ಮೈಲೇಜಲ್ಲಿ ಇಂಡಿಕಾ ಇವಿ2 ಹಿಂದಿಕ್ಕಿದ ಷೆವರ್ಲೆ ಬೀಟ್

ಜನರಲ್ ಮೋಟರ್ಸ್ ಇಂಡಿಯಾ ಕಂಪನಿಯ ಷೆವರ್ಲೆ ಬೋಟ್ ಡೀಸೆಲ್ ಕಾರು ಈಗ ಪ್ರತಿಲೀಟರಿಗೆ 25.4 ಕಿ.ಮೀ. ಮೈಲೇಜ್ ನೀಡುತ್ತದೆ. ಇಲ್ಲಿವರೆಗೆ ಪ್ರತಿಲೀಟರಿಗೆ 25 ಕಿ.ಮೀ. ಮೈಲೇಜ್ ನೀಡುವ ಇಂಡಿಕಾ ಇವಿ2 ಕಾರು ಅತ್ಯಧಿಕ ಮೈಲೇಜ್ ಕಾರಾಗಿತ್ತು.
ವಾಹನ ಪರೀಕ್ಷೆಯ ಅಂತಾರಾಷ್ಟ್ರೀಯ ಕೇಂದ್ರ ಅಥವಾ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಆಟೋಮೊಟಿವ್ ಟೆಸ್ಟಿಂಗ್(ಐಸಿಎಟಿ) ಇದನ್ನು ದೃಢೀಕರಿಸಿದೆ. ಬೀಟ್ ಡೀಸೆಲ್ ಎಂಜಿನ್ ನಲ್ಲಿ ಮಾಡಿರುವ ಸಣ್ಣಪುಟ್ಟ ಮಾರ್ಪಾಡಿನಿಂದಾಗಿ ಬೀಟ್ ಮೈಲೇಜ್ ಹೆಚ್ಚಾಗಿದೆ ಎಂದು ಐಸಿಎಟಿ ಹೇಳಿದೆ.
2012ರ ಟಾಟಾ ನ್ಯಾನೊ ಕೂಡ ಅತ್ಯಧಿಕ ಮೈಲೇಜ್ ನೀಡುವ ಕಾರು. ಇದು ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 25.3 ಕಿ.ಮೀ. ಮೈಲೇಜ್ ನೀಡುತ್ತದೆ. ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿರುವ ಟಾಟಾ ನ್ಯಾನೊ ಸಿಎನ್ ಜಿ ಕಾರು ಪ್ರತಿಲೀಟರ್ ಡೀಸೆಲಿಗೆ 30-35 ಕಿ.ಮೀ. ಮೈಲೇಜ್ ಕೊಡಬಹುದಂತೆ. ಫೋಕ್ಸ್ ವ್ಯಾಗನ್ ಕಂಪನಿಯ ಎಕ್ಸ್ಎಲ್ 1 ಡೀಸೆಲ್ ಕಾನ್ಸೆಪ್ಟ್ ಕಾರು 111 ಕಿ.ಮೀ. ಮೈಲೇಜ್ ನೀಡಬಹುದೆಂದು ಹೇಳಲಾಗಿದೆ.


Click it and Unblock the Notifications








