ಈ ತಿಂಗ್ಳಲ್ಲಿ ರಸ್ತೆಗೆ, ಹೊಸ ಷೆವರ್ಲೆ ಕ್ರೂಝ್ ಸೆಡಾನ್

ಜನರಲ್ ಮೋಟರ್ಸ್ ಫ್ಯಾಕ್ಟರಿಯಿಂದ ಷೆವರ್ಲೆ ಬ್ರಾಂಡಿನಡಿ ಕ್ರೂಝ್ ಎಂಬ ಡಿ ಸೆಗ್ಮೆಂಟ್ ಸೆಡಾನ್ ಕಾರೊಂದು ಶೀಘ್ರದಲ್ಲಿ ದೇಶದ ರಸ್ತೆಗಿಳಿಯಲಿದೆ. ಷೆವರ್ಲೆ ಕ್ರೂಝ್ ದೇಶದ ರಸ್ತೆಗೆ ಪ್ರಸಕ್ತ ತಿಂಗಳ ಅಂತ್ಯದೊಳಗೆ ಆಗಮಿಸುವ ಸೂಚನೆಯಿದೆ. ಆಕರ್ಷಕ ಸೌಂದರ್ಯದ ಕ್ರೂಝ್ ಕಂಪನಿಯ ಪ್ರಮುಖ ವೇಗದ ಕಾರು ಕೂಡ ಹೌದು.

ಇತರ ಕಾರುಗಳಂತೆ ನೂತನ ಷೆವರ್ಲೆ ಕ್ರೂಝ್ ಕೇವಲ ಕಾಸ್ಮೆಟಿಕ್ ವಿನ್ಯಾಸದಲ್ಲಿ ಬದಲಾವಣೆಯಾಗಿ ಆಗಮಿಸುತ್ತಿಲ್ಲ. ಷೆವರ್ಲೆ ಕ್ರೂಝ್ ನೂತನ ಝಡ್ ಸರಣಿಯ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರಲಿದೆ. ವಿಶೇಷವೆಂದರೆ ಜನರಲ್ ಮೋಟರ್ಸ್ ಕಂಪನಿಯು ಕೇವಲ ದೇಶದ ರಸ್ತೆಗೆ ಮಾತ್ರ ಡೀಸೆಲ್ ಆವೃತ್ತಿ ಪರಿಚಯಿಸಲಿದೆ. ಇಲ್ಲಿಗೆ ಪೆಟ್ರೋಲ್ ಆವೃತ್ತಿ ಪರಿಚಯಿಸುವ ಯಾವುದೇ ಇಂಗಿತವನ್ನು ಕಂಪನಿ ಪ್ರಕಟಿಸಿಲ್ಲ.

ನೂತನ ಷೆವರ್ಲೆ ಕ್ರೂಝ್ ಝಡ್ ಸರಣಿಯ ಎಂಜಿನ್ ಹೆಚ್ಚು ಶಕ್ತಿಶಾಲಿ ಮತ್ತು ಕಾರ್ಯಕ್ಷಮತೆಯೊಂದಿಗೆ ಆಗಮಿಸುವ ಸೂಚನೆಗಳಿವೆ. ಒಟ್ಟಾರೆ ಸ್ಮೂತ್ ಸವಾರಿಗೆ ಸೂಕ್ತವಾಗುವಂತೆ ಇರಲಿದೆ. ಸದ್ಯ ರಸ್ತೆಯಲ್ಲಿರುವ ಕ್ರೂಝ್ ಕಾರು ವಿಸಿಡಿಐ ಎಂಜಿನ್ ಹೊಂದಿದೆ. ಆದರೆ ಹಳೆಯ ಕ್ರೂಝ್ ಕಾರಿನಲ್ಲಿ ಟ್ರಾಫಿಕ್ ನಲ್ಲಿ ಸವಾರಿ ಮಾಡೋದು ಕಷ್ಟವೆಂಬ ದೂರು ಚಾಲಕರದ್ದು. ಹೊಸ ಕ್ರೂಝ್ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಹೆಚ್ಚಿನ ಪವರ್ ಜೊತೆ ಆಗಮಿಸುವ ಸೂಚನೆಯಿದೆ.

ನೂತನ ಝಡ್ ಸರಣಿಯ ಕ್ರೂಝ್ ಎಂಜಿನ್ ಟರ್ಬೊ ಲ್ಯಾಗ್ ಹೊಂದಿರುವ ನಿರೀಕ್ಷೆಯಿದೆ. ಇದರಿಂದ ಸೆಡಾನ್ ಕಾರಿನ ಡ್ರೈವೆಬಿಲಿಟಿ ಹೆಚ್ಚಾಗಲಿದೆ. ಜೊತೆಗೆ ಹೆಚ್ಚು ಅಶ್ವಶಕ್ತಿ ಮತ್ತು ಟಾರ್ಕ್ ಶಕ್ತಿಯೊಂದಿಗೆ ಆಗಮಿಸುವುದಾಗಿ ಮೂಲಗಳು ಹೇಳಿವೆ. ಹೊಸ ಕ್ರೂಝ್ 164 ಅಶ್ವಶಕ್ತಿ ಮತ್ತು 380 ಟಾರ್ಕ್ ಪವರ್ ದೊರಕುವ ನಿರೀಕ್ಷೆಯಿದೆ. ಅಂದರೆ ಹಳೆಯ ಕ್ರೂಝ್ ಕಾರಿಗಿಂತ ಸುಮಾರು 16 ಅಶ್ವಶಕ್ತಿ ಮತ್ತು 53 ಎನ್ಎಂ ಟಾರ್ಕ್ ಪವರ್ ಹೆಚ್ಚಿರಲಿದೆ.

ಷೆವರ್ಲೆ ಬ್ರಾಂಡ್ ಎರಡು ಕ್ರೂಝ್ ಆವೃತ್ತಿಗಳನ್ನು ಪರಿಚಯಿಸಲಿದೆ. 6 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ದೊರಕಲಿದೆ. ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಹೊರತುಪಡಿಸಿ ಈ ಎರಡು ಆವೃತ್ತಿಗಳಲ್ಲಿ ಬೇರೆ ಯಾವುದೇ ಬದಲಾವಣೆ ಇರುವುದಿಲ್ಲವಂತೆ. ಅಂದಹಾಗೆ ನೂತನ ಕ್ರೂಝ್ ದರ ವಿವರ ಸದ್ಯಕ್ಕೆ ಲಭ್ಯವಿಲ್ಲ.

More from DriveSpark

Article Published On: Thursday, June 21, 2012, 9:36 [IST]
English summary
The General Motors owned Chevrolet brand is all set to launch the new Cruze in India June 2012. The new Chevrolet Cruze will not be getting just cosmetic design changes like the many updates that other cars get. Instead the new Cruze will now get the new Z-series of turbo charged diesel engines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+