ದಾರಿ ಬಿಡಿ, ಇದು ವಿಶ್ವದ ಅತಿವೇಗದ ಕಾರು!
ವಿಶ್ವದ ಅತಿವೇಗದ ಕನ್ವರ್ಟಿಬಲ್ ಕಾರೊಂದನ್ನು ಬುಗಾಟಿ ಹೊರತಂದಿದೆ. ಜಿನಿವಾ ವಾಹನ ಪ್ರದರ್ಶನದಲ್ಲಿ ಪರಿಚಯಿಸಿದ ಈ ವೇಗದ ಆವೇಗದ ಕಾರಿನ ಹೆಸರು ಬುಗಾಟಿ ಗ್ರಾಂಡ್ ಸ್ಪೋರ್ಟ್ ವಿಟೆಸ್.
ಕಂಪನಿಯು ತನ್ನದೇ ಹಳೆಯ ದಾಖಲೆಯನ್ನು ನುಚ್ಚುನೂರು ಮಾಡಿದೆ. ಇದಕ್ಕೂ ಮುನ್ನ ಜಗತ್ತಿನ ವೇಗದ ಕಾರು ಬುಗಾಟಿ ವೆರೊನ್ ಪರಿಚಯಿಸಿತ್ತು. ಆದರೆ ಕಂಪನಿ ಈಗ ಪರಿಚಯಿಸಿದ್ದು ಕನ್ವರ್ಟಿಬಲ್. ಅಂದ್ರೆ ಮೇಲ್ಚಾವಣೆ ತೆರೆಯಬಹುದಾದ ಕಾರು. ಈ ಕಾರಿನಲ್ಲಿ ಮೇಲ್ಚಾವಣಿ ತೆರೆದು ಗಂಟೆಗೆ 410 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.
ನೂತನ ಬುಗಾಟಿ ಕಾರು ಡಬ್ಲ್ಯು16 ಎಂಜಿನ್ ಹೊಂದಿದ್ದು, 1200 ಹಾರ್ಸ್ ಪವರ್ ನೀಡುತ್ತದೆ. ಕೇವಲ 2.6 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗಪಡೆದುಕೊಳ್ಳಬಹುದು. ಇದರ ದರ ಸುಮಾರು 2,247,398 ಡಾಲರ್ ಆಸುಪಾಸಿನಲ್ಲಿರಬಹಯುದು. ಮೇಲ್ಚಾವಣೆ ತೆರೆದು ಡ್ರೈವಿಂಗ್ ಮಾಡಿದ್ರೆ ಈ ಕಾರಲ್ಲಿ ಗಂಟೆಗೆ ಗರಿಷ್ಠ 124 ಕಿ.ಮೀ. ವೇಗದಲ್ಲಿ ಸಾಗಬಹುದು.
"ತಾಂತ್ರಿಕ ಎಲ್ಲೆಗಳನ್ನೆಲ್ಲ ಮೀರಿ ನಮ್ಮ ಎಂಜಿನಿಯರುಗಳು ವೇಗದ ಕಾರೊಂದನ್ನು ಅಭಿವೃದ್ಧಿಪಡಿಸಿದ್ದಾರೆ" ಎಂದು ಬುಗಾಟಿ ಅಧ್ಯಕ್ಷ ವೊಲ್ಫ್ ಗಾಂಗ್ ದ್ಯೂರೆಮೆರ್ ಹೇಳಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









