ನಮ್ಮ ಮಂತ್ರಿಗಳ ಅಚ್ಚರಿಯ ಕಾರುಲೋಕ ನೋಡಬನ್ನಿ

ದೇಶವನ್ನು ಆಳುವ ಮಂತ್ರಿ ಮಹೋದಯರು ಅದ್ದೂರಿ ಜೀವನದಲ್ಲಿ ಯಾವೆಲ್ಲ ಅದ್ದೂರಿ ಕಾರುಗಳನ್ನು ಬಳಸುತ್ತಾರೆ ಎಂಬ ಸಂಶಯ ನಿಮಗಿರಬಹುದು. ಕೆಲವು ರಾಜಕಾರಣಿಗಳು ಐಷಾರಾಮಿ ಕಾರು ಬಳಸುತ್ತಿದ್ದಾರೆ. ಆದರೆ ನಿಮಗೆ ಅಚ್ಚರಿಯಾಗಬಹುದು. ಕೆಲವು ಮಂತ್ರಿಗಳು ಇನ್ನೂ ಜನಸಾಮಾನ್ಯರು ಬಳಸುವ ಸಾಮಾನ್ಯ ಕಾರುಗಳನ್ನೇ ಬಳಸುತ್ತಿದ್ದಾರೆ.

ನಿಮಗೆ ಗೊತ್ತೆ? ಕೃಷಿ ಸಚಿವ ಶರದ್ ಪವರ್ ಬಳಿ ಕಾರುಗಳೇ ಇಲ್ಲವಂತೆ. ಪ್ರಧಾನಿ ಬಳಿ ಇರುವುದು ಮಾರುತಿ 800 ಅಂತೆ! ಹಾಗಾದರೆ ಪ್ರಣಬ್ ಮುಖರ್ಜಿ, ಎಸ್. ಎಂ. ಕೃಷ್ಣ, ಸಲ್ಮಾನ್ ಖುರ್ಷಿದ್, ಜೈರಾಮ್ ರಮೇಶ್, ಕಮಲ್ ನಾಥ್, ಆಂಟನಿ ಮುಂತಾದವರ ಬಳಿ ಯಾವೆಲ್ಲ ಕಾರುಗಳಿವೆ. ಚಿತ್ರ ಸುದ್ದಿಗೆ ಸ್ವಾಗತ. ಮುಂದಿನ ಚಿತ್ರ ಕ್ಲಿಕ್ ಮಾಡಿ.

ಪ್ರಧಾನಿಯ ಮಾರುತಿ 800 ಕಾರು

ಪ್ರಧಾನಿಯ ಮಾರುತಿ 800 ಕಾರು

ದೇಶದ ಪ್ರಧಾನಿ ಮನಮೋಹನ್ ಸಿಂಗ್ ಬಳಿ 1996ರ ಮಾರುತಿ 800 ಕಾರಿದೆ. ಆದರೆ ಪ್ರಧಾನಿಯಾಗಿ ಅವರು ಬಳಸುವುದು ಕಚೇರಿಯ ಬಿಎಂಡಬ್ಲ್ಯು 7 ಸೀರಿಸ್ ಕಾರು. ಪ್ರಧಾನಿ ಬಳಿಯಿರುವ ಮಾರುತಿ 800 ಮಾರುಕಟ್ಟೆ ಮೌಲ್ಯ ಈಗ 27,500 ರು.

ಪ್ರಣಬ್ ಮುಖರ್ಜಿ ಐಕಾನ್ ಕಾರು

ಪ್ರಣಬ್ ಮುಖರ್ಜಿ ಐಕಾನ್ ಕಾರು

ಪ್ರಣಬ್ ಮುಖರ್ಜಿ 2000ನೇ ಇಸವಿಯ ಫೋರ್ಡ್ ಐಕಾನ್ ಕಾರಿನ ಮಾಲಿಕ. ಅದರ ಮಾರುಕಟ್ಟೆ ಮೌಲ್ಯ 1,06,250 ರು. ಅಂತೆ.

ಎಸ್. ಎಂ. ಕೃಷ್ಣರ ಕಾರು ಯಾವುದು?

ಎಸ್. ಎಂ. ಕೃಷ್ಣರ ಕಾರು ಯಾವುದು?

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಬಳಿ ಎರಡು ಕಾರುಗಳಿವೆ. ಮಿಟ್ಸುಬಿಸಿ ಕಂಪನಿಯ ಲ್ಯಾನ್ಸರ್ ಮತ್ತು ಹ್ಯುಂಡೈ ಕಂಪನಿಯ ಸೊನಾಟಾ. ಇವೆರಡು ಕಾರುಗಳಿಗೆ ಎಸ್ಎಂ ಕೃಷ್ಣ ಕ್ರಮವಾಗಿ 8.30 ಲಕ್ಷ ರು. ಮತ್ತು 13.08 ಲಕ್ಷ ರು. ಪಾವತಿಸಿದ್ದಾರಂತೆ.

ಸಲ್ಮಾನ್ ಖುರ್ಷಿದ್ ಕಾರು

ಸಲ್ಮಾನ್ ಖುರ್ಷಿದ್ ಕಾರು

ಸಲ್ಮಾನ್ ಖುರ್ಷಿದ್ ಬಳಿ 1999ರ ಮಹೀಂದ್ರ ಜೀಪ್, 2005ರ ಟೊಯೊಟಾ ಇನ್ನೋವಾ ಕಾರು ಮತ್ತು ಒಂದು ಮಲ್ಟಿ ಪರ್ಪೊಸ್ ವೆಹಿಕಲ್ ಇದೆ.

ಕಪಿಲ್ ಸಿಬಲ್: ರಾಯಲ್ ಎನ್ ಫೀಲ್ಡ್ ಬುಲೆಟ್ ಇಷ್ಟ

ಕಪಿಲ್ ಸಿಬಲ್: ರಾಯಲ್ ಎನ್ ಫೀಲ್ಡ್ ಬುಲೆಟ್ ಇಷ್ಟ

ಕಪಿಲ್ ಸಿಬಾಲ್ ಸೆಡಾನ್ ಕಾರು ಟೊಯೊಟಾ ಕೊರೊಲಾ, ಮಧ್ಯಮ ಗಾತ್ರದ ಹ್ಯುಂಡೈ ಸೊನಟಾ ಮತ್ತು ಸುಜುಕಿ ಕಂಪನಿಯ ಜೀಪ್ ಇದೆ.

ವಿಶೇಷವೆಂದರೆ ಕಪಿಲ್ ಸಿಬಲ್ ರಾಯಲ್ ಎನ್ ಫೀಲ್ಡ್ ಬೈಕ್ ಕೂಡ ಹೊಂದಿದ್ದಾರೆ.

ಮಾರುತಿ ಝೆನಿಗೆ ಜೈ ಎಂದ ಜೈರಾಮ್ ರಮೇಶ್

ಮಾರುತಿ ಝೆನಿಗೆ ಜೈ ಎಂದ ಜೈರಾಮ್ ರಮೇಶ್

ಜೈರಾಂ ರಮೇಶ್ ಬಳಿ ಮಾರುತಿ ಝೆನ್ ಕಾರಿದೆ. ಇದನ್ನು 2004ರಲ್ಲಿ ಖರೀದಿಸಿದ್ದರು.

ಕಮಲ್ ನಾಥ್ ಬಳಿ ಟಾಟಾ ನ್ಯಾನೊ

ಕಮಲ್ ನಾಥ್ ಬಳಿ ಟಾಟಾ ನ್ಯಾನೊ

ನಗರಾಭಿವೃದ್ಧಿ ಸಚಿವ ಕಮಲ್ ನಾಥ್ ಬಳಿ ಟಾಟಾ ನ್ಯಾನೊ ಎಲ್ಎಕ್ಸ್ ಕಾರಿದೆ. ಮತ್ತೊಂದು ಅಂಬಾಸಡರ್ ಕಾರು ಸಹ ಅವರಲ್ಲಿದೆಯಂತೆ.

ಆಂಟನಿ ಬಳಿ ವ್ಯಾಗನಾರ್

ಆಂಟನಿ ಬಳಿ ವ್ಯಾಗನಾರ್

ರಕ್ಷಣಾ ಸಚಿವ ಎಕೆ ಆಂಟನಿ ಬಳಿ ಮಾರುತಿ ವ್ಯಾಗನಾರ್ ಕಾರಿದೆ.

ಚಿದಂಬರ ರಹಸ್ಯ ಬಯಲು

ಚಿದಂಬರ ರಹಸ್ಯ ಬಯಲು

ಹಣಕಾಸು ಸಚಿವ ಪಿ ಚಿದಂಬರ್ ಬಳಿ ಫೋರ್ಡ್ ಫಿಯೆಸ್ಟಾ, ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಕಂಪನಿಯ ಕಾರುಗಳಿವೆಯಂತೆ. ಜೊತೆಗೆ ಅವರ ಬಳಿ ಸೈಕಲೊಂದು ಇದೆಯಂತೆ.

More from DriveSpark

Article Published On: Wednesday, September 26, 2012, 14:30 [IST]
English summary
Indian politicians Cars. PM Manmohan Singh Maruti 800, P Chidambaram Ford Fiesta, A. K. Antony Maruti Wagonr, Kamal Nath Nano Car, Jairam Ramesh Maruti Zen car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+