ಬಿಎಂಡಬ್ಲ್ಯು 25 ಸಾವಿರದ ಕಾರು, ಏನ್ ವಿಶೇಷ?
ಜರ್ಮನಿಯ ಐಷಾರಾಮಿ ಕಾರು ಕಂಪನಿ ಬಿಎಂಡಬ್ಲ್ಯು, ಚೆನ್ನೈ ಘಟಕದಲ್ಲಿ 25 ಸಾವಿರದ ಕಾರನ್ನು ಉತ್ಪಾದಿಸಿದೆ. ಅಂದರೆ ಈ ಘಟಕದಲ್ಲಿ 2007ರಲ್ಲಿ ಉತ್ಪಾದನೆ ಆರಂಭಿಸಿದ ಕಂಪನಿಯು ಇಲ್ಲಿವರೆಗೆ ಒಟ್ಟು 25 ಸಾವಿರ ಕಾರುಗಳನ್ನು ಉತ್ಪಾದಿಸಿದೆ.
ಇತ್ತೀಚೆಗೆ ಉತ್ಪಾದನೆ ಮಾಡಿದ ತನ್ನ 25ನೇ ಸಾವಿರದ ಎಕ್ಸ್1 ಎಸ್ ಡ್ರೈವ್ ಕಾರನ್ನು ಬಿಎಂಡಬ್ಲ್ಯು ಚೆನ್ನೈ ಘಟಕದ ವ್ಯವಸ್ಥಾಪಕ ನಿರ್ದೇಶಕರಾದ ಜಾರ್ಗನ್ ಎಡರ್ ಖರೀದಿಸಿದ್ದಾರೆ. "ಈ ಮೈಲುಗಲ್ಲು ಸಾಧಿಸಲು ನಮಗೆ 6 ವರ್ಷಗಳು ಬೇಕಾಯಿತು. ಇಂತಹ ಅತ್ಯುತ್ತಮ ಸಾಧನೆ ಮಾಡಲು ನೆರವಾದ ಬಿಎಂಡಬ್ಲ್ಯು ಚೆನ್ನೈ ಘಟಕದ ತಂಡಕ್ಕೆ ನನ್ನ ಅಭಿನಂದನೆ" ಎಂದು ಎಡರ್ ಹೇಳಿದ್ದಾರೆ.
ಬಿಎಂಡಬ್ಲ್ಯು ಕಂಪನಿಯ ದುಬಾರಿ ಕಾರುಗಳಲ್ಲಿ ಎಕ್ಸ್1 ಕೂಡ ಪ್ರಮುಖ. ಇದು ಜರ್ಮನ್ ಕಾರು ಕಂಪನಿಯ ಎಂಟ್ರಿ ಲೆವೆಲ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಆಗಿದೆ. ಇದು ಅತ್ಯುತ್ತಮ ಡ್ರೈವಿಂಗ್ ಅನುಭವ ನೀಡುವ ಕಾರಾಗಿದೆ. ಬಿಎಂಡಬ್ಲ್ಯು ಎಕ್ಸ್1 ದೆಹಲಿ ಎಕ್ಸ್ ಶೋರೂಂ ದರ ಸುಮಾರು 22 ಲಕ್ಷ ರುಪಾಯಿ ಇದೆ.
ಜೂನ್ ತಿಂಗಳ ದೇಶದ ಐಷಾರಾಮಿ ಕಾರು ಮಾರಾಟದಲ್ಲಿ ಬಿಎಂಡಬ್ಲ್ಯು ಕಂಪನಿಯನ್ನು ಆಡಿ ಹಿಂದಿಕ್ಕಿದೆ. ವಿಶೇಷವೆಂದರೆ ಆಡಿ ಮತ್ತು ಬಿಎಂಡಬ್ಲ್ಯು ಕಂಪನಿಗಳು ಮರ್ಸಿಡಿಸ್ ಬೆಂಝ್ ಕಂಪನಿಯನ್ನು ಪ್ರಥಮ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಳ್ಳಿದೆ.


Click it and Unblock the Notifications
