಇನ್ನೊಬ್ಬ ಬೈಕ್ ಸವಾರನಿಗೂ ಕೂಡ ಹೆಲ್ಮೆಟ್ ಧರಿಸು ಸಹೋದರನೇ ಎಂದು ಅತ್ಯಂತ ವಿನಯಪೂರ್ವಕವಾಗಿ ಮನವಿ ಮಾಡಿದ ರೀತಿ ಎಂತವರಿಗೂ ಒಮ್ಮೆ ವಿನೀತರಾಗಿಸಿಬಿಡುತ್ತದೆ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ಹೆಲ್ಮೆಟ್ ಧರಿಸದೇ ದ್ವಿಚಕ್ರ ಓಡಿಸುವುದು ನಿನಗೆ ಅಪಾಯಕಾರಿಯಾಗಬಹುದು, ಜೀವ ಬಹಳ ಅಮೂಲ್ಯವಾದದ್ದು ಮತ್ತೆ ಈ ತಪ್ಪು ಮಾಡದಿರುವಂತೆ ಪ್ರೀತಿ ಇಂದ ಎಚ್ಚರಿಸಿದ್ದಾರೆ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ರಸ್ತೆ ಸುರಕ್ಷತೆ ಬಗ್ಗೆ ಸಚಿನ್ ಅವರು ಯುವರಿಗೆ ಜಾಗೃತಿ ಮೂಡಿಸಿರುವುದು ಉತ್ತಮ ನಿದರ್ಶನವಾಗಿದೆ. ಈ ವಿಡಿಯೋವನ್ನು ಸಚಿನ್ ಅವರು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

ಸೆಲೆಬ್ರಟಿಯೊಬ್ಬರು ಈ ರೀತಿ ಕಾರು ನಿಲ್ಲಿಸಿ ಸ್ಕೂಟರ್‌ನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕರಿಗೆ ಹೆಲ್ಮೆಟ್ ಧರಿಸುವಂತೆ ಬುದ್ಧಿವಾದ ಹೇಳಿದ್ದು, ಸಚಿನ್ ಅವರ ಹೃದಯವಂತಿಕೆಯನ್ನು ಸಾರಿ ಹೇಳುತ್ತದೆ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ದೇಶದಲ್ಲಿ ರಸ್ತೆ ಅಪಘಾತ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದರೂ ಪ್ರತಿದಿನ ದೇಶದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಈ ವಿಡಿಯೋ ಹೆಚ್ಚು ಪರಿಣಾಮ ಬೀರುವುದು ಖಂಡಿತ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ಸಚಿನ್ ಈ ರೀತಿಯ ವಿಡಿಯೋ ಹರಿ ಬಿಟ್ಟಿರುವುದು ಎಷ್ಟೋ ಅಭಿಮಾನಿಗಳಿಗೆ ಸಚಿನ್ ಮೇಲಿರುವ ಅಭಿಮಾನಕ್ಕಾದರೂ ಹೆಲ್ಮೆಟ್ ದರಿಸುವಂತಾಗಲಿ ಎನ್ನುವುದು ಎಲ್ಲರ ಆಶಯವಾದ.

ನಡು ರಸ್ತೆಯಲ್ಲಿ ಕ್ರಿಕೆಟ್ ದೇವರ 'ಹೆಲ್ಮೆಟ್' ಪಾಠ : ವಿಡಿಯೋ ವೈರಲ್

ಸದ್ಯ ಸಚಿನ್ ಅವರು ‘ಸಚಿನ್ : ಎ ಬಿಲಿಯನ್ ಡ್ರೀಮ್ಸ್' ಎಂಬ ಚಿತ್ರಕ್ಕೆ 30 ಆಟಗಾರರ ಹೆಸರನ್ನು ಬಳಸಿಕೊಂಡು ಒಂದು ಹಾಡನ್ನು ಸೋನು ನಿಗಮ್ ಜೊತೆ ಹಾಡಿದ್ದು, ಅಭಿಮಾನಿಗಳ ಮನಗೆದ್ದಿದೆ.

English summary
Read in Kannada about the video Sachin requests his fans to follow safety rules and wear helmet. Get more details about this video, twitter post and more.
Story first published: Monday, April 10, 2017, 15:04 [IST]
Please Wait while comments are loading...

Latest Photos