ಒಲಿಂಪಿಕ್ಸ್ ಅಂಗಣದಲ್ಲಿ ಚಿಕಣಿ ಮಿನಿ ಸುಂದರಿ

2012ರ ಲಂಡನ್ ಒಲಿಂಪಿಕ್ಸ್ ಆಟೋಟದಲ್ಲಿ ಚಿಕಣಿ ಸುಂದರಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಒಲಿಂಪಿಕ್ಸ್ ಅಂಗಣದಲ್ಲಿ ಕ್ರೀಡಾಳುಗಳ ಬಳಿಗೆ ಕ್ರೀಡಾ ಸಲಕರಣೆಗಳನ್ನು ಸಾಗಿಸಲು ಆಟಿಕೆಯಂತಹ ಚಿಕಣಿ ಕಾರೊಂದನ್ನು ಬಳಸಲಾಗುತ್ತದೆ. ಜ್ಯಾವಲಿನ್, ಡಿಸ್ಕಸ್, ಹ್ಯಾಮರ್ಸ್ ಮುಂತಾದ ಕ್ರೀಡಾ ಸಾಮಾಗ್ರಿಗಳನ್ನು ಈ ಮಿನಿ ಕಾರಿನಲ್ಲಿ ಸಾಗಿಸಲಾಗುತ್ತಿದೆ.

ಲಂಡನ್ ಒಲಿಂಪಿಕ್ಸ್ ಗೆ ಬಿಎಂಡಬ್ಲ್ಯು ಪ್ರಮುಖ ಪ್ರಾಯೋಜಕ ಕಂಪನಿಯಾಗಿದೆ. ಒಲಿಂಪಿಕ್ಸ್ ಮೈದಾನದಲ್ಲಿ ಕ್ರೀಡಾ ಸಾಮಾಗ್ರಿಗಳನ್ನು ಸಾಗಿಸಲು ಕಂಪನಿಯ ಈ ಅನ್ವೇಷನಾತ್ಮಕ ಉತ್ಪನ್ನ ಎಲ್ಲರ ಗಮನ ಸೆಳೆಯುತ್ತಿದೆ. ಈ ಪುಟ್ಟ ಕಾರು ರೇಡಿಯೊ ಕಂಟ್ರೊಲ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಆಟಿಕೆ ಕಾರಿನಂತೆ ಕಾಣುವ ಈ ಕಾರಲ್ಲಿ ಸುಮಾರು 8 ಕೆ.ಜಿ ಲೋಡ್ ಮಾಡಬಹುದು. ಇದರ ಮೇಲ್ಚಾವಣಿ ಮೂಲಕ ಹ್ಯಾಮರ್ಸ್, ಡಿಸ್ಕಸ್ ಮುಂತಾದ ಕ್ರೀಡಾ ಸಾಧನಗಳನ್ನು ಇಡಬಹುದು. ಉದ್ದದ ಡಿಸ್ಕಸ್ ಇಡಲು ಕೂಡ ಇದರಲ್ಲಿ ವ್ಯವಸ್ಥೆಯಿದೆ.

ಬಿಎಂಡಬ್ಲ್ಯು ಕಂಪನಿಯು ಮೂರು ವಿಶೇಷ ಮಿನಿ ಕಾರುಗಳನ್ನು ಒಲಿಂಪಿಕ್ಸ್ ಗಾಗಿ ಸಿದ್ದಪಡಿಸಿದೆ. ಪ್ರತಿಕಾರುಗಳು ನಾಲ್ಕು ಗಂಟೆಗಳ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತವೆ. ರೇಡಿಯೊ ಕಂಟ್ರೊಲ್ ಇರುವ ಈ ಕಾರುಗಳು ಒಲಿಂಪಿಕ್ಸ್ ಕೊನೆಗೊಳ್ಳುವರೆಗೂ ಕಾರ್ಯನಿರ್ವಹಿಸಲಿವೆ.

ಬ್ಯಾಟರಿ ಚಾಲೀತ ಈ ಕಾರುಗಳಿಗೆ 80 ನಿಮಿಷಕ್ಕೊಮೆ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಬೇಕು. ಸುಮಾರು 100 ಮೀಟರ್ ದೂರದವರೆಗೆ ಇದನ್ನು ರೇಡಿಯೊ ಕಂಟ್ರೋಲ್ ಮೂಲಕ ಕಂಟ್ರೋಲ್ ಮಾಡಬಹುದು. ಈ ಕಾರಿನ ತೂಕ 25 ಕೆ.ಜಿ.

ಈ ಪುಟ್ಟ ಮಿನಿ ಮಾತ್ರವಲ್ಲದೇ ಇನ್ನು ಹಲವು ಬಿಎಂಡಬ್ಲ್ಯು ಮಿನಿ ಕಾರುಗಳು ಒಲಿಂಪಿಕ್ಸ್ ಸೇವೆಗೆ ಬಳಸಲಾಗುತ್ತಿದೆ. ಆಟಗಾರರು ಮತ್ತು ಒಲಿಂಪಿಕ್ಸ್ ಆಟಗಾರರ ಪ್ರಯಾಣಕ್ಕೆ 160 ಬಿಎಂಡಬ್ಲ್ಯು ಆಕ್ಟಿವ್ ಇ ಮತ್ತು 40 ಮಿನಿ ಕಾರುಗಳನ್ನು ಬಳಸಲಾಗುತ್ತಿದೆ.

ಮಿನಿ ಸ್ಪೋರ್ಟ್ಸ್ ಹ್ಯಾಚ್ ಬ್ಯಾಕ್ ಕಾರುಗಳ ಮೂಲಕ ಬ್ರಾಂಡ್ ಇಮೇಜ್ ಹೆಚ್ಚಿಸಿಕೊಳ್ಳಲು ಇದರಿಂದ ಬಿಎಂಡಬ್ಲ್ಯುಗೆ ಸಾಧ್ಯವಾಗಲಿದೆ. ಮಿನಿ ಶ್ರೇಣಿಯ ಕಾರುಗಳು ಭಾರತ ಸೇರಿದಂತೆ ಜಗತ್ತಿನ ಸುಮಾರು 100ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ.

ಬಿಎಂಡಬ್ಲ್ಯು ಕಂಪನಿಯು ಮಿನಿ ಬ್ರಾಂಡೆಡ್ ಕಾರುಗಳನ್ನು ದೇಶದಲ್ಲಿ ಉತ್ಪಾದಿಸುವುದಿಲ್ಲ. ಬದಲಾಗಿ ಸಿಬಿಯು ಯುನಿಟ್ ಮೂಲಕ ಆಮದು ಮಾಡಿಕೊಳ್ಳುತ್ತಿದೆ. ಈ ಕಾರಿನ ದರ ಸುಮಾರು 25 ಲಕ್ಷ ರುಪಾಯಿಯಿಂದ 37 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ.

More from DriveSpark

Article Published On: Saturday, August 4, 2012, 12:17 [IST]
English summary
BMW remote controlled mini Car in London Olympics. The car will be used on the field of play in the Olympic Stadium to carry javelins, discuses, hammers and shots back from the field to the throwing area. BMW, Official Automotive Partner to the London 2012 Olympic and Paralympic Games, is keeping the Games moving with a range of fully electric vehicles as part of the fleet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+