ದೊಡ್ಡ ನಟರಷ್ಟೇ ಅಲ್ಲ..! 4 ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಉಡುಪಿಯ ಮನೆಮಗಳು ನಟಿ ಪೂಜಾ ಹೆಗ್ಡೆ
ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿ, ವಾಪಾಸ್ ಬಂದು ನಟ ಶಾಹಿದ್ ಕಪೂರ್ ಜೊತೆಯಲ್ಲಿ ಹೊಸ ಸಿನಿಮಾದ ಕೆಲಸವನ್ನು ಶುರು ಮಾಡಿರುವ ನಟಿ ಪೂಜಾ ಹೆಗ್ಡೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇತ್ತೀಚೆಗೆ ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ.
ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಸಿನಿರಂಗದಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಪೂಜಾ ಹೆಗ್ಡೆ (Pooja Hegde), ರೂ.4 ಕೋಟಿ ಮೌಲ್ಯದ ಹೊಚ್ಚ ಹೊಸ ಐಷಾರಾಮಿ ರೇಂಜ್ ರೋವರ್ ಎಸ್‌ಯುವಿಯನ್ನು ಕೊಂಡುಕೊಂಡಿದ್ದಾರೆ. ಇತ್ತೀಚೆಗೆ, ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ರೇಂಜ್ ರೋವರ್ ಕಾರನ್ನು ಖರೀದಿಸಿ, ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿದ್ದರು.

ಬಾಲಿವುಡ್ ನಟಿ ನಿಮ್ರತ್ ಕೌರ್, ರಣಬೀರ್ ಕಪೂರ್, ಆದಿತ್ಯ ರಾಯ್ ಕಪೂರ್, ಸೋನಮ್ ಕಪೂರ್, ಟಾಲಿವುಡ್ ನಟ ಮಹೇಶ್ ಬಾಬು, ಮಾಲಿವುಡ್ ನಟ ಮೋಹನ್ ಲಾಲ್ ಹಾಗೂ ಮಲೈಕಾ ಅರೋರಾ ಕೂಡ ರೇಂಜ್ ರೋವರ್ ಎಸ್‌ಯುವಿ ಮಾಲೀಕರಾಗಿದ್ದಾರೆ. ಪೂಜಾ ಹೆಗ್ಡೆ ಖರೀದಿಸಿರುವ ಕಾರಿನ ನಿಖರವಾದ ರೂಪಾಂತರದ ಬಗ್ಗೆ ಮಾಹಿತಿಯಿಲ್ಲ.
ಭಾರತದ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಎಸ್ಇ, ಹೆಚ್ಎಸ್ಇ, ಆಟೋಬಯೋಗ್ರಫಿ ಹಾಗೂ ಫಸ್ಟ್ ಎಡಿಷನ್ ವೇರಿಯೆಂಟ್ ಆಯ್ಕೆಯಲ್ಲಿ ಸಿಗುತ್ತದೆ. ಈ ಕಾರು, ಮೂರು ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಅವುಗಳೆಂದರೆ, 3 - ಲೀಟರ್ 6 ಸಿಲಿಂಡರ್ ಪೆಟ್ರೋಲ್ ಎಂಜಿನ್, 400 PS ಗರಿಷ್ಠ ಪವರ್ ಹಾಗೂ 550 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಮತ್ತೊಂದು, 3 - ಲೀಟರ್ ಡೀಸೆಲ್ ಎಂಜಿನ್, 351 PS ಪವರ್, 700 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಒಳಗೊಂಡಿದೆ. ಇನ್ನೊಂದು, 4.4 - ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್, 530 PS ಗರಿಷ್ಠ ಪವರ್ ಮತ್ತು 750 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
ಈ ಕಾರು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, 14.01 kmpl ಮೈಲೇಜ್ ನೀಡುತ್ತದೆ. ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 13.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 1600 W ಮೆರಿಡಿಯನ್ ಸೌಂಡ್ ಸಿಸ್ಟಮ್, ಅಮೆಜಾನ್ - ಅಲೆಕ್ಸಾ ಕನೆಕ್ಟಿವಿಟಿ, ಮಲ್ಟಿ ಜೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

4, 5 ಹಾಗೂ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ರೇಂಜ್ ರೋವರ್, ಸುರಕ್ಷತೆಯ ದೃಷ್ಟಿಯಿಂದಲ್ಲೂ ಏರ್ ಬಾಗ್ಸ್ ಒಳಗೊಂಡಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಕಾರಿಗೆ, ಲೆಕ್ಸಸ್ ಎಲ್ಎಕ್ಸ್, ಮರ್ಸಿಡಿಸ್ ಬೆಂಜ್ ಮೇಬ್ಯಾಕ್, ಆಸ್ಟನ್ ಮಾರ್ಟಿನ್ ಹಾಗೂ ಬೆಂಟ್ಲಿ ಬೆಂಟೈಗಾ ಸೇರಿದಂತೆ ದೊಡ್ಡ ಪ್ರತಿಸ್ಪರ್ಧಿಗಳೇ ಇವೆ.
ಇನ್ನು, ನಟಿ ಪೂಜಾ ಹೆಗ್ಡೆ ಪೋರ್ಷೆ ಕಯೆನ್ನೆ, ಜಾಗ್ವಾರ್ ಮತ್ತು ಆಡಿ ಕ್ಯೂ7ನಂತಹ ಐಷಾರಾಮಿ ಕಾರುಗಳನ್ನು ಕೂಡ ಹೊಂದಿದ್ದಾರೆ. ಅವರ ಪೋಷಕರು ಮೂಲತಃ ಉಡುಪಿಯವರು. ಆದರೆ, ಉದ್ಯೋಗ ನಿಮಿತ್ತ ಮುಂಬೈನಲ್ಲಿ ನೆಲೆಸಿದ್ದರು. 2012ರಲ್ಲಿ ಪೂಜಾ, ತಮಿಳಿನ 'ಮುಗಮೂಡಿ' ಚಿತ್ರದ ಮೂಲಕ ನಾಯಕ ನಟಿಯಾದರು. ಆ ಬಳಿಕ, ತೆಲುಗು ಹಿಂದಿ ಸಿನಿಮಾಗಳ ಮೂಲಕ ಹೆಚ್ಚು ಜನಪ್ರಿಯರಾದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








