ಡೀಸೆಲ್ ಕಾರುಗಳು ನಿರಾಳ, ಹೂಡಿಕೆಗಿದು ಸಕಾಲ

2012-13ನೇ ಸಾಲಿನ ಬಜೆಟಿನಲ್ಲಿ ಡೀಸೆಲ್ ಕಾರುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಭೀತಿಯಲ್ಲಿ ಹೆಚ್ಚಿನ ಕಾರು ಕಂಪನಿಗಳಿದ್ದವು. ಆದರೆ ವಾಹನ ಕಂಪನಿಗಳ ಭೀತಿಗೆ ವಿರುದ್ಧವಾಗಿ ಯಾವುದೇ ಹೆಚ್ಚುವರಿ ಡೀಸೆಲ್ ತೆರಿಗೆ ವಿಧಿಸಿಲ್ಲ. ಇದರಿಂದ ವಾಹನ ಕಂಪನಿಗಳು ನಿರಾಳವಾಗಿವೆ.

ಡೀಸೆಲ್ ಕಾರುಗಳಿಗೆ ಹೆಚ್ಚುವರಿ ತೆರಿಗೆ ಭಯದಿಂದ ಹೆಚ್ಚಿನ ಕಂಪನಿಗಳು ಬೃಹತ್ ಹೂಡಿಕೆಯನ್ನು ತಡೆಹಿಡಿದಿದ್ದವು. ಇದೀಗ ವಾಹನ ಕಂಪನಿಗಳು ನಿರಾಳವಾಗಿದ್ದು, ಕೋಟಿ ಕೋಟಿ ರುಪಾಯಿ ಹೂಡಿಕೆ ಮಾಡಲು ಮುಂದಾಗುವ ನಿರೀಕ್ಷೆಯಿದೆ.

ವಾಹನ ಕಂಪನಿಗಳು ಸುಮಾರು 3 ಸಾವಿರ ಕೋಟಿ ರುಪಾಯಿಯಷ್ಟು ಹಣವನ್ನು ಡೀಸೆಲ್ ಕಾರು ಸೆಗ್ಮೆಂಟ್ ಮೇಲೆ ಸುರಿಯುವ ನಿರೀಕ್ಷೆಯಿದೆ. ಮಹೀಂದ್ರ ಆಂಡ್ ಮಹೀಂದ್ರ, ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಂಪನಿಗಳು ಡೀಸೆಲ್ ಸೆಗ್ಮೆಂಟಿಗೆ ಹೂಡಿಕೆ ಮಾಡುವ ಕುರಿತು ಖಚಿತಪಡಿಸಿವೆ.

"ಬಜೆಟಿನಲ್ಲಿ ಯಾವುದೇ ನೂತನ ಡೀಸೆಲ್ ಕಾರು ತೆರಿಗೆ ವಿಧಿಸಲಾಗಿಲ್ಲ. ಹೀಗಾಗಿ ತಡೆ ಹಿಡಿದ ಹೂಡಿಕೆಯನ್ನು ಬಿಡುಗಡೆಮಾಡಲು ಇದು ಸಕಾಲ" ಎಂದು ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಬಾಸ್ ಪವನ್ ಗೋಯೆಂಕಾ ಹೇಳಿದ್ದಾರೆ.

ಹ್ಯುಂಡೈ ಇಂಡಿಯಾ ಕೂಡ ಕಳೆದ ವರ್ಷ ಡೀಸೆಲ್ ಘಟಕಕ್ಕಾಗಿ ಸುಮಾರು 400 ಕೋಟಿ ರು. ಹೂಡಿಕೆ ಮಾಡುವುದಾಗಿ ಹೇಳಿತ್ತು. "ಡೀಸೆಲ್ ಘಟಕಕ್ಕೆ ಹೂಡಿಕೆ ಮಾಡುವ ಕುರಿತು ಇನ್ನೆರಡು ವಾರಗಳಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದ್ದೇವೆ" ಎಂದು ಹ್ಯುಂಡೈ ವಕ್ತಾರರು ಹೇಳಿದ್ದಾರೆ. ಹ್ಯುಂಡೈ ಘಟಕವು ವರ್ಷಕ್ಕೆ ಒಂದುವರೆ ಲಕ್ಷ ಡೀಸೆಲ್ ಎಂಜಿನ್ ಉತ್ಪಾದಿಸುವ ಗುರಿ ಹೊಂದಿದೆ.

ಡೀಸೆಲ್ ಕಾರು ಸೆಗ್ಮೆಂಟಿಗೆ ಹೂಡಿಕೆ ಮಾಡುವ ಕುರಿತು ಮಾರುತಿ ಸುಜುಕಿ ಕಡೆಯಿಂದ ಯಾವುದೇ ಸ್ಪಷ್ಟ ಸೂಚನೆ ದೊರಕಿಲ್ಲ. "ಭವಿಷ್ಯದಲ್ಲಿ ಡೀಸೆಲ್ ದರಗಳ ಕಥೆ ಏನಾಗಲಿದೆ ಎನ್ನುವ ಕುರಿತು ಯಾವುದೇ ಸ್ಪಷ್ಟತೆ ಇಲ್ಲದ ಕಾರಣ ಕಾರು ಕಂಪನಿಗಳು ಸಂದಿಗ್ಧತೆಯಲ್ಲಿವೆ" ಎಂದು ದೇಶದ ವಾಹನ ಒಕ್ಕೂಟ ಇತ್ತೀಚೆಗೆ ತಿಳಿಸಿತ್ತು.

More from DriveSpark

Article Published On: Monday, March 19, 2012, 15:28 [IST]
English summary
The auto industry was under tremendous pressure days before the union budget for 2012-13 was to be presented due to reports about a possible diesel car tax. This tax would make diesel car prices to shoot up by as much as 20 per cent. This had also meant huge investments to ramp up production was with held by
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+