ಡಿವೊ ಹೈಪರ್‌ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬುಗಾಟಿ

ಐಷಾರಾಮಿ ಸ್ಪೋರ್ಟ್ಸ್ ಕಾರುಗಳ ತಯಾರಿಕೆಗೆ ಹೆಸರುವಾಸಿಯಾಗಿರುವ ಬುಗಾಟಿ ಕಂಪನಿಯು ಡಿವೊ ಹೈಪರ್‌ಕಾರ್ ಅನ್ನು 40 ಯುನಿಟ್ ಗಳಿಗೆ ಸೀಮಿತಗೊಳಿಸಿ ಅನಾವರಣಗೊಳಿಸಿದೆ. ಇದು ಬುಗಾಟಿ ಕಂಪನಿಯ ಕೊನೆಯ ಡಿವೊ ಹೈಪರ್‌ಕಾರ್ ಆಗಿದೆ.

ಡಿವೊ ಹೈಪರ್‌ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬುಗಾಟಿ

ಬುಗಾಟಿ ಮೊಲ್ಶೀಮ್ ಘಟಕದಿಂದ ಹೊರಬರುವ ಅಂತಿಮ ಬುಗಾಟಿ ಡಿವೊ ಹೈಪರ್‌ಕಾರ್ ನೀಲಿ ಬಣ್ಣದಲ್ಲಿದೆ. ಈ ಡಿವೊ ಮಾದರಿಯು ಬುಗಾಟಿ ಚಿರೋನ್ ಆಧಾರಿತ ಸೀಮಿತ ಹೈಪರ್‌ಕಾರ್ ಆಗಿದೆ ಮತ್ತು ಇದು ಕೇವಲ 40 ಯುನಿಟ್ ಗಳನ್ನು ಮಾತ್ರ ತಯಾರಿಸಲಾಗುತ್ತದೆ. ಇದು 40ನೇ ಯುನಿಟ್ ಬುಗಾಟಿ ಡಿವೊ ಉತ್ಪಾದನೆಯ ಅಂತಿಮ ಮಾದರಿಯಾಗಿದೆ. ಈ ಮೂಲಕ ಈ ಹೈಪರ್‌ಕಾರ್ ಇತಿಹಾಸದ ಪುಟ ಸೇರಲಿದೆ.

ಡಿವೊ ಹೈಪರ್‌ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬುಗಾಟಿ

ಬುಗಾಟಿ ಡಿವೊಗೆ ಫ್ರೆಂಚ್ ರೇಸಿಂಗ್ ಚಾಲಕ ಆಲ್ಬರ್ಟೊ ಡಿವೊ ಅವರ ಹೆಸರನ್ನು ಇಡಲಾಗಿದೆ. ಇದನ್ನು 2018 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು ಮತ್ತು ಒಂದು ವಾರದೊಳಗೆ ನಿರ್ಮಿಸಲು ನಿರ್ಧರಿಸಲಾದ ಎಲ್ಲಾ 40 ಯುನಿಟ್ ಗಳು ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ.

ಡಿವೊ ಹೈಪರ್‌ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬುಗಾಟಿ

ಕೊನೆಯ 40ನೇ ಕಾರನ್ನು ಯುರೋಪಿನಲ್ಲಿ ಅದರ ಮಾಲೀಕರಿಗೆ ತಲುಪಿಸಲಾಯಿತು. ಬುಗಾಟಿ ಡಿವೊ ಚಿರೋನ್ ಅನ್ನು ಆಧರಿಸಿದ್ದರೂ ಸಹ ಬುಗಾಟಿಯ ಎಂಜಿನಿಯರ್‌ಗಳು ಡಿವೊವನ್ನು ಹೆಚ್ಚು ಚುರುಕುತನ ಮತ್ತು ನಿರ್ವಹಣೆಯಲ್ಲಿ ನಿಖರವಾಗಿ ಮಾಡಿದ್ದಾರೆ. ಇದರ ಚಾಸಿಸ್ ಅನ್ನು ಉದ್ದಗೊಳಿಸಲಾಯಿತು.

ಡಿವೊ ಹೈಪರ್‌ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬುಗಾಟಿ

ನಂತರ ತೂಕವನ್ನು ಕಡಿಮೆ ಮಾಡಲಾಯಿತು. ಈ ಹೈಪರ್‌ಕಾರ್ ಉತ್ತಮ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದ್ದು, ಕಾರ್ಯಕ್ಷಮತೆಗೆ ಮತ್ತಷ್ಟು ಸಹಾಯ ಮಾಡಲು ಏರೋಡೈನಾಮಿಕ್ ವಿನ್ಯಾಸವನ್ನು ಮತ್ತಷ್ಟು ಸುಧಾರಣೆಗೊಳಿಸಿದ್ದಾರೆ.

ಡಿವೊ ಹೈಪರ್‌ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬುಗಾಟಿ

ಅದರ ಕಾರ್ಯಕ್ಷಮತೆಯನ್ನು ಸುಧಾರಿಸುವ ಭಾಗವಾಗಿ, ಬುಗಾಟಿ ತಂಪಾಗಿಸಲು ನೆರವಾಗಲು ಡಿವೊಗೆ ಹೆಚ್ಚುವರಿ ಏರ್ ಟೆಕ್ ಅನ್ನು ನೀಡಿದೆ. ಬುಗಾಟಿ ಡಿವೊವನ್ನು ಚಿರೋನ್‌ನಿಂದ ಸುಲಭವಾಗಿ ಗುರುತಿಸಬಹುದು,

ಡಿವೊ ಹೈಪರ್‌ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬುಗಾಟಿ

ಇನ್ನು ಈ ಹೈಪರ್‌ಕಾರಿನ ಬೂಮರಾಂಗ್ ಎಲ್ಇಡಿಗಳೊಂದಿಗೆ ಹೊಸ ಎಲ್ಇಡಿ ಹೆಡ್ ಲ್ಯಾಂಪ್, ಸಂಕೀರ್ಣವಾದ 3ಡಿ ಟೈಲ್ ಲ್ಯಾಂಪ್, ಎತ್ತರಿಸಿದ ಡಿಫ್ಯೂಸರ್ ಮತ್ತು ಅಗ್ರೇಸಿವ್ ಏರೋ ಅಂಶಗಳನ್ನು ಒಳಗೊಂಡಿದೆ.

ಡಿವೊ ಹೈಪರ್‌ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬುಗಾಟಿ

ಬುಗಾಟಿ ಡಿವೊ ಕಾರಿನಲ್ಲಿ 8.0-ಲೀಟರ್, ಕ್ವಾಡ್-ಟರ್ಬೋಚಾರ್ಜ್ಡ್ ಡಬ್ಲ್ಯು 16 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 1,500 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿದೆ.

ಡಿವೊ ಹೈಪರ್‌ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಬುಗಾಟಿ

ಡಿವೊದಲ್ಲಿ ಆಲ್-ವ್ಹೀಲ್-ಡ್ರೈವ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಕೇವಲ 2.4 ಸೆಕೆಂಡುಗಳಲ್ಲಿ 0 ಕಿ,ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೈಪರ್‌ಕಾರ್ ಗಂಟೆಗೆ 380 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Most Read Articles

Kannada
English summary
Bugatti Divo Production Ends. Read In Kannada.
Story first published: Saturday, July 24, 2021, 18:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X