ಅಂದು ಪಾಕೆಟ್ ಮನಿಗಾಗಿ ಕನ್ನಡ ಚಿತ್ರ ಮಾಡಿದ್ದ ನಟಿ: ಇಂದು 3 ಕೋಟಿಯ ಮರ್ಸಿಡಿಸ್ ಕಾರು ಖರೀದಿ

ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet) ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ತನ್ನ ಅದ್ಬುತ ನಟನಾ ಕೌಶಲ್ಯದ ಮೂಲಕ ನೋಡುಗರನ್ನು ಮಂತ್ರಮುಗ್ದಗೊಳಿಸುತ್ತಿದ್ದಾರೆ. ಇದೀಗ, ದುಬಾರಿ ಬೆಲೆಯ ಮರ್ಸಿಡಿಸ್ (Mercedes) ಕಾರನ್ನು ವಿತರಣೆ ಪಡೆದಿದ್ದಾರೆ.

ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರಂತಹ ಘಟಾನುಘಟಿ ನಟರೊಂದಿಗೆ ಆಕ್ಟ್ ಮಾಡಿರುವ ನಟಿ ರಾಕುಲ್ ಪ್ರೀತ್ ಸಿಂಗ್, ತಮ್ಮ ಮೊದಲ ಸಿನಿಮಾವನ್ನು ಪಾಕೆಟ್ ಮನಿಗಾಗಿ ಮಾಡಿದ್ದೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. 2009ರಲ್ಲಿ ತೆರೆಕಂಡಿದ್ದ ಕನ್ನಡದ 'ಗಿಲ್ಲಿ' ಅವರ ಫಸ್ಟ್ ಫಿಲ್ಮ್ ಆಗಿದ್ದು, ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್, ಯೆತಿರಾಜ್ ಜಗ್ಗೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಾಘವ ಲೋಕಿ ಆಕ್ಷನ್ ಕಟ್ ಹೇಳಿದ್ದರು.

ಅಂದು ಪ್ಯಾಕೆಟ್ ಮನಿಗಾಗಿ ಕನ್ನಡ ಚಿತ್ರ ಮಾಡಿದ್ದ ನಟಿ: ಇಂದು 3 ಕೋಟಿಯ ಮರ್ಸಿಡಿಸ್ ಕಾರು ಖರೀದಿ

ಕೆಲವೇ ದಿನಗಳ ಹಿಂದೆ, ದೇಶದಲ್ಲಿ ಬಹು ಬೇಡಿಕೆಯಿರುವ ಐಷಾರಾಮಿ ಎಸ್‌ಯುವಿ, ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 (Mercedes Maybach GLS 600) ಅನ್ನು ರಾಕುಲ್ ಡಿಲೆವರಿ ಪಡೆದಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ನಟಿ ರಾಕುಲ್ ಪ್ರೀತ್ ಸಿಂಗ್, ಹೊಸ ಕಾರಿನ ಮುಂದೆ ಪಾಪರಾಜಿಗಳ ಫೋಟೋಗೆ ಪೋಸ್ ನೀಡುತ್ತಿವುದನ್ನು ವಿಡಿಯೋದಲ್ಲಿ ಕಾಣಬಹುದು. ಕಪ್ಪು ಬಣ್ಣದ ಮರ್ಸಿಡಿಸ್ ಎಸ್‌ಯುವಿಯನ್ನು ಆಕೆ ಕೊಂಡುಕೊಂಡಿದ್ದಾರೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600, ರೂ.2.92 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಈ ಕಾರು, ಶಕ್ತಿಯುತ 3982 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಪಡೆದಿದ್ದು, 549.81 bhp ಗರಿಷ್ಠ ಪವರ್ ಹಾಗೂ 730 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ರೂಪಾಂತರಗಳು ಪೋಲಾರ್ ವೈಟ್, ಕ್ಯಾವನ್‌ಸೈಟ್ ಬ್ಲೂ, ಡಿಸೈನೊ ಡೈಮಂಡ್ ವೈಟ್ ಬ್ರೈಟ್, ಮೊಜಾವೆ ಸಿಲ್ವರ್, ಡಿಸೈನೊ ಹಯಸಿಂತ್ ರೆಡ್, ಸೆಲೆನೈಟ್ ಗ್ರೇ, ಅಬ್ಸಿಡಿಯನ್ ಬ್ಲ್ಯಾಕ್ ವಿತ್ ರುಬೆಲೈಟ್ ರೆಡ್, ಬ್ರಿಲಿಯಂಟ್ ಬ್ಲೂ, ಮೊಜಾವೆ ಸಿಲ್ವರ್, ಅಬ್ಸಿಡಿಯಂ ಬ್ಲ್ಯಾಕ್ ವಿತ್ ಕಲಹರಿಯಮ್, ಐರಿಡ್ ಸಿಲ್ವರ್ ವಿತ್ ಸೆಲೆನೈಟ್ ಗ್ರೇ ಸೇರಿದಂತೆ 14 ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.

4 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, ಮಲ್ಟಿ - ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ಎಕ್ಸ್ಟೀರಿಯರ್ ರೇರ್ ವ್ಯೂ ಮಿರರ್, ಟಚ್ ಸ್ಕ್ರೀನ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿದೆ.

ಜೊತೆಯಲ್ಲಿ ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ, ಅಲಾಯ್ ವೀಲ್ಸ್, ಫಾಗ್ ರೀವ್ ವಿಂಡೋಸ್, ಫಾಗ್ ರೀ ಲೈಟ್ಸ್, ವಿಂಡೋಸ್ ಪಿ ಲೈಟ್ಸ್ ಸೇರಿದಂತೆ ಹತ್ತಾರು ಫೀಚರ್ಸ್ ಒಳಗೊಂಡಿದೆ. ಈ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಕಾರಿಗೆ ಬಿಎಂಡಬ್ಲ್ಯೂ ಎಕ್ಸ್7 (BMW X7), ವೋಲ್ವೋ ಎಕ್‌ಸಿ90 (Volvo XC90) ಹಾಗೂ ಅಡಿ ಕ್ಯೂ7 (Audi Q7) ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, September 13, 2023, 11:50 [IST]
English summary
Rakul preet buy brand new mercedes car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+