ಬೆಂಗಳೂರಿನಲ್ಲಿ ಸೆರೆಸಿಕ್ಕಳು ಸೈಲ್ ಸುಂದರಿ

By Nagaraja

ಅಮೆರಿಕ ಕಾರು ತಯಾರಕ ಕಂಪನಿಯಾದ ಜನರಲ್ ಮೋಟಾರ್ಸ್ ಬಹುನಿರೀಕ್ಷಿತ ಷೆವರ್ಲೆ ಸೈಲ್ ಸೆಡಾನ್ ಕಾರಿನ ಸ್ಪೈ ಷಾಟ್ಸ್ ಚಿತ್ರಗಳು ಲೀಕ್ ಆಗಿವೆ. ಮಾರುತಿ ಸ್ವಿಫ್ಟ್ ಡಿಜೈರ್‌ಗಳಂತಹ ಜನಪ್ರಿಯ ಕಾರುಗಳಿಗೆ ಷೆವರ್ಲೆ ಸೈಲ್ ಸೆಡಾನ್ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಡೆನ್ವೆರ್ ಡಿಸೋಜಾ ಎಂಬವರು ಷೆವರ್ಲೆ ಸೈಲ್ ಸೆಡಾನ್ ಸ್ಪೈ ಷಾಟ್ಸ್ ಸೆರೆ ಹಿಡಿದಿದ್ದಾರೆ. ಇದೀಗ ಎಕ್ಸ್‌ಕ್ಲೂಸಿವ್ ಸ್ಪೈ ಷಾಟ್ಸ್ ಚಿತ್ರಗಳನ್ನು ಡ್ರೈವ್ ಸ್ಪಾರ್ಕ್ ನಿಮಗಾಗಿ ಸಾದರಪಡಿಸುತ್ತಿದೆ.

ಬೆಂಗಳೂರಿನಲ್ಲಿ ಸೆರೆಸಿಕ್ಕಳು ಸೈಲ್ ಸುಂದರಿ

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಷೆವರ್ಲೆ ಸೈಲ್ ಸೆಡಾನ್ ಸೆರೆಸಿಕ್ಕಿದ್ದಾಳೆ. ತಾಂತ್ರಿಕ ಪರೀಕ್ಷೆಗಾಗಿ ರಸ್ತೆಗಿಳಿದಿದ್ದ ಷೆವರ್ಲೆ ಸೈಲ್ ವಿವಿಧ ವರ್ಣಗಳಿಂದ ಮಾರೆಮಾಚಲಾಗಿತ್ತು. ಕಾರಿನ ಎದುರಗಡೆಯ ವಿನ್ಯಾಸವು ಸೈಲ್ ಯು-ವಿಎ ಮಾಡೆಲ್‌ಗೆ ಸಾಮ್ಯತೆ ಹೊಂದಿದೆ.

ಬೆಂಗಳೂರಿನಲ್ಲಿ ಸೆರೆಸಿಕ್ಕಳು ಸೈಲ್ ಸುಂದರಿ

ಷೆವರ್ಲೆ ಸೈಲ್ ರಿಯರ್ ಡಿಸೈನ್ ಬಗ್ಗೆಯೊಮ್ಮೆ ಗಮನವಹಿಸಿರಿ. ಬೂಟ್ ಸ್ಪೇಸ್ ಹೆಚ್ಚು ಇಲ್ಲದಿದ್ದರೂ ದೈನಂದಿನ ಬಳಕೆಗೆ ನೆರವಾಗುವ ರೀತಿಯಲ್ಲಿದೆ.

ಬೆಂಗಳೂರಿನಲ್ಲಿ ಸೆರೆಸಿಕ್ಕಳು ಸೈಲ್ ಸುಂದರಿ

ನೀವೀಗ ಷೆವರ್ಲೆ ಸೈಲ್ ಸೆಡಾನ್ ಫ್ರಂಟ್ ಲುಕ್ ಬಗ್ಗೆ ಗಮನವಹಿಸಿರಿ. ಇದು ಷೆವರ್ಲೆ ಸೈಲ್ ಯು-ವಿಎ ಕಾರಿಗೆ ಹೆಚ್ಚು ಸಾಮ್ಯತೆಯನ್ನು ಹೊಂದಿದೆ.

ಬೆಂಗಳೂರಿನಲ್ಲಿ ಸೆರೆಸಿಕ್ಕಳು ಸೈಲ್ ಸುಂದರಿ

ಚೀನಾದಲ್ಲಿ ಸೈಲ್ ಸೆಡಾನ್ ಅನ್ನು ಜನರಲ್ ಮೋಟಾರ್ಸ್ ಅಭಿವೃದ್ಧಿಪಡಿಸಿದೆ. ಹ್ಯಾಚ್‌ಬ್ಯಾಕ್ ಕಾರುಗಳಿಗೆ ಭಾರಿ ಬೇಡಿಕೆಯಿರುವುದನ್ನು ಗಮನಸಿ ಸೈಲ್ ಯು-ವಿಎ ಭಾರತದಲ್ಲಿ ಮೊದಲು ಬಿಡುಗಡೆಗೊಳಿಸಲಾಗಿತ್ತು.

ಬೆಂಗಳೂರಿನಲ್ಲಿ ಸೆರೆಸಿಕ್ಕಳು ಸೈಲ್ ಸುಂದರಿ

ಮುಂದಿನ ವರ್ಷ ಸೈಲ್ ಸೆಡಾನ್ ಭಾರತ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಈ ಮೂಲಕ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಟೊಯೊಟಾ ಎಟಿಯಾಸ್ ಹಾಗೂ ಹೊಂಡಾದ ಮುಂಬರುವ ಅಮೆಜ್ ಸೆಡಾನ್‌ಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.

More from DriveSpark

Article Published On: Thursday, November 29, 2012, 15:23 [IST]
English summary
The Chevrolet Sail sedan is by a long distance the most anticipated new car from the American carmaker in India. The extended version of the recently launched Sail U-VA, the Sail sedan has been on its way towards launch and here are some exclusive spy shots for the readers of Drivespark.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+