ಕೆಂಪು ಕಲರ್ ಸಚಿನ್ ಫೇವರಿಟ್ ಬಣ್ಣವೇ? ಬಿಎಂಡಬ್ಲ್ಯು ಐ8 ಅದಲು-ಬದಲು

By Nagaraja

ಭಾರತೀಯ ಕ್ರಿಕೆಟ್ ನ ಜೀವಂತ ದಂತಕಥೆ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಬಿಎಂಡಬ್ಲ್ಯು ಪ್ರಮುಖ ಪ್ರಚಾರ ರಾಯಭಾರಿ ಎಂಬ ವಿಚಾರ ನಿಮಗೆಲ್ಲರಿಗೂ ತಿಳಿದ ವಿಚಾರ. ಕ್ರಿಕೆಟ್ ಹೊರತುಪಡಿಸಿದರೆ ಬಿಎಂಡಬ್ಲ್ಯು ಕಾರುಗಳನ್ನು ಸಚಿನ್ ಅತಿ ಹೆಚ್ಚು ಇಷ್ಟಪಡುತ್ತಾರೆ.

ಈ ಹಿಂದೆ ನಿವೃತ್ತಿ ಜೀವನದಲ್ಲಿ ಸಚಿನ್ ಅವರು ಬಿಎಂಡಬ್ಲ್ಯು ಐ8 ಹೈಬ್ರಿಡ್ ಕ್ರೀಡಾ ಕಾರನ್ನು ಖರೀದಿಸುವ ಮೂಲಕ ಸುದ್ದಿ ಮಾಡಿದ್ದರು. ಈಗ ತಮ್ಮ ಬಯಕೆಯಂತೆ ಶ್ವೇತ ವರ್ಣದ ಕಾರನ್ನು ಕೆಂಪು ವರ್ಣದ ಕಾರಾಗಿ ಪರಿವರ್ತಿಸಿಕೊಂಡಿದ್ದಾರೆ.

ಕೆಂಪು ಕಲರ್ ಸಚಿನ್ ಫೇವರಿಟ್ ಬಣ್ಣವೇ? ಬಿಎಂಡಬ್ಲ್ಯು ಐ8 ಅದಲು-ಬದಲು

ಬಿಎಂಡಬ್ಲ್ಯು ಐ8 ಕಾರಿಗೆ ಕೆಂಪು ವರ್ಣ ಬಳಿಯುವುದರೊಂದಿಗೆ ವಿಶೇಷವಾಗಿ ಮಾರ್ಪಾಡುಗೊಳಿಸಿದ ದೇಶದ ಮೊದಲ ಐ8 ಕಾರೆಂಬ ಗೌರವಕ್ಕೆ ಸಚಿನ್ ಕಾರು ಪಾತ್ರವಾಗಿದೆ.

ಕೆಂಪು ಕಲರ್ ಸಚಿನ್ ಫೇವರಿಟ್ ಬಣ್ಣವೇ? ಬಿಎಂಡಬ್ಲ್ಯು ಐ8 ಅದಲು-ಬದಲು

ನಿಮ್ಮ ಮಾಹಿತಿಗಾಗಿ 2015 ಫೆಬ್ರವರಿ ತಿಂಗಳಲ್ಲಿ ಬಿಎಂಡಬ್ಲ್ಯು ಐ8 ಕಾರು ಭಾರತದಲ್ಲಿ ಬಿಡುಗಡೆಗೊಂಡಿತ್ತು. ಬಿಡುಗಡೆ ದಿನದಂತೆ ಸಚಿನ್ ಅವರಿಗೆ ಶ್ವೇತ ವರ್ಣದ ಐ8 ಕಾರಿನ ಕೀಲಿ ಹಸ್ತಾಂತರಿಸಲಾಗಿತ್ತು. ತನ್ಮೂಲಕ ಐ8 ಹೈಬ್ರಿಡ್ ಕಾರು ಹೊಂದಿದ ದೇಶದ ಮೊದಲ ಮಾಲಿಕ ಎಂಬ ಗೌರವಕ್ಕೂ ಪಾತ್ರವಾಗಿದ್ದರು.

ಕೆಂಪು ಕಲರ್ ಸಚಿನ್ ಫೇವರಿಟ್ ಬಣ್ಣವೇ? ಬಿಎಂಡಬ್ಲ್ಯು ಐ8 ಅದಲು-ಬದಲು

ಇದು 1.5 ಲೀಟರ್ ಬಿಎಂಡಬ್ಲ್ಯು ಟ್ವಿನ್ ಪವರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅಲ್ಲದೆ ಎಲೆಕ್ಟ್ರಿಕ್ ಮೋಟಾರು ಕೂಡಾ ಇರಲಿದೆ. ಇವೆರಡು ಸೇರಿ ಗರಿಷ್ಠ 370 ಅಶ್ವಶಕ್ತಿ ಉತ್ಪಾದಿಸಲಿದ್ದು, 4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಅಂತೆಯೇ ಗರಿಷ್ಠ ಗಂಟೆಗೆ 250 ಕೀ.ಮೀ. ವೇಗವನ್ನು ಪಡೆಯಲಿದೆ.

ಕೆಂಪು ಕಲರ್ ಸಚಿನ್ ಫೇವರಿಟ್ ಬಣ್ಣವೇ? ಬಿಎಂಡಬ್ಲ್ಯು ಐ8 ಅದಲು-ಬದಲು

ಬರಿ ಬ್ಯಾಟರಿಯಲ್ಲಿ ಮಾತ್ರವಾಗಿ ಬಿಎಂಡಬ್ಲ್ಯು ಐ8 ಗಂಟೆಗೆ 120 ಕೀ.ಮೀ ವೇಗವನ್ನು ಕಾಪಾಡಿಕೊಳ್ಳಲಿದ್ದು, 35 ಕೀ.ಮೀ. ವ್ಯಾಪ್ತಿಯ ವರೆಗೆ ಸಂಚರಿಸಬಹುದಾಗಿದೆ.

ಕೆಂಪು ಕಲರ್ ಸಚಿನ್ ಫೇವರಿಟ್ ಬಣ್ಣವೇ? ಬಿಎಂಡಬ್ಲ್ಯು ಐ8 ಅದಲು-ಬದಲು

ಹೈಬ್ರಿಡ್ ವ್ಯವಸ್ಥೆಯಿಂದಾಗಿ ಬಿಎಂಡಬ್ಲ್ಯು ಐ8 ಪ್ರತಿ ಲೀಟರ್ ಗೆ 47.45 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ದೇಶದಲ್ಲೇ ಅತಿ ಹೆಚ್ಚು ಇಂಧನ ಕ್ಷಮತೆ ಕಾಪಾಡಿಕೊಂಡಿದೆ.

ಕೆಂಪು ಕಲರ್ ಸಚಿನ್ ಫೇವರಿಟ್ ಬಣ್ಣವೇ? ಬಿಎಂಡಬ್ಲ್ಯು ಐ8 ಅದಲು-ಬದಲು

ಜಾಗತಿಕ ಮಟ್ಟದಲ್ಲೂ ಸದ್ದು ಮಾಡಿರುವ ಬಿಎಂಡಬ್ಲ್ಯು ಐ8, ಕಳೆದ ವರ್ಷದಲ್ಲಿ ವಿಶ್ವ ಹಸಿರು ಕಾರು ಪ್ರಶಸ್ತಿಗೂ ಭಾಜನವಾಗಿತ್ತು.

ಕೆಂಪು ಕಲರ್ ಸಚಿನ್ ಫೇವರಿಟ್ ಬಣ್ಣವೇ? ಬಿಎಂಡಬ್ಲ್ಯು ಐ8 ಅದಲು-ಬದಲು

ಅಂದ ಹಾಗೆ ಭಾರತದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸೂಪರ್ ಕಾರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 2.29 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

More from DriveSpark

Article Published On: Wednesday, September 7, 2016, 17:28 [IST]
English summary
Sachin’s BMW i8 Gets A Cosmetic Update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+