ಮೈಕ್ರಾ ಧಮಾಕ: ಒಂದ್ರುಪಾಯಿಗೆ ಹತ್ಸಾವ್ರದ ಉಡುಗೊರೆ

ಜಪಾನಿನ ಕಾರು ತಯಾರಿಕಾ ಕಂಪನಿಯು ಎಂಟ್ರಿ ಲೆವೆಲ್ ಸಣ್ಣಕಾರು ಮೈಕ್ರಾ ಖರೀದಿದಾರರಿಗೆ ಅತ್ಯಾಕರ್ಷಕ ಕೊಡುಗೆಯೊಂದನ್ನು ಪ್ರಕಟಿಸಿದೆ. ಸುಮಾರು 10 ಸಾವಿರ ರುಪಾಯಿ ಮೌಲ್ಯದ ವಿಮೆ ಮತ್ತು ಆಕ್ಸೆಸರಿಗಳನ್ನು ಕೇವಲ 1 ರುಪಾಯಿಗೆ ಮೈಕ್ರಾ ಗ್ರಾಹಕರು ಪಡೆಯಬಹುದಾಗಿದೆ.

ಇದರೊಂದಿಗೆ ಗ್ರಾಹಕರು ಎಕ್ಸ್ ಚೇಂಜ್ ಸ್ಕೀಮ್ ಮೂಲಕ ಸುಮಾರು 15 ಸಾವಿರ ರುಪಾಯಿ ಪಡೆಯಬಹುದಾಗಿದೆ. ಈ ಆಫರ್ ಕೆಲವೇ ಕೆಲವು ದಿನಗಳು ಮಾತ್ರವೆಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಮೈಕ್ರಾ ಕಾರು ಖರೀದಿಸಬೇಕೆಂದಿದ್ದವರು ತ್ವರೆ ಮಾಡಬಹುದಾಗಿದೆ.

ನಿಸ್ಸಾನ್ ಮೈಕ್ರಾ ಹ್ಯಾಚ್ ಬ್ಯಾಕ್ ಕಾರನ್ನು ನಾಲ್ಕು ಪೆಟ್ರೋಲ್ ಮತ್ತು ಎರಡು ಡೀಸೆಲ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದರಲ್ಲಿ ಪೆಟ್ರೋಲ್ ಆವೃತ್ತಿಗಳು 1.2 ಲೀಟರಿನ ಡಿಒಎಚ್ ಸಿ, 12 ಕವಾಟ, 3 ಸಿಲಿಂಡರ್ ಎಂಜಿನ್ ಹೊಂದಿದೆ. ಇದು 76 ಹಾರ್ಸ್ ಪವರ್ ಮತ್ತು 104 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಪೆಟ್ರೋಲ್ ಆವೃತ್ತಿಯ ಎಂಜಿನ್ ಐದು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಈ ಕಾರು ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 18.06 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿಯು ಪ್ರತಿಪಾದಿಸಿದೆ.

ನಿಸ್ಸಾನ್ ಮೈಕ್ರಾ ಡೀಸೆಲ್ ಆವೃತ್ತಿಗಳು 1.5 ಲೀಟರಿನ ಕೆ9ಕೆ ಎಸ್ ಒಎಚ್ ಸಿ 4 ಸಿಲಿಂಡರ್ ಎಂಜಿನ್ ಹೊಂದಿವೆ. ಇದು ಗರಿಷ್ಠ 64 ಹಾರ್ಸ್ ಪವರ್ ಮತ್ತು 160 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಎಂಜಿನನ್ನು ಕಂಪನಿಯು ಸನ್ನಿ ಮತ್ತು ಇವಾಲಿಯಾ ಕಾರುಗಳಿಗೆ ಬಳಸುತ್ತಿದೆ. ಇದೇ ಎಂಜಿನ್ ರೆನೊ ಪಲ್ಸ್ ಮತ್ತು ಸ್ಕಾಲಾ ಕಾರುಗಳಲ್ಲೂ ಇದೆ.

ಅತ್ಯುತ್ತಮ ಡ್ರೈವಿಂಗ್ ಮತ್ತು ಹ್ಯಾಂಡ್ಲಿಂಗ್ ದಕ್ಷತೆ ಹೊಂದಿರುವ ನಿಸ್ಸಾನ್ ಮೈಕ್ರಾ ಸಿಟಿ ರಸ್ತೆಗೆ ಹೆಚ್ಚು ಸೂಕ್ತವಾದ ಕಾರು. ಪವರ್ ಸ್ಟಿಯರಿಂಗ್, ಪವರ್ ವಿಂಡೋಸ್, ಸ್ಟಿಯರಿಂಗ್ ಟಿಲ್ಟ್ ಹೊಂದಾಣಿಕೆ, ಸೆಂಟ್ರಲ್ ಡೋರ್ ಲಾಕ್ ಸಿಸ್ಟಮ್, ಪುಷ್ ಬಟನ್ ಸ್ಟಾರ್ಟ್, ಎಂಜಿನ್ ಮೊಬಿಲೈಝರ್, ಡ್ರೈವರ್ ಏರ್ ಬ್ಯಾಗ್, 15 ಇಂಚಿನ ಅಲಾಯ್ ವೀಲುಗಳು ಇದರಲ್ಲಿ ಗಮನ ಸೆಳೆಯುವ ಪ್ರಮುಖ ಫೀಚರುಗಳಾಗಿವೆ.

ನಿಸ್ಸಾನ್ ಮೈಕ್ರಾ ಆವೃತ್ತಿಗಳ ದರ(ದೆಹಲಿ ಎಕ್ಸ್ ಶೋರೂಂ)
* ಮೈಕ್ರಾ ಎಕ್ಸ್ಇ (ಪೆಟ್ರೋಲ್): 4,21,765 ರು.
* ಮೈಕ್ರಾ ಎಕ್ಸ್ ಇ ಪ್ಲಸ್ (ಪೆಟ್ರೋಲ್): 4,49,263 ರು.
* ಮೈಕ್ರಾ ಎಕ್ಸ್ಎಲ್ (ಪೆಟ್ರೋಲ್): 4,84,916 ರು.
* ಮೈಕ್ರಾ ಎಕ್ಸ್ ವಿ(ಪೆಟ್ರೋಲ್): 5,51,932 ರು.
* ಮೈಕ್ರಾ ಎಕ್ಸ್ ವಿ (ಡೀಸೆಲ್): 5,96,408 ರು.
* ಮೈಕ್ರಾ ಎಕ್ಸ್ ವಿ ಪ್ರೀಮಿಯಂ(ಡೀಸೆಲ್): 6,41,558 ರು.

More from DriveSpark

Article Published On: Wednesday, August 29, 2012, 16:07 [IST]
English summary
Japanese carmaker Nissan is offering an incredible offer on its entry level hatchback Micra. Buyers of the Nissan Micra can now get Insurance and accessories worth Rs.10,000 by paying just one rupee. Nissan Micra buyers can also get an additional cash benefit of Rs,15,000 if they are buying it on an exchange scheme.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+